Pro Kabaddi 2022: ಯು ಮುಂಬಾಗೆ ಪಲ್ಟಿ ಹೊಡೆಸಲು ಪುಣೇರಿ ಪಲ್ಟನ್ಸ್ ಪ್ಲ್ಯಾನ್.. ಇಬ್ಬರಿಗೂ ಗೆಲ್ಲೋದು ಅನಿವಾರ್ಯ!
ಇಂದು ಕೂಡ ರಣರೋಚಕ ಪಂದ್ಯ ನಡೆಯಲಿದೆ. ಯು ಮುಂಬಾಗೆ ಪಲ್ಟಿ ಹೊಡೆಸಲು ಪುಣೇರಿ ಪಲ್ಟನ್ಸ್ ಸಜ್ಜಾಗಿ ನಿಂತಿದೆ. ಇಬ್ಬರಿಗೂ ಗೆಲುವು ಅನಿವಾರ್ಯವಾಗಿದೆ. ಹೀಗಾಗಿ ಇಂದಿನ ಪಂದ್ಯ ಸಾಕಷ್ಟು ರೋಚಕತೆಯಿಂದ ಕೂಡಿರಲಿದೆ.
ಪ್ರೋ ಕಬಡ್ಡಿ 2022 ಟೂರ್ನಿ ಆರಂಭವಾಗಿ ಮುಕ್ಕಾಲು ಪಂದ್ಯಗಳು ನಡೆದಿದೆ. ಹಲವು ಕಾದಾಟ, ರಣ ರೋಚಕ ಪಂದ್ಯಗಳಿಗೆ ಈ ಬಾರಿಯ ಕಬಡ್ಡಿ ಟೂರ್ನಿ(Kabaddi Tournament) ಸಾಕ್ಷಿಯಾಗಿತ್ತು.
2/ 6
ಒಟ್ಟು 12 ಟೀಂಗಳು ಈ ಬಾರಿಯ ಕಬಡ್ಡಿ ಲೀಗ್ನಲ್ಲಿ ಭಾಗಿಯಾಗಿವೆ. ಇಲ್ಲಿಯವರೆಗೂ ಒಟ್ಟು 86 ಪಂದ್ಯಗಳು ನಡೆದಿವೆ. ಕೊರೋನಾ ಕಾರ್ಮೋಡದ ನಡುವೆಯೂ ಪ್ರೋ ಕಬಡ್ಡಿ ಟೂರ್ನಿಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.
3/ 6
ಇಂದು ಕೂಡ ರಣರೋಚಕ ಪಂದ್ಯ ನಡೆಯಲಿದೆ. ಯು ಮುಂಬಾಗೆ ಪಲ್ಟಿ ಹೊಡೆಸಲು ಪುಣೇರಿ ಪಲ್ಟನ್ಸ್ ಸಜ್ಜಾಗಿ ನಿಂತಿದೆ. ಇಬ್ಬರಿಗೂ ಗೆಲುವು ಅನಿವಾರ್ಯವಾಗಿದೆ. ಹೀಗಾಗಿ ಇಂದಿನ ಪಂದ್ಯ ಸಾಕಷ್ಟು ರೋಚಕತೆಯಿಂದ ಕೂಡಿರಲಿದೆ.
4/ 6
ಕಳೆದ ಸೀಸನ್ಗಳಲ್ಲಿ ಅಬ್ಬರಿಸಿದ್ದ ಯು ಮುಂಬಾ ಈ ಸೀಸನ್ನಲ್ಲಿ ಲಯ ಕಳೆದುಕೊಂಡಿದೆ. ಇಲ್ಲಿವರೆಗೂ 14 ಪಂದ್ಯಗಳನ್ನು ಆಡಿದ್ದು, 5 ಪಂದ್ಯಗಳಲ್ಲಿ ಮಾತ್ರ ಗೆದ್ದಿದೆ. 4 ಪಂದ್ಯಗಳಲ್ಲಿ ಸೋಲನುಭವಿಸಿದೆ. ಪಾಯಿಂಟ್ಸ್ ಟೇಬಲ್ನಲ್ಲಿ 5ನೇ ಸ್ಥಾನದಲ್ಲಿದೆ.
5/ 6
ಇನ್ನೂ ಟೂರ್ನಿಯಲ್ಲಿ ಮೊದಲಿನಿಂದಲೂ ಲಯ ಕಳೆದುಕೊಂಡಿರುವ ಪುಣೇರಿ ಪಲ್ಟನ್ಸ್ ಗೆಲುವಿಗಾಗಿ ಕಾದು ನೋಡುತ್ತಿದೆ. 14 ಪಂದ್ಯಗಳಲ್ಲಿ 7 ಪಂದ್ಯದಲ್ಲಿ ಗೆದ್ದಿದೆ, 7 ಪಂದ್ಯದಲ್ಲಿ ಸೋಲನುಭವಿಸಿದೆ. 7 ಪಂದ್ಯದಲ್ಲಿ ಗೆದ್ದಿದ್ದು, ಪಾಯಿಂಟ್ಸ್ ಟೇಬಲ್ನಲ್ಲಿ 11ನೇ ಸ್ಥಾನದಲ್ಲಿದೆ.
6/ 6
ಎರಡು ಟೀಮ್ಗಳಿಗೂ ಗೆಲ್ಲುವುದು ಅನಿವಾರ್ಯ. ಹೀಗಾಗಿ ಇಂದಿನ ಪಂದ್ಯ ರೋಚಕತೆಯಿಂದ ಕೂಡಿರಲಿದೆ. ಈಗಾಗಲೇ ಮುಕ್ಕಾಲು ಭಾಗದಷ್ಟು ಪಂದ್ಯಗಳು ಮುಗುದಿವೆ.