Pro Kabaddi: ಯು ಮುಂಬಾಗೆ ಮನೆ ದಾರಿ ತೋರಿಸಲು ಸಜ್ಜಾದ ಪಾಟ್ನಾ ಪೈರೇಟ್ಸ್.. ವಿಜಯಲಕ್ಷ್ಮಿ ಯಾರ ಕಡೆ ಒಲಿಯುತ್ತಾಳೆ?
ಇಂದು ಎರಡು ಪಂದ್ಯಗಳು ನಡೆಯಲಿವೆ. ಮೊದಲಿಗೆ ಸಂಜೆ 7.30ಕ್ಕೆ ತಮಿಳು ತಲೈವಾಸ್ ಹಾಗೂ ಹರಿಯಾಣ ಸ್ಟೀಲರ್ಸ್ ನಡುವೆ ಕಾದಾಟ ನಡೆಯಲಿದೆ. ನಂತರ 8:30ಕ್ಕೆ ಯು ಮುಂಬಾ ವರ್ಸಸ್ ಪಾಟ್ನಾ ಪೈರೇಟ್ಸ್ ಕಾದಾಟ ನಡೆಸಲಿವೆ.
ಬೆಂಗಳೂರಿನಲ್ಲಿ ಎಂಟನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿ ನಡೆಯುತ್ತಿದ್ದು, ಇಂದು ಎರಡು ಪಂದ್ಯಗಳು ನಡೆಯಲಿವೆ. ಮೊದಲಿಗೆ ಸಂಜೆ 7.30ಕ್ಕೆ ತಮಿಳು ತಲೈವಾಸ್ ಹಾಗೂ ಹರಿಯಾಣ ಸ್ಟೀಲರ್ಸ್ ನಡುವೆ ಕಾದಾಟ ನಡೆಯಲಿದೆ. ನಂತರ 8:30ಕ್ಕೆ ಯು ಮುಂಬಾ ವರ್ಸಸ್ ಪಾಟ್ನಾ ಪೈರೇಟ್ಸ್ ಕಾದಾಟ ನಡೆಸಲಿವೆ.
2/ 5
ತಮಿಳ್ ತಲೈವಾಸ್ ತಂಡ ಒಟ್ಟು 16 ಪಂದ್ಯಗಳನ್ನಾಡಿದ್ದು, 5 ಪಂದ್ಯ ಗೆದ್ದು, 5ರಲ್ಲಿ ಸೋಲು ಕಂಡಿದೆ. 45 ಅಂಕಗಳೊಂದಿಗೆ ಟೇಬಲ್ನಲ್ಲಿ 8ನೇ ಸ್ಥಾನ ಪಡೆದುಕೊಂಡಿದೆ. ಲೀಗ್ ಹಂತದ ಬಳಿಕ ಪ್ಲೇ ಆಫ್ ಹಂತಕ್ಕೆ ತಂಡ ಹೋಗಬೇಕೆಂದರೆ ಉಳಿದ ಪಂದ್ಯಗಳನ್ನು ಗೆಲ್ಲಲೇಬೇಕಾದ ಅನಿವಾರ್ಯ ಉಂಟಾಗಿದೆ.
3/ 5
ಇನ್ನೂ ತಮಿಳು ತಲೈವಾಸ್ಗೆ ಸವಾಲೊಡ್ಡಿರುವ ಹರಿಯಾಣ ಸ್ಟೀಲರ್ಸ್ ತಂಡ ಆಡಿರುವ 17 ಪಂದ್ಯದಲ್ಲಿ 8ರಲ್ಲಿ ಗೆದ್ದು, 6ರಲ್ಲಿ ಸೋತಿದೆ. 53 ಅಂಕಗಳಿಸಿ 4ನೇ ಸ್ಥಾನದಲ್ಲಿದೆ. ಹೀಗಾಗಿ ಇಂದಿನ ಪಂದ್ಯ ರಣರೋಚಕತೆಯಿಂದ ಕೂಡಿರಲಿದೆ.
4/ 5
ಯು ಮುಂಬಾ ತಂಡ 16 ಪಂದ್ಯಗಳನ್ನಾಡಿದ್ದು, 6ರಲ್ಲಿ ಗೆದಿದೆ. 5 ಪಂದ್ಯಗಳನ್ನು ಸೋತಿದ್ದು, 48 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್ 6ನೇ ಸ್ಥಾನದಲ್ಲಿದೆ. ಮುಂದಿನ ಹಂತಕ್ಕೆ ಈ ತಂಡ ಪ್ರವೇಶ ಪಡೆಯುವುದು ಬಹಳ ಕಷ್ಟ ಎಂದು ಹೇಳಲಾಗುತ್ತಿದೆ.
5/ 5
ಯು ಮುಂಬಾಗೆ ಮತ್ತೆ ಶಾಕ್ ಕೊಡುವುದಕ್ಕೆ ಪಾಟ್ನಾ ಪೈರೆಟ್ಸ್ ತಂಡ ಸಜ್ಜಾಗಿದೆ. ಪಾಟ್ನಾ ಪೈರೆಟ್ಸ್ ತಂಡ 16 ಪಂದ್ಯಗಳನ್ನಾಡಿದ್ದು, 11 ಪಂದ್ಯಗಳಲ್ಲಿ ಗೆದ್ದು ಬೀಗಿದೆ. ಕೇವಲ ನಾಲ್ಕು ಪಂದ್ಯಗಳಲ್ಲಿ ಸೋತಿದೆ. ಒಟ್ಟು 60 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್ನಲ್ಲಿ ಮೊದಲನೇ ಸ್ಥಾನವನ್ನು ಅಲಂಕರಿಸಿದೆ.