PKL 8- ಪ್ರೋ ಕಬಡ್ಡಿ ಲೀಗ್​ನ ಅತಿ ದುಬಾರಿ 10 ಆಟಗಾರರು ಇವರು

ಕ್ರಿಕೆಟ್ ನಂತರ ಭಾರತದಲ್ಲಿ ಅತಿ ಹೆಚ್ಚು ಜನಾಕರ್ಷಣೆಯ ಕ್ರೀಡೆ ಎಂದರೆ ಕಬಡ್ಡಿ, ಐಪಿಎಲ್ ಮಾದರಿಯಲ್ಲಿ ರೂಪಿತಗೊಂಡಿರುವ ಪ್ರೋ ಕಬಡ್ಡಿ ಲೀಗ್​ನ ಯಶಸ್ಸೇ ಇದಕ್ಕೆ ಸಾಕ್ಷಿ. ಈ ಬಾರಿಯ ಪಿಕೆಎಲ್​ನಲ್ಲಿ ಪ್ರದೀಪ್ ನರ್ವಾಲ್ ದಾಖಲೆಯ ಬೆಲೆಗೆ ಮಾರಾಟವಾಗಿದ್ದಾರೆ. ಇಲ್ಲಿ ಟಾಪ್ 10 ದುಬಾರಿ ಆಟಗಾರರ ಪಟ್ಟಿದೆ.

  • News18
  • |
First published:

  • 110

    PKL 8- ಪ್ರೋ ಕಬಡ್ಡಿ ಲೀಗ್​ನ ಅತಿ ದುಬಾರಿ 10 ಆಟಗಾರರು ಇವರು

    ಪ್ರದೀಪ್ ನರ್ವಾಲ್ (Pradeep Narwal): ಕ್ರಿಕೆಟ್ ಹೊರತುಪಡಿಸಿ ಇತರ ಕ್ರೀಡೆಗಳಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಬಿಕರಿಯಾದ ಭಾರತೀಯ ಇವರು. ಪಿಕೆಎಲ್ ಸೀಸನ್ 8ರ ಆಟಗಾರರ ಹರಾಜಿನಲ್ಲಿ ಪ್ರದೀಪ್ ನರವಾಲ್ 1.65 ಕೋಟಿ ರೂಪಾಯಿಗೆ ಮಾರಾಟವಾದರು. ಯುಪಿ ಯೋದ್ಧಾ ತಂಡಕ್ಕೆ ಇವರು ಸೇರ್ಪಡೆಯಾಗಿದ್ದಾರೆ. ದೇಶದ ಅತ್ಯುತ್ತಮ ರೇಡರ್ಗಳಲ್ಲಿ ಪ್ರದೀಪ್ ಕೂಡ ಒಬ್ಬರು. ಕಳೆದ ಸೀಸನ್ನಲ್ಲಿ ಇವರು ಪಟ್ನಾ ಪೈರೇಟ್ಸ್ ತಂಡದಲ್ಲಿದ್ದರು.

    MORE
    GALLERIES

  • 210

    PKL 8- ಪ್ರೋ ಕಬಡ್ಡಿ ಲೀಗ್​ನ ಅತಿ ದುಬಾರಿ 10 ಆಟಗಾರರು ಇವರು

    ಸಿದ್ಧಾರ್ಥ್ ದೇಸಾಯಿ (Siddharth Desai): ತೆಲುಗು ಟೈಟಾನ್ಸ್ ತಂಡ 1.3 ಕೋಟಿ ರೂ ಕೊಟ್ಟು ಇವರನ್ನ ಖರೀದಿಸಿದೆ. ಇವರೂ ಕೂಡ ಅದ್ಭುತ ರೇಡರ್ ಎನಿಸಿದ್ದಾರೆ. ಕಳೆದ ಸೀಸನ್ನಲ್ಲಿ ಇವರು ಯು ಮುಂಬಾದಲ್ಲಿ ಮಿಂಚಿದ್ದರು.

    MORE
    GALLERIES

  • 310

    PKL 8- ಪ್ರೋ ಕಬಡ್ಡಿ ಲೀಗ್​ನ ಅತಿ ದುಬಾರಿ 10 ಆಟಗಾರರು ಇವರು

    ಅರ್ಜುನ್ ದೇಶವಾಲ್ (Arjun Deshwal): ರೇಡರ್ ಆಗಿರುವ ಇವರನ್ನ ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡ 96 ಲಕ್ಷ ರೂ ಕೊಟ್ಟು ಖರೀದಿಸಿದೆ. ಮೂಲ ಬೆಲೆ 20 ಲಕ್ಷ ಇದ್ದರೂ ಹರಾಜಿನಲ್ಲಿ ಇವರಿಗೆ ಭಾರೀ ಡಿಮ್ಯಾಂಡ್ ಇತ್ತು.

    MORE
    GALLERIES

  • 410

    PKL 8- ಪ್ರೋ ಕಬಡ್ಡಿ ಲೀಗ್​ನ ಅತಿ ದುಬಾರಿ 10 ಆಟಗಾರರು ಇವರು

    ಮಂಜೀತ್ ದಾಹ್ಯಾ (Manjeeth Dahya): ಅತ್ಯುತ್ತಮ ರೇಡರ್ ಎನಿಸಿರುವ ಮಂಜೀತ್ ಅವರು ತಮಿಳ್ ತಲೈವಾಸ್ ತಂಡಕ್ಕೆ 92 ಲಕ್ಷ ರೂಗೆ ಮಾರಾಟವಾಗಿದ್ದಾರೆ. ಕಳೆದ ವರ್ಷ ಇವರು ಪುಣೇರಿ ಪಲ್ಟಾನ್ಸ್ ತಂಡದಲ್ಲಿದ್ದರು.

    MORE
    GALLERIES

  • 510

    PKL 8- ಪ್ರೋ ಕಬಡ್ಡಿ ಲೀಗ್​ನ ಅತಿ ದುಬಾರಿ 10 ಆಟಗಾರರು ಇವರು

    ಸಚಿನ್ ತನ್ವರ್ (Sachin Tanwar): ಮೂರು ಬಾರಿ ಚಾಂಪಿಯನ್ ಪಟ್ನಾ ಪೈರೇಟ್ಸ್ ತಂಡ 84 ಲಕ್ಷ ರೂ ಕೊಟ್ಟು ರೇಡರ್ ಸಚಿನ್ ತನ್ವರ್ ಅವರನ್ನ ಖರೀದಿಸಿದೆ.

    MORE
    GALLERIES

  • 610

    PKL 8- ಪ್ರೋ ಕಬಡ್ಡಿ ಲೀಗ್​ನ ಅತಿ ದುಬಾರಿ 10 ಆಟಗಾರರು ಇವರು

    ರೋಹಿತ್ ಗುಲಿಯಾ (Rohit Gulia): ಆಲ್ರೌಂಡರ್ ಆಗಿರುವ ಇವರನ್ನ ಹರ್ಯಾಣ ಸ್ಟೀಲರ್ಸ್ 83 ಲಕ್ಷಕ್ಕೆ ಕೊಂಡುಕೊಂಡಿದೆ.

    MORE
    GALLERIES

  • 710

    PKL 8- ಪ್ರೋ ಕಬಡ್ಡಿ ಲೀಗ್​ನ ಅತಿ ದುಬಾರಿ 10 ಆಟಗಾರರು ಇವರು

    ಚಂದ್ರನ್ ರಂಜಿತ್ (Chandran Ranjith): ಪ್ರತಿಭಾನ್ವಿತ ರೇಡರ್ ಎನಿಸಿರುವ ಇವರು ಬೆಂಗಳೂರು ಬುಲ್ಸ್ ಪಾಲಾಗಿದ್ದಾರೆ. ಹರಾಜಿನಲ್ಲಿ ಇವರಿಗೆ ಸಿಕ್ಕಿದ್ದು ಬರೋಬ್ಬರಿ 80 ಲಕ್ಷ ರೂ.

    MORE
    GALLERIES

  • 810

    PKL 8- ಪ್ರೋ ಕಬಡ್ಡಿ ಲೀಗ್​ನ ಅತಿ ದುಬಾರಿ 10 ಆಟಗಾರರು ಇವರು

    ರವೀಂದರ್ ಪಹಲ್ (Ravinder Pahal): ಸುರ್ಜೀತ್ ಬಿಟ್ಟರೆ ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾದ ಡಿಫೆಂಡರ್ ರವೀಂದರ್ ಪಹಲ್. ಗುಜರಾತ್ ಜೈಂಟ್ಸ್ ತಂಡ ಇವರ ಖರೀದಿಗಾಗಿ 74 ಲಕ್ಷ ರೂ ವ್ಯಯಿಸಿದೆ.

    MORE
    GALLERIES

  • 910

    PKL 8- ಪ್ರೋ ಕಬಡ್ಡಿ ಲೀಗ್​ನ ಅತಿ ದುಬಾರಿ 10 ಆಟಗಾರರು ಇವರು

    ಶ್ರೀಕಾಂತ್ ಜಾಧವ್ (Shrikanth Jadhav): ಯುಪಿ ಯೋದ್ಧಾ ತಂಡ 72 ಲಕ್ಷ ರೂಪಾಯಿಗೆ ಇವರನ್ನ ಖರೀದಿಸಿದೆ.

    MORE
    GALLERIES

  • 1010

    PKL 8- ಪ್ರೋ ಕಬಡ್ಡಿ ಲೀಗ್​ನ ಅತಿ ದುಬಾರಿ 10 ಆಟಗಾರರು ಇವರು

    ಸುರ್ಜೀತ್ ಸಿಂಗ್ (Surjeeth Singh): ಅತಿ ಹೆಚ್ಚು ಬೆಲೆ ಸೇಲ್ ಆದ ಡಿಫೆಂಡರ್ ಇವರು. ತಮಿಳ್ ತಲೈವಾಸ್ ತಂಡ 75 ಲಕ್ಷಕ್ಕೆ ಇವರನ್ನ ಸೇರಿಸಿಕೊಂಡಿದೆ.

    MORE
    GALLERIES