ಭಾರತ ತಂಡದ ಬಿರುಸಿನ ಆರಂಭಿಕ ಆಟಗಾರ ಶಿಖರ್ ಧವನ್ ಇಂದು ತಮ್ಮ 37ನೇ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಗಬ್ಬರ್ ಸ್ಟೈಲ್ನಿಂದ ಅಭಿಮಾನಿಗಳ ನೆಚ್ಚಿನ ಆಟಗಾರರಾದ ಧವನ್, ತಮ್ಮ ಬ್ಯಾಟಿಂಗ್ ಮತ್ತು ಸ್ಟೈಲ್ಗೆ ಹೆಸರುವಾಸಿಯಾಗಿದ್ದಾರೆ.
2/ 8
ಶಿಖರ್ ಧವನ್ 14 ಮಾರ್ಚ್ 2013 ರಂದು ಟೆಸ್ಟ್ಗೆ ಪಾದಾರ್ಪಣೆ ಮಾಡಿದರು. ಚೊಚ್ಚಲ ಪಂದ್ಯದಲ್ಲೇ 174 ಎಸೆತಗಳಲ್ಲಿ 187 ರನ್ ಗಳಿಸಿ ಚೊಚ್ಚಲ ಪಂದ್ಯದಲ್ಲೇ ಅತಿ ವೇಗದ ಶತಕ ಸಿಡಿಸಿದ ದಾಖಲೆ ಬರೆದರು. ಅಲ್ಲದೇ ಶಿಖರ್ ಧವನ್ಗೆ ಅವರ ಕೋಚ್ ವಿಜಯ್ ದಹಿಯಾ ಅವರು ಗಬ್ಬರ್ ಎಂಬ ಹೆಸರನ್ನು ನೀಡಿದ್ದರಂತೆ.
3/ 8
ಶಿಖರ್ ರವರು ದಶಂಬರ 05,1985ರಂದು ದೆಹಲಿಯಲ್ಲಿ ಸುನೈನ ಹಾಗು ಮಹೇಂದ್ರ ಪಾಲ್ ಧವನ್ ದಂಪತಿಗೆ ಜನಿಸಿದರು. ಇನ್ನು, ಧವನ್ ಅಕ್ಟೋಬರ್ 20, 2010ರಲ್ಲಿ ವಿಶಾಖಪಟ್ಟನಮ್ನಲ್ಲಿ ಆಸ್ಟ್ರೇಲಿಯಾ ವಿರುದ್ದ ನಡೆದ ಎರಡನೇ ಏಕದಿನ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು.
4/ 8
ಶಿಖರ್ ಧವನ್ ತನಗಿಂತ 10 ವರ್ಷ ಹಿರಿಯ ಹಾಗೂ ಇಬ್ಬರು ಮಕ್ಕಳ ತಾಯಿ ಆಯೇಷಾ ಎನ್ನುವರನ್ನು ವಿವಾಹವಾಗಿದ್ದರು. ಆದರೆ ಕಳೆದ ವರ್ಷ ಈ ಜೋಡಿ ವಿಚ್ಛೇದನ ಪಡೆಯುವ ಮೂಲಕ ದೂರವಾಗಿದ್ದಾರೆ. ಇಬ್ಬರೂ ಫೇಸ್ ಬುಕ್ ಮೂಲಕ ಭೇಟಿಯಾಗಿದ್ದರು. ಇದಾದ ಬಳಿಕ 2012ರಲ್ಲಿ ಇಬ್ಬರೂ ವಿವಾಹವಾದರು.
5/ 8
ಫೇಸ್ ಬುಕ್ ಮೂಲಕ ಶುರುವಾದ ಪ್ರೇಮಕಥೆಯ ಅಂತ್ಯದ ಸುದ್ದಿ ಇನ್ ಸ್ಟಾಗ್ರಾಮ್ ಮೂಲಕ ಸಿಗುತ್ತದೆ ಎಂದು ಯಾರೂ ಅಂದುಕೊಂಡಿರಲಿಲ್ಲ. ದಂಪತಿಗಳು 2012 ರಲ್ಲಿ ಪರಸ್ಪರರ ಕೈ ಹಿಡಿದಿದ್ದರು ಮತ್ತು 2014 ರಲ್ಲಿ ಮಗ ಜೋರಾವರ್ ಜನಿಸಿದರು. 9 ವರ್ಷಗಳ ಸಂಬಂಧದಲ್ಲಿದ್ದ ನಂತರ, ಆಯೇಶಾ ವಿಚ್ಛೇದನದ ಬಗ್ಗೆ ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ತಿಳಿಸಿದರು.
6/ 8
ಶಿಖರ್ ಧವನ್ ಸದ್ಯ ಒಂಟಿಯಾಗಿದ್ದಾರೆ. ವಿಚ್ಛೇದನದ ನಂತರ, ಅವರು ಇದೀಗ ಯಾವುದೇ ಹೊಸ ಸಂಬಂಧದಲ್ಲಿಲ್ಲ. ಸದ್ಯ ಅವರು ಕಿವೀಸ್ ವಿರುದ್ಧದ ಏಖದಿನ ತಂಢದ ನಾಯಕರಾಗಿ ತಂಡವನ್ನು ಮುನ್ನಡೆಸಿದ್ದರು.
7/ 8
ಶಿಖರ್ ಧವನ್ ಈವರೆಗೆ ಭಾರತ ಪರ 34 ಟೆಸ್ಟ್, 164 ODI ಮತ್ತು 68 T20 ಪಂದ್ಯಗಳನ್ನು ಆಡಿದ್ದಾರೆ. ಧವನ್ ಟೆಸ್ಟ್ ಪಂದ್ಯಗಳಲ್ಲಿ 2315 ರನ್, ಏಕದಿನದಲ್ಲಿ 6775 ರನ್ ಮತ್ತು ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 1759 ರನ್ ಗಳಿಸಿದ್ದಾರೆ. ಈ ಬ್ಯಾಟ್ಸ್ಮನ್ ಹೆಸರಿನಲ್ಲಿ 24 ಶತಕಗಳಿವೆ.
8/ 8
ಅದೇ ರೀತಿ ಧವನ್ ಐಪಿಎಲ್ನಲ್ಲಿಯೂ ಭರ್ಜರಿ ಬ್ಯಾಟಿಂಗ್ ಮಾಡುವ ಆಟಗಾರ ಎನ್ನಬಹುದು. ಈವರೆಗೂ ಐಪಿಎಲ್ನಲ್ಲಿ ಧವನ್ ಒಟ್ಟು 206 ಪಂದ್ಯಗಳಿಂದ 6244 ರನ್ ಗಳಿಸಿದ್ದು, ಇದರಲ್ಲಿ ಭರ್ಜರಿ 2 ಶತಕಗಳು ಹಾಗೂ 47 ಅರ್ಧಶತಕಗಳೂ ಸೇರಿವೆ.