HBD Ravindra Jadeja: ಟೀಂ ಇಂಡಿಯಾದ ಫೇವರೇಟ್ ಆಲ್ರೌಂಡರ್ಗೆ ಇಂದು ಜನ್ಮದಿನ ಸಂಭ್ರಮ, ಗೆಟ್ ವೆಲ್ ಸೂನ್ ಜಡ್ಡು ಅಂತಿದ್ದಾರೆ ಫ್ಯಾನ್ಸ್
HBD Ravindra Jadeja: ಟೀಂ ಇಂಡಿಯಾದ ಸ್ಟೈಲಿಶ್ ಆಲ್ ರೌಂಡರ್ ರವೀಂದ್ರ ಜಡೇಜಾ ಕಡಿಮೆ ಸಮಯದಲ್ಲಿ ತಂಡದ ಪ್ರಮುಖ ಪ್ಲೇಯರ್ ಆಗಿ ಗುರುತಿಸಿಕೊಂಡಿದ್ದಾರೆ. ಅದ್ಭುತ ಬ್ಯಾಟಿಂಗ್ ಮತ್ತು ಅತ್ಯುತ್ತಮ ಫೀಲ್ಡಿಂಗ್ನಿಂದ ಇಂದಿಗೂ ಸಖತ್ ಮಿಂಚುತ್ತಿದ್ದಾರೆ.
ರವೀಂದ್ರ ಜಡೇಜಾ (Ravindra Jadeja) ಅವರ ಪೂರ್ಣ ಹೆಸರು ರವೀಂದ್ರಸಿನ್ಹ್ ಅನಿರುಧ್ ಸಿಂಗ್ ಜಡೇಜಾ. ಅವರನ್ನು ರಾಕ್ ಸ್ಟಾರ್ ಜಡ್ಡು ಮತ್ತು ಸರ್ ರವೀಂದ್ರ ಜಡೇಜಾ ಎಂದೂ ಕರೆಯುತ್ತಾರೆ. ಅವರು 6 ಡಿಸೆಂಬರ್ 1988 ರಂದು ಗುಜರಾತ್ ನಲ್ಲಿ ಜನಿಸಿದರು.
2/ 9
ಅವರು 2008 ರಲ್ಲಿ ಅಂಡರ್-19 ವಿಶ್ವಕಪ್ ಗೆದ್ದ ತಂಡದ ಭಾಗವಾಗಿದ್ದರು. ತಂಡದ ಗೆಲುವಿಗೆ ಗಣನೀಯ ಕೊಡುಗೆ ನೀಡಿದ ಜಡೇಜಾ ಅವರನ್ನು ಉಪನಾಯಕರನ್ನಾಗಿ ಮಾಡಲಾಯಿತು.
3/ 9
ಕ್ರಿಕೆಟ್ ಲೋಕದಲ್ಲಿ ಹೆಸರು ಗಳಿಸಿದ್ದ ರವೀಂದ್ರ ಜಡೇಜಾ ಅವರ ತಂದೆ ಕ್ರಿಕೆಟಿಗನಾಗುವುದು ಇಷ್ಟವಿರಲಿಲ್ಲ. ಮಗ ದೇಶಸೇವೆ ಮಾಡಲು ಸೇನಾಧಿಕಾರಿಯಾಗಬೇಕೆಂದು ತಂದೆ ಬಯಸಿದ್ದರು.
4/ 9
ಫೆಬ್ರವರಿ 2009 ರಲ್ಲಿ ಶ್ರೀಲಂಕಾ ವಿರುದ್ಧ ODI ಚೊಚ್ಚಲ ಪಂದ್ಯವನ್ನು ಆಡಿದರು. ಅದೇ ತಿಂಗಳಲ್ಲಿ ಶ್ರೀಲಂಕಾ ವಿರುದ್ಧ ತನ್ನ ಮೊದಲ T20 ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದರು. 2012-ಎಎಫ್ಪಿಯಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನು ಆಡಿದ್ದರು.
5/ 9
ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಮೂರು ಟ್ರಿಪಲ್ ಶತಕಗಳನ್ನು ಗಳಿಸಿದ ಏಕೈಕ ಭಾರತೀಯ ಬ್ಯಾಟ್ಸ್ಮನ್ ರವೀಂದ್ರ ಜಡೇಜಾ ಎಂಬ ದಾಖಲೆಯನ್ನು ಹೊಂದಿದ್ದಾರೆ. ಸದ್ಯ ಗಾಯದ ಸಮಸ್ಯೆಯಿಂದ ಟೀಂ ಇಂಡಿಯಾದಿಂದ ಜಡ್ಡು ದೂರವಿದ್ದಾರೆ.
6/ 9
2013 ರಲ್ಲಿ, ರವೀಂದ್ರ ಜಡೇಜಾ ಏಕದಿನ ಕ್ರಿಕೆಟ್ನಲ್ಲಿ ನಂಬರ್ 1 ಬೌಲರ್ ಆಗಿದ್ದರು. ಅವರು ಅನುಭವಿ ಅನಿಲ್ ಕುಂಬ್ಳೆ ನಂತರ ಈ ಸಾಧನೆ ಮಾಡಿದ ಎರಡನೇ ಭಾರತೀಯರಾದರು.
7/ 9
ಸೆಲೆಬ್ರಿಟಿಗಳು ಸಾಮಾನ್ಯವಾಗಿ ದುಬಾರಿ ವಾಹನಗಳನ್ನು ಇಷ್ಟಪಡುತ್ತಾರೆ ಆದರೆ ಜಡೇಜಾ ಅವರ ಆಯ್ಕೆ ಸಂಪೂರ್ಣವಾಗಿ ವಿಭಿನ್ನವಾಗಿದೆ. ಅವರ ಬಳಿ ದುಬಾರಿ ಕಾರುಗಳಷ್ಟೇ ಅಲ್ಲ, ಎರಡು ಕುದುರೆಗಳೂ ಇವೆ. ಈ ಆಲ್ ರೌಂಡರ್ ಕುದುರೆಗಳನ್ನು ತುಂಬಾ ಪ್ರೀತಿಸುತ್ತಾರೆ.
8/ 9
ಜಡೇಜಾ ಅವರನ್ನು ಸರ್ ರವೀಂದ್ರ ಜಡೇಜಾ ಎಂದೂ ಕರೆಯುತ್ತಾರೆ ಆದರೆ ಅವರಿಗೆ ಹೆಸರಿಟ್ಟವರು ಯಾರು ಎಂದು ನಿಮಗೆ ತಿಳಿದಿದೆಯೇ? ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ 2013 ರಲ್ಲಿ ಜಡೇಜಾಗೆ ಈ ಹೆಸರನ್ನು ನೀಡಿದ್ದರು.
9/ 9
ಇಂದು ಜಡೇಜಾ ಜೊತೆ ಟೀಂ ಇಂಡಿಯಾದ ಮತ್ತೊಬ್ಬ ಯುವ ಬ್ಯಾಟ್ಸ್ಮನ್ ಶ್ರೇಯಸ್ ಅಯ್ಯರ್ ಅವರ ಜನ್ಮದಿನ ಸಹ ಹೌದು. ಅವರು 1994 ಡಿಸೆಂಬರ್ 6ರಂದು ಜನಸಿದರು. ಇಂದು ಅಯ್ಯರ್ ತಮ್ಮ 28ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.