ಇನ್ನು, ಉಸೇನ್ ಬೋಲ್ಟ್ ಈ ವರ್ಷದಲ್ಲಿ ಮೊದಲ ಬಾರಿಗೆ ಅಥ್ಲೀಟ್ಗಳ ಬಗ್ಗೆ ಹೆಚ್ಚು ಬರೆಯಲ್ಪಟ್ಟವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರಲು ವಿಫಲರಾಗಿದ್ದಾರೆ. 2022 ರಲ್ಲಿ, ಭಾರತದ ಜಾವೆಲಿನ್ ತಾರೆ ನೀರಜ್ ಚೋಪ್ರಾ ಈ ಸ್ಥಾನವನ್ನು ಕಸಿದುಕೊಂಡಿದ್ದಾರೆ. ಬೋಲ್ಟ್ ಅವರು 2017 ರಲ್ಲಿ ನಿವೃತ್ತರಾಗಿದ್ದರೂ 100 ಮೀ ಮತ್ತು 200 ಮೀ ಓಟದಲ್ಲಿ ವಿಶ್ವ ದಾಖಲೆಯನ್ನು ಹೊಂದಿದ್ದಾರೆ. ಆದರೆ ಕಳೆದ ವರ್ಷ ನಡೆದ ಒಲಂಪಿಕ್ಸ್ನಲ್ಲಿ ನೀರಜ್ ಚೋಪ್ರಾ ಜಾವೇಲಿನ್ ಥ್ರೋದಲ್ಲಿ ಭಾರತದ ಪರ ಚಿನ್ನದ ಪದಕ ಗೆದ್ದಿದ್ದರು.