ಟೀಂ ಇಂಡಿಯಾ (Team India) ಆಟಗಾರ, ಕನ್ನಡಿಗ ಮಯಾಂಕ್ ಅಗರ್ವಾಲ್ (Mayank Agarwal) ಇಂದು ತಮ್ಮ 32ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅಭಿಮಾನಿಗಳು, ಕ್ರಿಕೆಟಿಗರಿಂದ ಹೆಮ್ಮೆಯ ಕನ್ನಡಿಗನಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
2/ 7
ಮಯಾಂಕ್ ಅನುರಾಗ್ ಅಗರ್ವಾಲ್ ಅವರು ಫೆ.16 1991ರಂದು ಕರ್ನಾಟಕದಲ್ಲಿ ಜನಿಸಿದರು. ಅವರು ಬಿಷಪ್ ಕಾಟನ್ ಬಾಲಕರ ಶಾಲೆ ಮತ್ತು ಬೆಂಗಳೂರಿನ ಜೈನ ವಿಶ್ವವಿದ್ಯಾಲಯದಲ್ಲಿ ತಮ್ಮ ಶಿಕ್ಷಣವನ್ನು ಮುಗಿಸಿದ್ದಾರೆ.
3/ 7
ಮಯಾಂಕ್ ಫೆಬ್ರವರಿ 2020 ರಲ್ಲಿ ನ್ಯೂಜಿಲೆಂಡ್ ವಿರುದ್ಧ ಪಾದಾರ್ಪಣೆ ಮಾಡಿದರು. ಮಯಾಂಕ್ ಅಗರ್ವಾಲ್ ಇದುವರೆಗೆ 21 ಟೆಸ್ಟ್ ಮತ್ತು ಐದು ODIಗಳನ್ನು ಆಡಿದ್ದಾರೆ. ಐಪಿಎಲ್‌ನಲ್ಲಿ ಅವರು 134.51 ಸ್ಟ್ರೈಕ್ ರೇಟ್‌ನಲ್ಲಿ 2331 ರನ್ ಗಳಿಸಿದ್ದಾರೆ.
4/ 7
ಡಿಸೆಂಬರ್ 2018 ರಲ್ಲಿ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ದಾಖಲೆಯ ಬ್ಯಾಟಿಂಗ್ ಮಾಡುವ ಮೂಲಕ ಚೊಚ್ಚಲ ಟೆಸ್ಟ್‌ನಲ್ಲಿ ಅರ್ಧ ಶತಕ ಸಿಡಿಸಿದರು. ಈ ಮೂಲಕ ಚೊಚ್ಚಲ ಪಂದ್ಯದದಲ್ಲಿ ಅರ್ಧಶತಕ ಗಳಿಸಿದ 76ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
5/ 7
ನವೆಂಬರ್ 2019 ರಲ್ಲಿ ಬಾಂಗ್ಲಾದೇಶದ ವಿರುದ್ಧದ ಮೊದಲ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ ಅವರು ಟೆಸ್ಟ್‌ನಲ್ಲಿ ತಮ್ಮ ಅತ್ಯಧಿಕ ಸ್ಕೋರ್ ದಾಖಲಿಸಿದರು. ಅವರು ಅಂದು 243 ರನ್‌ಗಳ ಅದ್ಭುತ ಸ್ಕೋರ್ ಗಳಿಸಿದರು.
6/ 7
ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ, ನವೆಂಬರ್ 2017 ರಲ್ಲಿ ಮಹಾರಾಷ್ಟ್ರ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ 304 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು.
7/ 7
2018ರ ಜೂನ್ 04ರಂದು ಮಯಾಂಕ್, ಆಶಿಕಾ ಅವರನ್ನು ವರಿಸಿದರು. ಈ ಮೂಲಕ ಕನ್ನಡಿಗ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಬೆಂಗಳೂರು ಪೊಲೀಸ್ ಆಯುಕ್ತರಾದ ಪ್ರವೀಣ್ ಸೂದ್ ಅವರ ಪುತ್ರಿ ಆಶಿಕಾ ಅವರನ್ನು ಮಾಯಾಂಕ್ ವಿವಾಹವಾಗಿದ್ದಾರೆ.