ಧೋನಿ.. ಕ್ರಿಕೆಟ್ ಲೋಕದಲ್ಲಿ ಈ ಹೆಸರಿಗೆ ಇರುವ ಕ್ರೇಜ್ ಬೇರೆ. ಧೋನಿ ತಮ್ಮದೇ ಆದ ಆಟದ ಶೈಲಿಯಿಂದ ಕ್ರಿಕೆಟ್ ಜಗತ್ತಿನಲ್ಲಿ ವಿಶೇಷ ಗುರುತನ್ನು ಗಳಿಸಿದ್ದಾರೆ. ಮೈದಾನದಲ್ಲಿ ಹೆಲಿಕಾಪ್ಟರ್ ಸಿಕ್ಸರ್ ಬಾರಿಸಿ ಪ್ರೇಕ್ಷಕರ ಮನಗೆದ್ದ ಮಿಸ್ಟರ್ ಕೂಲ್ ಗೆ ಅಸಂಖ್ಯಾತ ಅಭಿಮಾನಿಗಳಿದ್ದಾರೆ. 2007ನೇ ಇಸವಿಯಲ್ಲಿ ಎಂ ಎಸ್ ಧೋನಿ ಅವರನ್ನು ನಾಯಕರನ್ನಾಗಿ ನೇಮಕ ಮಾಡುವಂತೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಶಿಫಾರಸು ಮಾಡಿದ್ದರು.
2007ರಲ್ಲಿ ಟಿ20 ವಿಶ್ವಕಪ್ ಗೆದ್ದಿದ್ದು ಮತ್ತೊಂದು ವಿಶೇಷವಾಗಿತ್ತು. ಧೋನಿ ವಿಶ್ವದ ಅತ್ಯುತ್ತಮ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಯನ್ನೂ ತೋರಿದ್ದಾರೆ. ಇನ್ನು, ಕಪಿಲ್ ದೇವ್ ಬಳಿಕ ಭಾರತೀಯ ಸೇನೆಯಲ್ಲಿ ಗೌರವಾನ್ವಿತ ಲೆಫ್ಟಿನಂಟ್ ಕರ್ನಲ್ ಹುದ್ದೆ ಟೀಂ ಇಂಡಿಯಾದ ಎರಡನೇ ಕ್ರಿಕೆಟಿಗನಾಗಿದ್ದಾರೆ. 2011 ನವೆಂಬರ್ 01 ರಂದು ಧೋನಿಗೆ ಈ ಪದವಿ ನೀಡಿ ಗೌರವಿಸಲಾಗಿತ್ತು.
ಧೋನಿ ಅವರ ನಾಯಕತ್ವದಲ್ಲಿ ಬರೋಬ್ಬರಿ 28 ವರ್ಷಗಳ ಬಳಿಕ ಟೀಂ ಇಂಡಿಯಾ 2011ರಲ್ಲಿ ಐಸಿಸಿ ಏಕದಿನ ವಿಶ್ವಕಪ್ ಗೆದ್ದಿದೆ.ಆ ಒಂದು ಕ್ಷಣವನ್ನು ಭಾರತೀಯ ಕ್ರಿಕೆಟ್ ಅಭಿಮಾನಿಗಳು ಈಮದಿಗೂ ನೆನಪಿಸಿಕೊಳ್ಳುವಂತದ್ದಾಗಿದೆ. ಇನ್ನು, ಧೋನಿ ಸಾಕ್ಷಿ ಅವರನ್ನು ವಿವಾಹವಾಗಿದ್ದಾರೆ. ಧೋನಿ ಝೀವಾ ಎಂಬ ಮುದ್ದಾದ ಮಗಳಿದ್ದಾಳೆ. ನ್ಯೂಸ್ 18 ಕನ್ನಡದ ಕಡೆಯಿಂದ ಕ್ಯಾಪ್ಟನ್ ಕೂಲ್ ಧೋನಿ ಅವರಿಗೆ ಜನ್ಮದಿನದ ಶುಭಾಷಯಗಳು.