FIFA World Cup 2022: ಫಿಫಾ ವಿಶ್ವಕಪ್ 2022 ಗೆಲ್ಲೋದೂ ಇದೇ ತಂಡವಂತೆ! ಭವಿಷ್ಯ ನುಡಿದ ಟೈಂ ಟ್ರ್ಯಾವಲರ್, ನಿಜವಾಗುತ್ತಾ?
FIFA World Cup 2022: ಇತ್ತೀಚಿಗೆ ಟೈಮ್ ಟ್ರಾವೆಲರ್ಸ್ ಎಂದು ಹೇಳಿಕೊಳ್ಳುವ ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಭವಿಷ್ಯ ನುಡಿಯುತ್ತಿದ್ದಾರೆ. ಅದೇ ರೀತಿ ಫಿಫಾ ವಿಶ್ವಕಪ್ ವಿಜೇತರು ಯಾರು ಎಂದು ವ್ಯಕ್ತಿಯೊಬ್ಬರು ಹೇಳುತ್ತಿದ್ದಾರೆ.
ಟೈಮ್ ಟ್ರಾವೆಲರ್ ಸಾಧ್ಯವೇ ಎಂಬುದು ಶತಮಾನಗಳಿಂದಲೂ ಚರ್ಚೆಯಾಗಿದೆ. ಅನೇಕರು ವಿವಿಧ ರೀತಿಯಲ್ಲಿ ಪ್ರಯತ್ನಿಸಿ ವಿಫಲರಾಗಿದ್ದಾರೆ. ಇತ್ತೀಚೆಗಷ್ಟೇ ಮತ್ತೊಬ್ಬರು ಕೂಡ ಇದೇ ರೀತಿ ವಿಡಿಯೋ ಹಾಕಿದ್ದಾರೆ.. ಅದಕ್ಕೆ ಸಾಕ್ಷಿ ಇಲ್ಲಿದೆ.
2/ 7
ಈಗ ಕತಾರ್ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ನಲ್ಲಿ ಯಾರು ಗೆಲ್ಲುತ್ತಾರೆ ಎಂಬುದನ್ನು ಊಹಿಸುವ ವೀಡಿಯೊ ಎಂದು ಟೈಮ್ ಟ್ರಾವೆಲರ್ ಎಂಬಾತ ಒಬ್ಬ ಕ್ಲಿಪ್ ತೋರಿಸಿದ್ದಾರೆ. ಕೇವಲ 2 ಸೆಕೆಂಡ್ಗಳ ಆ ಕ್ಲಿಪ್ನಲ್ಲಿ ವಿಶ್ವಕಪ್ ಗೆದ್ದ ತಂಡ ಸಂಭ್ರಮಿಸುತ್ತಿದ್ದರೂ ಸೋತ ತಂಡ ಬೇಸರದಲ್ಲಿದೆ.
3/ 7
ಈ ವೀಡಿಯೊ ಟಿಕ್ ಟಾಕ್ನಲ್ಲಿ @worldcuptimetraveller ಖಾತೆಯಲ್ಲಿದೆ. ಅದರಲ್ಲಿ ಟೈಮ್ ಟ್ರಾವೆಲರ್ ಟಿವಿಯಲ್ಲಿ ಬರುವ ದೃಶ್ಯಗಳ 2 ಸೆಕೆಂಡ್ ಕ್ಲಿಪ್ ತೋರಿಸಿದ್ದಾರೆ.
4/ 7
ಯುರೋ 2020 ಫೈನಲ್ನಲ್ಲಿ ಇಂಗ್ಲೆಂಡ್ ಸೋಲುತ್ತದೆ ಎಂದು ಬಳಕೆದಾರರು ಈಗಾಗಲೇ ಹೇಳಿದ್ದು ನಿಜವಾಗಿತ್ತು. ಅಂತೆಯೇ, ಈಗ ಈ ಹೊಸ ದಾಗಿ 2022ರ ಫಿಫಾ ವಿಶ್ವಕಪ್ ಫೈನಲ್ನಲ್ಲಿ ಫ್ರಾನ್ಸ್ ಮತ್ತು ಬ್ರೆಜಿಲ್ ನಡುವೆ ಹೋರಾಟ ನಡೆಯಲಿದೆ ಎಂದು ಹೇಳಿದ್ದಾರೆ.
5/ 7
ಅಂತಿಮ ಪಂದ್ಯದಲ್ಲಿ ಫ್ರಾನ್ಸ್ ತಂಡವನ್ನು 2-1 ಗೋಲುಗಳಿಂದ ಸೋಲಿಸಿ ಬ್ರೆಜಿಲ್ ತಂಡ ವಿಜಯಿಯಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಅವರು ಬ್ರೆಜಿಲ್ ತಂಡ ವಿಶ್ವಕಪ್ ಅನ್ನು ಆಚರಿಸುತ್ತಿರುವ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ.
6/ 7
ಅಂತಿಮ ಪಂದ್ಯದಲ್ಲಿ, ಬ್ರೆಜಿಲ್ ತಂಡದಿಂದ ರಿಚಾರ್ಲಿಸನ್ ಮತ್ತು ಮಾರ್ಕಿನ್ಹಾಸ್ ಗೋಲು ಗಳಿಸಿದರೆ, ಆಂಟೊನಿ ಗ್ರೀಜ್ಮನ್ ಫ್ರೆಂಚ್ ತಂಡದಿಂದ ಗೋಲು ಗಳಿಸುತ್ತಾರೆ ಎಂದು ಹೇಳಲಾಗಿದೆ.
7/ 7
ಈ ವಿಡಿಯೋವನ್ನು 20 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಈ ಬಗ್ಗೆ ವಿಭಿನ್ನ ಅಭಿಪ್ರಾಯಗಳು ಕೇಳಿಬರುತ್ತಿವೆ. ಇದು ಹಳೆಯ ಆಚರಣೆಯ ಕ್ಲಿಪ್ ಆಗಿದೆ ಎಂದು ಅನೇಕರು ಕಾಮೆಂಟ್ ಮಾಡುತ್ತಿದ್ದಾರೆ. ಈ ಬಾರಿಯ ಫೈನಲ್ ಪಂದ್ಯ ಡಿಸೆಂಬರ್ 18ರಂದು ಲುಸೇಲ್ ಕ್ರೀಡಾಂಗಣದಲ್ಲಿ ನಡೆಯಲಿದೆ.