ಲಕ್ನೋ ಸೂಪರ್ ಜೈಂಟ್ಸ್ ಇದುವರೆಗೆ 4 ಪಂದ್ಯಗಳನ್ನು ಆಡಿದ್ದು ಮೂರರಲ್ಲಿ ಗೆದ್ದಿದೆ. ಆದರೆ. ಈ ನಾಲ್ಕೂ ಪಂದ್ಯಗಳಲ್ಲಿ ಕಠಿಣ ಹಂತದಲ್ಲಿ ಕ್ರೀಸ್ಗೆ ಬಂದ ಆಯುಷ್ ಬಡೋನಿ ಫಿನಿಶರ್ ಪಾತ್ರವನ್ನು ಉತ್ತಮವಾಗಿ ನಿರ್ವಹಿಸಿದರು. ತಂಡದಲ್ಲಿ ತಮ್ಮದೇ ಆದ ಛಾಪು ಮೂಡಿಸಿದರು. ಈ ವರ್ಷದ ಫೆಬ್ರವರಿಯಲ್ಲಿ ನಡೆದ ಹರಾಜಿನಲ್ಲಿ ಲಕ್ನೋ 20 ಲಕ್ಷ ಜ್ಞಕ್ಕೆ ಖರೀಧಿಸಿತ್ತು. ಅವರು ಈ ಋತುವಿನಲ್ಲಿ ಗುಜರಾತ್ ವಿರುದ್ಧದ ಮೊದಲ ಪಂದ್ಯದಲ್ಲಿ 54 ರನ್ ಗಳಿಸುವ ಮೂಲಕ ಚೊಚ್ಚಲ ಅರ್ಧಶತಕದೊಂದಿಗೆ ಪ್ರವೇಶ ಮಾಡಿದರು. ನಂತರ ಅವರು ಚೆನ್ನೈ, ಸನ್ರೈಸರ್ಸ್ ಮತ್ತು ಡೆಲ್ಲಿ ವಿರುದ್ಧದ ಪಂದ್ಯಗಳಲ್ಲಿ ತಮ್ಮ ಬ್ಯಾಟಿಂಗ್ ಮಾಡಿದ್ದಾರೆ.