ಟಿ20 ಕ್ರಿಕೆಟ್ನಲ್ಲಿ ಸಿಕಂದರ್ ರಾಜಾ ಅವರ ಅಂಕಿಅಂಶಗಳನ್ನು ಗಮನಿಸಿದರೆ, ಅವರು ಒಟ್ಟು 158 ಪಂದ್ಯಗಳನ್ನು ಆಡಿದ್ದಾರೆ. ಅವರು 129.81 ಸ್ಟ್ರೈಕ್ ರೇಟ್ನಲ್ಲಿ 3,109 ರನ್ ಗಳಿಸಿದ್ದಾರೆ. ಅವರು 19 ಟಿ20 ಅರ್ಧಶತಕಗಳನ್ನು ಗಳಿಸಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ರಾಝಾ 7.34 ಎಕಾನಮಿ ರೇಟ್ನೊಂದಿಗೆ 79 ವಿಕೆಟ್ಗಳನ್ನು kಬಳಿಸಿದ್ದಾರೆ. ರಾಜಾ ಈ ಹಿಂದೆ ಕೆರಿಬಿಯನ್ ಪ್ರೀಮಿಯರ್ ಲೀಗ್, ಪಾಕಿಸ್ತಾನ್ ಸೂಪರ್ ಲೀಗ್, ಮಜಾನ್ಸಿ ಸೂಪರ್ ಲೀಗ್ ಮತ್ತು ಬಾಂಗ್ಲಾದೇಶ ಪ್ರೀಮಿಯರ್ ಲೀಗ್ನಲ್ಲಿ ಆಡಿರುವ ಅನುಭವ ಹೊಂದಿದ್ದಾ್ರೆ. ಮೊದಲ ಐಪಿಎಲ್ ಸೀಸನ್ನಲ್ಲಿ ಅವರು ಹೇಗೆ ಆಡುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ.