Sachin Tendulkar: ರೇಷ್ಮೆ ಸೀರೆಯ ಮೇಲೆ ಮೂಡಿಬಂದ ಕ್ರಿಕೆಟ್​ ದೇವರ ಫೋಟೋ, ಅಭಿಮಾನಿ ಕಲೆಗೆ ಸಚಿನ್​ ಫಿದಾ

Sachin Tendulkar: ತೆಲಂಗಾಣ ಸಿರ್ಸಿಲ್ಲಾ ಪಟ್ಟಣದ ನೇಕಾರರು ಸಚಿನ್​ ಅವರ ಜನ್ಮದಿನದ ಅಂಗವಾಗಿ ಕೈಮಗ್ಗವನ್ನು ಬಳಸಿ ರೇಷ್ಮೆ ಸೀರೆಯ ಮೇಲೆ ಸಚಿನ್ ತೆಂಡೂಲ್ಕರ್ ಮತ್ತು ಅವರ ಪತ್ನಿ ಅಂಜಲಿಯ ಚಿತ್ರಗಳನ್ನು ನೇಯ್ದಿದ್ದಾರೆ.

First published:

  • 17

    Sachin Tendulkar: ರೇಷ್ಮೆ ಸೀರೆಯ ಮೇಲೆ ಮೂಡಿಬಂದ ಕ್ರಿಕೆಟ್​ ದೇವರ ಫೋಟೋ, ಅಭಿಮಾನಿ ಕಲೆಗೆ ಸಚಿನ್​ ಫಿದಾ

    ಭಾರತ ರತ್ನ ಪ್ರಶಸ್ತಿ ಪುರಸ್ಕೃತ, ಕ್ರಿಕೆಟ್​ ದೇವರು, ಲಿಟಲ್​ ಮಾಸ್ಟರ್​, ದಾಖಲೆಗಳ ಸರದಾರ ಹೇಳುತ್ತಾ ಹೋದರೆ ಮುಗಿಯದ ಬಿರುದುಗಳು. ಸಚಿನ್​ ತೆಂಡೂಲ್ಕರ್​ ಎಂದರೆ ಕ್ರಿಕೆಟ್​ ಲೋಕದಲ್ಲಿ ಮಾತ್ರವಲ್ಲದೇ ಪುಟಾಣಿ ಮಕ್ಕಳಿಗೂ ಚಿರಪರಿಚಿರು ಎಂದರೂ ತಪ್ಪಾಗಲಾರದು. ಅವರು ಇದೀಗ 50ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

    MORE
    GALLERIES

  • 27

    Sachin Tendulkar: ರೇಷ್ಮೆ ಸೀರೆಯ ಮೇಲೆ ಮೂಡಿಬಂದ ಕ್ರಿಕೆಟ್​ ದೇವರ ಫೋಟೋ, ಅಭಿಮಾನಿ ಕಲೆಗೆ ಸಚಿನ್​ ಫಿದಾ

    ಇದಕ್ಕಾಗಿ ಅವರಿಗೆ ಅವರ ಅಭಿಮಾನಿಯೊಬ್ಬರು ವಿಶೇಷ ರೀತಿಯಲ್ಲಿ ಉಡುಗೊರೆ ನೀಡಿದ್ದಾರೆ. ಇದನ್ನೂ ನೋಡಿ ಸಚಿನ್​ ಫ್ಯಾನ್ಸ್ ಸಖತ್​ ಸಂತಸ ವ್ಯಕ್ತಪಡಿಸಿದ್ದು, ತೆಲಂಗಾಣ ನೇಕಾರರು ಮಾಡಿದ ಈ ಕೆಲಸಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

    MORE
    GALLERIES

  • 37

    Sachin Tendulkar: ರೇಷ್ಮೆ ಸೀರೆಯ ಮೇಲೆ ಮೂಡಿಬಂದ ಕ್ರಿಕೆಟ್​ ದೇವರ ಫೋಟೋ, ಅಭಿಮಾನಿ ಕಲೆಗೆ ಸಚಿನ್​ ಫಿದಾ

    ಹೌದು, ತೆಲಂಗಾಣ ಸಿರ್ಸಿಲ್ಲಾ ಪಟ್ಟಣದ ನೇಕಾರರು ಸಚಿನ್​ ಅವರ ಜನ್ಮದಿನದ ಅಂಗವಾಗಿ ಕೈಮಗ್ಗವನ್ನು ಬಳಸಿ ರೇಷ್ಮೆ ಸೀರೆಯ ಮೇಲೆ ಸಚಿನ್ ತೆಂಡೂಲ್ಕರ್ ಮತ್ತು ಅವರ ಪತ್ನಿ ಅಂಜಲಿಯ ಚಿತ್ರಗಳನ್ನು ನೇಯ್ದಿದ್ದಾರೆ.

    MORE
    GALLERIES

  • 47

    Sachin Tendulkar: ರೇಷ್ಮೆ ಸೀರೆಯ ಮೇಲೆ ಮೂಡಿಬಂದ ಕ್ರಿಕೆಟ್​ ದೇವರ ಫೋಟೋ, ಅಭಿಮಾನಿ ಕಲೆಗೆ ಸಚಿನ್​ ಫಿದಾ

    ಈ ಅದ್ಭುತ ಗಿಫ್ಟ್​ನ್ನು ನೇಕಾರರಾದ ಎಲ್​​ಡಿ ಹರಿ ಪ್ರಸಾದ್ ಅವರು ಸಚಿನ್ ತೆಂಡೂಲ್ಕರ್ ಅವರ ಆತ್ಮೀಯ ಸ್ನೇಹಿತ ಚಾಮುಂಡೇಶ್ವರಿ ನಾಥ್ ಅವರಿಗೆ ಹಸ್ತಾಂತರಿಸಿದ್ದಾರೆ. ಅವರು ಗೋವಾದಲ್ಲಿ ಸಚಿನ್ ಮತ್ತು ಅವರ ಪತ್ನಿ ಅವರಿಗೆ ಅದ್ಭುತ ಕಲಾಕೃತಿಯನ್ನು ಪ್ರಸ್ತುತಪಡಿಸುವ ಭರವಸೆ ನೀಡಿದ್ದಾರೆ.

    MORE
    GALLERIES

  • 57

    Sachin Tendulkar: ರೇಷ್ಮೆ ಸೀರೆಯ ಮೇಲೆ ಮೂಡಿಬಂದ ಕ್ರಿಕೆಟ್​ ದೇವರ ಫೋಟೋ, ಅಭಿಮಾನಿ ಕಲೆಗೆ ಸಚಿನ್​ ಫಿದಾ

    47 ಇಂಚು ಅಗಲ ಮತ್ತು 60 ಇಂಚು ಎತ್ತರದ ರೇಷ್ಮೆ ದಾರಗಳು ಮತ್ತು 170 ಗ್ರಾಂ ಚಿನ್ನ ಮತ್ತು ಬೆಳ್ಳಿಯ ಎಳೆಗಳಿಂದ 290 ಗ್ರಾಂ ತೂಕದ ವಿಶೇಷ ನೇಯ್ಗೆ ಮಾಡಲಾಗಿದ್ದು, ಈ ಕಾರ್ಯಕ್ಕೆ 20 ದಿನಗಳನ್ನು ತೆಗೆದುಕೊಳ್ಳಲಾಗಿದೆ ಎಂದು ನ್ಯೂಸ್ 18ಗೆ ಹರಿ ಪ್ರಸಾದ್ ಹೇಳಿದ್ದಾರೆ.

    MORE
    GALLERIES

  • 67

    Sachin Tendulkar: ರೇಷ್ಮೆ ಸೀರೆಯ ಮೇಲೆ ಮೂಡಿಬಂದ ಕ್ರಿಕೆಟ್​ ದೇವರ ಫೋಟೋ, ಅಭಿಮಾನಿ ಕಲೆಗೆ ಸಚಿನ್​ ಫಿದಾ

    ಇತ್ತೀಚೆಗೆ ಭದ್ರಾಚಲಂನಲ್ಲಿ ನಡೆದ ಶ್ರೀರಾಮ ಮತ್ತು ಸೀತಾದೇವಿಯ ವಿವಾಹ ಸಮಾರಂಭದಲ್ಲಿ ಹರಿ ಪ್ರಸಾದ್ ಅವರು 750 ತೂಕದ 150 ರೇಷ್ಮೆ ದಾರಗಳಿಂದ ಸೀರೆಯನ್ನು ನೇಯ್ಗೆ ಮಾಡಿದ್ದರು. ಬಳಿಕ ಸೀತಾ ದೇವಿಗೆ ಪೀತಾಂಬರಂ ರೇಷ್ಮೆ ಸೀರೆಯನ್ನು ನೀಡಿದ್ದರು. ಇದನ್ನು ನೋಡಿದ ತೆಲಂಗಾಣ ಸಚಿವ ಕೆಟಿ ರಾಮರಾವ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದರು.

    MORE
    GALLERIES

  • 77

    Sachin Tendulkar: ರೇಷ್ಮೆ ಸೀರೆಯ ಮೇಲೆ ಮೂಡಿಬಂದ ಕ್ರಿಕೆಟ್​ ದೇವರ ಫೋಟೋ, ಅಭಿಮಾನಿ ಕಲೆಗೆ ಸಚಿನ್​ ಫಿದಾ

    ಈ ಕುರಿತು ಮಾತನಾಡಿದ ಅವರು, ಸಚಿನ್ ತೆಂಡೂಲ್ಕರ್ ಅವರ ಜನ್ಮದಿನದಂದು ಅವರ ಚಿತ್ರಗಳಿರುವ ರೇಷ್ಮೆ ವಸ್ತ್ರವನ್ನು ನೇಯ್ಗೆ ಮಾಡುವ ಭಾಗ್ಯ ನನಗಿದೆ ಎಂದು ಹರಿ ಪ್ರಸಾದ್ ಹೇಳಿದ್ದಾರೆ. ತಲಾ 10,000ದಿಂದ 1.5 ಲಕ್ಷ ಬೆಲೆಯ ಸೀರೆ ನೇಯ್ಗೆ ಮಾಡಿದ್ದೇನೆ ಎಂದ್ದಾರೆ. ಗ್ರಾಹಕರ ಬಜೆಟ್‌ಗೆ ಅನುಗುಣವಾಗಿ ಸೀರೆಗಳನ್ನು ನೇಯುತ್ತೇವೆ ಎಂದು ಹೇಳಿದ್ದಾರೆ.

    MORE
    GALLERIES