ಹೊಸ ಲುಕ್ನಲ್ಲಿಯೂ ಜಡ್ಡು ತುಂಬಾ ಚೆನ್ನಾಗಿ ಕಾಣಿಸುತ್ತಿದ್ದಾರೆ. ಈ ಎಡಗೈ ಕ್ರಿಕೆಟಿಗನಿಗೆ ದಕ್ಷಿಣ ಭಾರತದ ಮೇಲಿನ ಪ್ರೀತಿ ಹೊಸದೇನಲ್ಲ. ಇವರಿಗೆ ದಕ್ಷಿಣ ಭಾರತದ ಚಿತ್ರಗಳನ್ನು ನೋಡುವುದೆಂದರೆ ತುಂಬಾ ಇಷ್ಟ. ಪುಷ್ಪಾ ಚಿತ್ರದ ಸಿಗ್ನೇಚರ್ ಡೈಲಾಗ್ ಮೈ ಝುಕೇಗಾ ನಹಿ ಅನ್ನು ಕ್ರಿಕೆಟ್ ಜಗತ್ತಿನಲ್ಲಿ ಮೊದಲು ಜಡೇಜಾ ಅನುಕರಿಸಿದರು. ಇದಾದ ಬಳಿಕ ತಂಡದ ಇತರ ಆಟಗಾರರೂ ಇದೇ ರೀತಿ ಮಾಡಲು ಆರಂಭಿಸಿದರು.