Team India: ಸ್ನೇಹಿತನಿಂದ ನಂಬಿಕೆ ದ್ರೋಹ, ಟೀಂ ಇಂಡಿಯಾ ಸ್ಟಾರ್ ಆಟಗಾರನಿಗೆ ಗೆಳೆಯನಿಂದ ಲಕ್ಷ ಲಕ್ಷ ಮೋಸ
Team India: ಟೀಂ ಇಂಡಿಯಾ ಆಟಗಾರ ಉಮೇಶ್ ಯಾದವ್ ಅವರಿಗೆ ಅವರ ಸ್ನೇಹಿತನಿಂದಲೇ ಲಕ್ಷಾಂತರ ಮೊತ್ತದ ಮೋಸವಾಗಿದೆ. ಇದರ ಕುರಿತು ಮಹಾರಾಷ್ಟ್ರ ಪೊಲೀಸರು ಈಗಾಗಲೇ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಜನಸಾಮಾನ್ಯರು ಮಾತ್ರವಲ್ಲ ಸೆಲೆಬ್ರಿಟಿಗಳೂ ಕೂಡ ಮೋಸ ಹೋಗುತ್ತಾರೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಟೀಂ ಇಂಡಿಯಾ ಸ್ಟಾರ್ ಆಟಗಾರನಿಗೆ ಸ್ನೇಹಿತ ಮೋಸ ಮಾಡಿದ ಘಟನೆ ಬೆಳಕಿಗೆ ಬಂದಿದೆ.
2/ 7
ಟೀಂ ಇಂಡಿಯಾದ ಸ್ಟಾರ್ ವೇಗಿ ಉಮೇಶ್ ಯಾದವ್ ಮೋಸ ಹೋಗಿದ್ದಾರೆ. ಉಮೇಶ್ ಯಾದವ್ ವಂಚನೆಗೆ ಒಳಗಾಗಿದ್ದು ಅಪರಿಚಿತ ವ್ಯಕ್ತಿಗಳಿಂದಲ್ಲ ಬದಲಾಗಿ ಆತನ ಸ್ವಂತ ಸ್ನೇಹಿತನಿಂದ. 2017-18ನೇ ಸಾಲಿನಲ್ಲಿ 44 ಲಕ್ಷ ಕಳೆದುಕೊಂಡಿದ್ದಾರೆ.
3/ 7
ಮಹಾರಾಷ್ಟ್ರ ಪೊಲೀಸರ ಪ್ರಕಾರ ಉಮೇಶ್ ಯಾದವ್ ಮತ್ತು ಶೈಲೇಶ್ ಠಾಕ್ರೆ ಒಳ್ಳೆಯ ಸ್ನೇಹಿತರು. ಉಮೇಶ್ ಯಾದವ್ ಟೀಂ ಇಂಡಿಯಾಗೆ ಆಯ್ಕೆಯಾದ ನಂತರ ಶೈಲೇಶ್ ಅವರಿಗೆ ಇಷ್ಟು ದೊಡ್ಡ ಮೊತ್ತದ ಮೋಸ ಮಾಡಿದ್ದಾರಂತೆ.
4/ 7
ಉಮೇಶ್ ಯಾದವ್ ಜುಲೈ 2014ರಲ್ಲಿ ತನ್ನ ಸ್ನೇಹಿತನನ್ನು ಮ್ಯಾನೇಜರ್ ಆಗಿ ನೇಮಿಸಿಕೊಂಡರು. ಉಮೇಶ್ ಯಾದವ್ ತನ್ನ ಹಣಕಾಸಿನ ವ್ಯವಹಾರವನ್ನೆಲ್ಲ ಶೈಲೇಶ್ಗೆ ಒಪ್ಪಿಸಿದ್ದರು. ಅವರು ಯಾದವ್ ಅವರ ಬ್ಯಾಂಕ್ ಖಾತೆಯನ್ನು ನಿರ್ವಹಿಸುತ್ತಿದ್ದರು.
5/ 7
ನಾಗ್ಪುರದಲ್ಲಿ ಜಮೀನು ಖರೀದಿಸುವ ಸಲುವಾಗಿ ಉಮೇಶ್ ಯಾದವ್ ಎಲ್ಲಿಯಾದರೂ ಜಾಗವನ್ನು ನೋಡಲು ತನ್ನ ಸ್ನೇಹಿತ ಶೈಲೇಶ್ಗೆ ತಿಳಿಸಿದ್ದರಂತೆ. ನಾಗ್ಪುರದಲ್ಲಿ ನಿವೇಶನ ತೋರಿಸಿದ ಶೈಲೇಶ್, 44 ಲಕ್ಷ ರೂ.ಗೆ ಕೊಡಿಸುವುದಾಗಿ ನಂಬಿಸಿದ್ದರು.
6/ 7
ತನ್ನ ಸ್ನೇಹಿತನನ್ನು ನಂಬಿ ಕ್ರಿಕೆಟಿಗ ಆತನ ಖಾತೆಗೆ ಹಣ ಜಮಾ ಮಾಡಿದ್ದಾರೆ. ಆದರೆ ಉಮೇಶ ಅವರನ್ನು ವಂಚಿಸಿದ ಶೈಲೇಶ್ ತನ್ನ ಹೆಸರಿಗೆ ಪ್ಲಾಟ್ ನೋಂದಣಿ ಮಾಡಿಸಿಕೊಂಡಿದ್ದಾರೆ. ಈ ಬಗ್ಗೆ ತಡವಾಗಿ ತಿಳಿದ ಉಮೇಶ್ ಯಾದವ್ ಶೈಲೇಶ್ ನನ್ನು ಪ್ರಶ್ನಿಸಿದ್ದಾರೆ.
7/ 7
ಆದರೆ ಶೈಲೇಶ್ ಇದಕ್ಕೆ ಒಪ್ಪಿರಲಿಲ್ಲ. ಹಣವನ್ನೂ ಸಹ ಹಿಂದಿರುಗಿಸಿರಲಿಲ್ಲವಂತೆ. ಮೋಸ ಹೋಗಿರುವುದನ್ನು ಅರಿತ ಉಮೇಶ್ ಯಾದವ್ ಪೊಲೀಸರ ಮೊರೆ ಹೋಗಿದ್ದಾರೆ. ಪೊಲೀಸರು ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ತಲೆಮರೆಸಿಕೊಂಡಿರುವ ಶೈಲೇಶ್ಗಾಗಿ ಶೋಧ ಕಾರ್ಯ ಆರಂಭಿಸಲಾಗಿದೆ.