Rishabh Pant: ಅಮ್ಮನಿಗೆ ಸರ್ಪ್ರೈಸ್ ನೀಡಲು ಮನೆಗೆ ಬರ್ತಿದ್ದ ಪಂತ್, ಆಮೇಲೆ ನಡೆದಿದ್ದು ದುರಂತ
Rishabh Pant: ಕ್ರಿಕೆಟಿಗ ರಿಷಬ್ ಪಂತ್ ಅಪಘಾತದ ಬಗ್ಗೆ ಸಮಾಧಾನಕರ ಸುದ್ದಿಯೊಂದು ಬಂದಿದೆ. ಸ್ಟಾರ್ ಕ್ರಿಕೆಟಿಗ ಈಗ ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮುಂಜಾನೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಭಾರತೀಯ ಕ್ರಿಕೆಟಿಗ ರಿಷಬ್ ಪಂತ್ ಗಾಯಗೊಂಡಿದ್ದಾರೆ.
ಭಾರತೀಯ ಕ್ರಿಕೆಟಿಗ ರಿಷಬ್ ಪಂತ್ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದಾರೆ. ಶುಕ್ರವಾರ ಬೆಳಗ್ಗೆ ದೆಹಲಿಯಿಂದ ರೂರ್ಕಿಯಲ್ಲಿರುವ ತಮ್ಮ ಮನೆಗೆ ಬರುತ್ತಿದ್ದಾಗ ಪಂತ್ ಅವರ ಕಾರು ಡಿವೈಡರ್ಗೆ ಡಿಕ್ಕಿ ಹೊಡೆದಿದೆ. ಅವರನ್ನು ಡೆಹ್ರಾಡೂನ್ಗೆ ಕರೆತರಲಾಗುತ್ತಿದೆ. ಸದ್ಯ ಪಂತ್ಗೆ ಕಾಲು ಮುರಿತವಾಗಿದೆ ಎಂದು ತಿಳಿದುಬಂದಿದೆ.
2/ 8
ಕ್ರಿಕೆಟಿಗ ರಿಷಬ್ ಪಂತ್ ಅಪಘಾತದ ಬಗ್ಗೆ ಸಮಾಧಾನಕರ ಸುದ್ದಿಯೊಂದು ಬಂದಿದೆ. ಸ್ಟಾರ್ ಕ್ರಿಕೆಟಿಗ ಈಗ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ರೂರ್ಕಿ ಪೊಲೀಸರ ಪ್ರಕಾರ, ರಿಷಬ್ ಪಂತ್ ತನ್ನ ತಾಯಿಗೆ ಸರ್ಪ್ರೈಸ್ ನೀಡಲು ತಡರಾತ್ರಿ ದೆಹಲಿಯಿಂದ ರೂರ್ಕಿ ಕಡೆಗೆ ಕಾರಿನಲ್ಲಿ ಒಬ್ಬರೇ ಹೊರಟ್ಟಿದ್ದರು ಎಂದು ತಿಳಿಸಿದ್ದಾರೆ.
3/ 8
ರಿಷಬ್ ಪಂತ್ ನಿದ್ದೆಗೆಡಿಸಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ. ಚಿಕ್ಕನಿದ್ರೆಯಿಂದಾಗಿ ಕಾರು ಅಪಘಾತಕ್ಕೆ ಒಳಗಾಗಿರಬಹುದು ಎಂದು ಹೇಳಲಾಗುತ್ತಿದೆ. ಕಾರಿನಲ್ಲಿ ಅವರೊಂದಿಗೆ ಬೇರೆ ಯಾರೂ ಇರಲಿಲ್ಲ. ಡ್ರೈವರ್ ಕೂಡ ಇರಲಿಲ್ಲ, ರೂರ್ಕಿಯಲ್ಲಿರುವ ತನ್ನ ಕುಟುಂಬವನ್ನು ಭೇಟಿ ಮಾಡಲು ರಿಷಬ್ ಪಂತ್ ಸ್ವತಃ ಕಾರನ್ನು ಓಡಿಸುತ್ತಿದ್ದರಂತೆ.
4/ 8
ಪೊಲೀಸರ ಪ್ರಕಾರ, ಅವರ ಸ್ಥಿತಿ ಚೆನ್ನಾಗಿದೆ, ಅವರು ಮಾತನಾಡುವ ಸ್ಥಿತಿಯಲ್ಲಿದ್ದಾರೆ ಮತ್ತು ಅಪಾಯದಿಂದ ಪಾರಾಗಿದ್ದಾರೆ. ಅಪಘಾತದ ಸಂಪೂರ್ಣ ಮಾಹಿತಿ ಇನ್ನಷ್ಟೇ ತಿಳಿದುಬಂದಿದೆ. ಪಂತ್ ಡೆಹ್ರಾಡೂನ್ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
5/ 8
ರಿಷಭ್ ಪಂತ್ ತಮ್ಮ ತಾಯಿ ಸರೋಜಾ ಪಂತ್ ಅವರನ್ನು ಭೇಟಿ ಮಾಡಲುವ ಸಲುವಾಗಿ ತಾವು ಒಬ್ಬರೇ ಸ್ವತಃ ಕಾರನ್ನು ಡ್ರೈವಿಂಗ್ ಮಾಡಿಕೊಂಡು ಬರುತ್ತಿದ್ದಾಗ ಈ ಅವಘಡ ಸಂಭವಿಸಿದೆ.
6/ 8
ಹರಿದ್ವಾರ ಜಿಲ್ಲೆಯ ನರ್ಸನ್ ನಡುವಿನ ರಾಷ್ಟ್ರೀಯ ಹೆದ್ದಾರಿ-58 ರಲ್ಲಿ ರಿಷಬ್ ಪಂತ್ ಅವರ ಕಾರು ಡಿವೈಡರ್ಗೆ ಢಿಕ್ಕಿ ಹೊಡೆದಿದೆ ಎಂದು ಹರಿದ್ವಾರದ ರೂಲರ್ ಪೊಲೀಸ್ ವರಿಷ್ಠಾಧಿಕಾರಿ ಸ್ವಪನ್ ಕಿಶೋರ್ ಹೇಳಿದ್ದಾರೆ.
7/ 8
ಕಾರು ಅಪಘಾತದ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಫೋಟೋ ಅಪಘಾತದ ತೀವ್ರತೆಯನ್ನು ತಿಳಿಸುತ್ತಿದೆ. ಕಾರು ಅಪಘಾತದ ವೇಳೆ ಬೆಂಕಿ ಹೊತ್ತಿಕೊಂಡಿದ್ದು, ತಕ್ಷಣ ಪಂತ್ ಕಿಟಕಿಯಿಂದ ಹೊರಬಂದಿದ್ದಾರೆ.
8/ 8
ಅಪಘಾತದ ಬಳಿಕ ಸ್ಥಳೀಯ ಜನರು ಕ್ರಿಕೆಟಿಗನನ್ನು ರೂರ್ಕಿ ಸಿವಿಲ್ ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿ ಪ್ರಥಮ ಚಿಕಿತ್ಸೆಯ ನಂತರ ಅವರನ್ನು ಡೆಹ್ರಾಡೂನ್ನ ಮ್ಯಾಕ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಪಂತ್ ಅವರ ಕಾಲಿನ ಮೂಳೆ ಮುರಿತವಾಗಿದೆ. ಅವರ ತಲೆ ಮತ್ತು ಬೆನ್ನಿನ ಮೇಲೂ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ.