Mohammed Shami: ಟೀಂ ಇಂಡಿಯಾ ಸ್ಟಾರ್ ಆಟಗಾರನ ದಾಂಪತ್ಯದಲ್ಲಿ ಬಿರುಕು, ಪತ್ನಿಗೆ ಪ್ರತಿ ತಿಂಗಳು ಜೀವನಾಂಶ ನೀಡುವಂತೆ ಕೋರ್ಟ್ ಆದೇಶ
Mohammed Shami: ಟೀಂ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿ ಸದ್ಯ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಬ್ಯುಸಿಯಾಗಿದ್ದಾರೆ. ಇದೇ ವೇಳೆ ನ್ಯಾಯಾಲಯ ಅವರಿಗೆ ಬಿಗ್ ಶಾಕ್ ನೀಡಿದೆ.
ಮೊಹಮ್ಮದ್ ಶಮಿ ಪತ್ನಿ ಹಸೀನ್ ಜಹಾನ್ ಅವರ ಐದು ವರ್ಷಗಳ ಕಾನೂನು ಹೋರಾಟ ವಿಜಯದೊಂದಿಗೆ ಅಂತ್ಯಗೊಂಡಿದೆ. ಐದು ವರ್ಷಗಳ ಹಿಂದೆ ಶಮಿ ವಿರುದ್ಧ ಜಹಾನ್ ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದರು. ಈ ಬಗ್ಗೆ ತನಿಖೆ ನಡೆಸಿದ ನ್ಯಾಯಾಲಯ ಜಹಾನ್ ಪರವಾಗಿ ತೀರ್ಪು ನೀಡಿದೆ.
2/ 8
ಹಸಿನ್ ಜಹಾನ್ಗೆ ಪತಿ ಮೊಹಮ್ಮದ್ ಶಮಿ ಜೀವನಾಂಶ ನೀಡಬೇಕು ಎಂದು ಕೋರ್ಟ್ ಆದೇಶಿಸಿದೆ. ಮಾಸಿಕ ರೂ.50 ಸಾವಿರ ಪಾವತಿಸುವಂತೆ ಸ್ಪಷ್ಟಪಡಿಸಲಾಗಿದೆ. ಈ ಹಿಂದೆ ಶಮಿ ಮಗಳ ಜೀವನಾಂಶಕ್ಕಾಗಿ ಮಾಸಿಕ 80 ಸಾವಿರ ರೂಪಾಯಿ ನೀಡುವಂತೆ ಕೋರ್ಟ್ ಆದೇಶಿಸಿತ್ತು. ಈ ಲೆಕ್ಕಾಚಾರದ ಪ್ರಕಾರ ಶಮಿ ಪ್ರತಿ ತಿಂಗಳು ಪತ್ನಿಗೆ 1.30 ಲಕ್ಷ ರೂ. ನೀಡಬೇಕಿದೆ.
3/ 8
ಈ ಹಿಂದೆ ಶಮಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಜಹಾನ್ ಆರೋಪಿಸಿದ್ದರು. ತನ್ನ ವಿರುದ್ಧ ಪ್ರಕರಣ ದಾಖಲಾದಾಗಿನಿಂದ ಶಮಿ ಅವರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದರು.
4/ 8
ಜಹಾನ್ ಮತ್ತು ಶಮಿ ಏಪ್ರಿಲ್ 7, 2014 ರಂದು ವಿವಾಹವಾದರು. ಆದರೆ 2018 ರಲ್ಲಿ ಜಹಾನ್ ಶಮಿ ವಿರುದ್ಧ ಕೆಲ ಆರೋಪಗಳನ್ನು ಮಾಡಿದ್ದರು. ಮನೆಯಲ್ಲಿ ಥಳಿಸಿ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ ಎಂದು ಜಹಾನ್ ಮಾಧ್ಯಮಗಳ ಮುಂದೆ ದೂರಿದ್ದರು.
5/ 8
ಹಸೀನಾ ಜಹಾನ್ ಆರೋಪವನ್ನು ಕಾಲಕಾಲಕ್ಕೆ ಅಲ್ಲಗಳೆಯುತ್ತಿದ್ದ ಶಮಿ ಕೋರ್ಟ್ನಲ್ಲಿ ಸೋತರು. 2018ರಲ್ಲಿ ಜಹಾನ್ ಪ್ರಕರಣ ದಾಖಲಿಸಿದಾಗಿನಿಂದ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಇಲ್ಲಿಯವರೆಗೆ ವಿಚ್ಛೇದನ ತೆಗೆದುಕೊಂಡಿಲ್ಲ.
6/ 8
ಐದು ವರ್ಷಗಳ ಕಾಲ ಹೋರಾಡುವುದು ಕಷ್ಟವಾಯಿತು ಎಂದು ಜಹಾನ್ ಹೇಳಿದ್ದಾರೆ. ಯಾವುದೇ ಹಣಕಾಸಿನ ಸಹಾಯವಿಲ್ಲದೆ ಪ್ರಕರಣವನ್ನು ಈ ಹಂತಕ್ಕೆ ತಂದಿರುವೆನು. ಹೀಗಾಗಿ ಅಂತಿಮವಾಗಿ ತೀರ್ಪು ನನ್ನ ಪರ ಬಂದಿರುವುದಕ್ಕೆ ಸಂತಸವಿದೆ ಎಂದಿದ್ದಾರೆ.
7/ 8
ಇನ್ನು, 2018 ರಲ್ಲಿ, ಮೊಹಮ್ಮದ್ ಶಮಿ ಅವರ ಪತ್ನಿ ನ್ಯಾಯಾಲಯದಲ್ಲಿ ಮಾಸಿಕ 10 ಲಕ್ಷ ರೂ ಕೊಡಿಸುವಂತೆ ಬೇಡಿಕೆ ಇಟ್ಟಿದ್ದರು. ಇದರಲ್ಲಿ 7 ಲಕ್ಷ ರೂಪಾಯಿ ಅವರ ವೈಯಕ್ತಿಕವಾಗಿದ್ದರೆ, 3 ಲಕ್ಷ ರೂಪಾಯಿ ಅವರ ಮಗಳ ನಿರ್ವಹಣೆಗೆ ಹೋಗುತ್ತದೆ ಎಂದು ಹೇಳಿದ್ದರು.
8/ 8
ಇಷ್ಟು ವರ್ಷಗಳ ನಂತರ ಶಮಿ ಪತ್ನಿಗೆ 1 ಲಕ್ಷ 30 ಸಾವಿರ ನೀಡುವಂತೆ ಕೋಲ್ಕತ್ತಾ ಕೋರ್ಟ್ ಆದೇಶ ನೀಡಿದೆ. ಇದರಲ್ಲಿ ಪತ್ನಿಗೆ 50 ಸಾವಿರ ಹಾಗೂ ಮಗಳ ನಿರ್ವಹಣೆಗೆ 80 ಸಾವಿರ ಖರ್ಚು ಎಂದು ಕೋರ್ಟ್ ಅಂತಿಮ ಆದೇಶ ಹೊರಡಿಸಿದೆ.