KL Rahul-Athiya Shetty: ರಾಹುಲ್-ಅಥಿಯಾ ಮದ್ವೆಗೆ ಯಾರೆಲ್ಲಾ ಬರ್ತಾರೆ? ಇವ್ರ ಒಂದು ತಿಂಗಳ ಮನೆ ಬಾಡಿಗೆನೇ ಈ ಪಾಟಿಯಂತೆ!
KL Rahul-Athiya Shetty: ಭಾರತ ತಂಡದ ಹಿರಿಯ ಬ್ಯಾಟ್ಸ್ಮನ್ ಕೆಎಲ್ ರಾಹುಲ್ ಶೀಘ್ರದಲ್ಲೇ ಬಾಲಿವುಡ್ ನಟಿ ಆಥಿಯಾ ಶೆಟ್ಟಿ ಅವರನ್ನು ವಿವಾಹವಾಗಲಿದ್ದಾರೆ. ರಾಹುಲ್ ಮತ್ತು ಅಥಿಯಾ ಅವರ ಅಭಿಮಾನಿಗಳಿಗೆ ಅಂತಿಮವಾಗಿ ಸಂತಸದ ಸುದ್ದಿಯನ್ನು ನೀಡಿದ್ದಾರೆ.
ಭಾರತ ತಂಡದ ಹಿರಿಯ ಬ್ಯಾಟ್ಸ್ಮನ್ ಕೆಎಲ್ ರಾಹುಲ್ ಶೀಘ್ರದಲ್ಲೇ ಬಾಲಿವುಡ್ ನಟಿ ಆಥಿಯಾ ಶೆಟ್ಟಿ ಅವರನ್ನು ವಿವಾಹವಾಗಲಿದ್ದಾರೆ. ರಾಹುಲ್ ಮತ್ತು ಅಥಿಯಾ ಅವರ ಅಭಿಮಾನಿಗಳಿಗೆ ಭರ್ಜರಿ ಸಿಹಿ ಸುದ್ದಿ ನೀಡಿದ್ದಾರೆ.
2/ 8
ಜನವರಿ 23 ರಂದು ರಾಹುಲ್ ಮತ್ತು ಅಥಿಯಾ ವಿವಾಹವಾಗಲಿದ್ದಾರೆ. ಈ ಹಿಂದೆ ಬಿಸಿಸಿಐ ಕೂಡ ಸ್ಟಾರ್ ಜೋಡಿಯ ಬಗ್ಗೆ ಮೌನ ಮುರಿಮುರಿದಿದ್ದು, ಈ ಮೂಲಕ ಕೆಎಲ್ ರಾಹುಲ್ ಅವರನ್ನು ಮುಂಬರಲಿರುವ ನ್ಯೂಜಿಲ್ಯಾಂಡ್ ಸರಣಿಯಿಂದಲೂ ಹೊರಗಿದ್ದಾರೆ.
3/ 8
ಸ್ಟಾರ್ ಜೋಡಿಗಳ ಮದುವೆಯಲ್ಲಿ ದೇಶ ಮತ್ತು ವಿಶ್ವದ ಅನೇಕ ದಿಗ್ಗಜ ಕ್ರಿಕೆಟಿಗರು ಹಾಜರಾಗಬಹುದು. ಈ ವಿಶೇಷ ಪಟ್ಟಿಯಲ್ಲಿ ಭಾರತದ ಹಾಲಿ ನಾಯಕ ರೋಹಿತ್ ಶರ್ಮಾ, ಅನುಭವಿ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಮತ್ತು ಮಾಜಿ ಅನುಭವಿ ನಾಯಕ ಎಂಎಸ್ ಧೋನಿ ಅವರ ಹೆಸರೂ ಸೇರಿದೆ.
4/ 8
ಇದರ ನಡುವೆ ಮದುವೆಯ ನಂತರ ಇಬ್ಬರೂ ಎಲ್ಲಿ ವಾಸಿಸುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಮದುವೆಯ ನಂತರ ಇಬ್ಬರೂ ಬಾಂದ್ರಾ ಫ್ಲಾಟ್ ಗೆ ಶಿಫ್ಟ್ ಆಗಲಿದ್ದಾರೆ ಎಂದು ಹೇಳಲಾಗ್ತಿದೆ. ಇವ್ರ ಫ್ಲಾಟ್ ಬಾಂದ್ರಾದ ಪಾಲಿ ಹಿಲ್ ನಲ್ಲಿರುವ ರಣವೀರ್ ಕಪೂರ್ ಮತ್ತು ಆಲಿಯಾ ಭಟ್ ಮನೆಗೆ ಸಮೀಪದಲ್ಲಿ ಇದೆಯಂತೆ.
5/ 8
ಮಾಧ್ಯಮ ವರದಿಗಳನ್ನು ನಂಬುವುದಾದರೆ, ಮದುವೆಗೆ ಮುಂಚೆಯೇ ಈ ತಾರಾ ಜೋಡಿ ಮುಂಬೈನಲ್ಲಿ ಅಪಾರ್ಟ್ಮೆಂಟ್ ಅನ್ನು ಬಾಡಿಗೆಗೆ ತೆಗೆದುಕೊಂಡಿದೆ. ಅಲ್ಲದೇ ಈ ಅಪಾರ್ಟ್ಮೆಂಟ್ ಬಾಡಿಗೆ ಕೇಳಿದ್ರೆ ಎಲ್ಲರೂ ಅಚ್ಚರಿ ಹೊರಹಾಕುತ್ತಿದ್ದಾರೆ.
6/ 8
ಈ 4BHK ಅಪಾರ್ಟ್ಮೆಂಟ್ ಬಾಂದ್ರಾದ ಕಾರ್ಟರ್ ರಸ್ತೆಯಲ್ಲಿ ಸಮುದ್ರ ತೀರದಲ್ಲಿದೆ ಎಂದು ಹೇಳಲಾಗುತ್ತಿದೆ. ಈ ಅಪಾರ್ಟ್ಮೆಂಟ್ಗಾಗಿ ಸ್ಟಾರ್ ಜೋಡಿಗಳು ಪ್ರತಿ ತಿಂಗಳು ಸುಮಾರು 10 ಲಕ್ಷ ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆಯಂತೆ.
7/ 8
ಮುಂಬೈನ ಖಂಡಾಲದಲ್ಲಿರುವ ಸುನೀಲ್ ಶೆಟ್ಟಿ ಅವರ ಮನೆಯಲ್ಲಿ ಮದುವೆ ಸಮಾರಂಭ ನಡೆಯಲಿದೆಯಂತೆ. ಈ ತಾರಾ ಜೋಡಿಯ ಮದುವೆಗೆ ಬಾಲಿವುಡ್ ಸೆಲೆಬ್ರಿಟಿಗಳು ಹಾಗೂ ಕ್ರೀಡಾ ಕ್ಷೇತ್ರದಿಂದಲೂ ಯಾರನ್ನು ಆಹ್ವಾನಿಸಬೇಕು ಎಂಬ ಬಗ್ಗೆಯೂ ಪಟ್ಟಿ ಸಿದ್ಧಪಡಿಸಲಾಗಿದೆಯಂತೆ.
8/ 8
ಕೆಎಲ್ ರಾಹುಲ್ ಮತ್ತು ಅಥಿಯಾ ಬಹಳ ದಿನಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. ಈ ಜೋಡಿ ಆಗಾಗ ಜೊತೆಯಾಗಿರುವ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಸುದ್ದಿಯಲ್ಲಿದ್ದರು. ಕೆಎಲ್ ರಾಹುಲ್ ಕೂಡ ಕ್ರಿಕೆಟ್ ಆಟಕ್ಕೆ ಕೊಂಚ ಬ್ರೇಕ್ ಕೊಟ್ಟು ರಜೆಯಲ್ಲಿದ್ದು, ಮದುವೆಗೆ ರೆಡಿಯಾಗ್ತಿದ್ದಾರೆ ಎನ್ನಲಾಗ್ತಿದೆ.