ಭಾರತೀಯ ಕ್ರಿಕೆಟ್ ದಿಗ್ಗಜರ ಪ್ರೇಮಕಥೆಗಳ ಬಗ್ಗೆ ಜನರು ಆಗಾಗ್ಗೆ ಮಾತನಾಡಿಕೊಳ್ಳುತ್ತಿರುತ್ತಾರೆ, ಸಾಮಾಜಿಕ ಜಾಲಾತಾಣದಲ್ಲೂ ಚರ್ಚೆ ನಡೆಯುತ್ತಿರುತ್ತದೆ. ಭಾರತದ ಆರಂಭಿಕ ಆಟಗಾರ ಶಿಖರ್ ಧವನ್ ಅವರ ಪ್ರೇಮಕಥೆಯೂ ವಿಶೇಷ ಎನಿಸುತ್ತದೆ. ಗಬ್ಬರ್ ಎಂದೇ ಖ್ಯಾತರಾಗಿದ್ದ ಧವನ್ ತಮಗಿಂತ ವಯಸ್ಸಿನಲ್ಲಿ ಹಿರಿಯಳಾದ ಆಯೇಷಾರನ್ನು ಪ್ರೀತಿಸಿ ವಿವಾಹವಾಗಿದ್ದರು. (Shikhar dhawan Instagram)
ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದ ಬಂಗಾಳಿ ಹುಡುಗಿ ಆಯೇಷಾ ಮುಖರ್ಜಿ ಅವರ ಫೋಟೋ ನೋಡಿದ ಧವನ್ ಫೇಸ್ ಬುಕ್ ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದರು. ಹರ್ಭಜನ್ ಸಿಂಗ್ರಿಂದ ಇಬ್ಬರ ನಡುವೆ ಮಾತುಕತೆ ಶುರುವಾಯಿತು. ಇದರ ನಂತರ, ಧವನ್ ಆಸ್ಟ್ರೇಲಿಯಾ ಪ್ರವಾಸದಲ್ಲಿ ಆಯೇಷಾಳನ್ನು ಭೇಟಿಯಾಗಿದ್ದಾರೆ. ನಂತರ ಅವರಿಬ್ಬರ ನಡುವೆ ಆಪ್ತತೆ ಹೆಚ್ಚಾಗಿ, ಇಬ್ಬರೂ ವಿವಾಹವಾಗಲು ನಿರ್ಧರಿಸಿದರು. (Shikhar dhawan Instagram)
ಆಯೇಷಾ ಧವನ್‌ಗಿಂತ 10 ವರ್ಷ ದೊಡ್ಡವರು, ಜೊತೆಗೆ ಎರಡು ಮಕ್ಕಳ ತಾಯಿಯಾಗಿದ್ದರು. ಆದರೆ ಇದು ಇಬ್ಬರ ನಡುವಿನ ಪ್ರೀತಿಗೆ ಯಾವುದೇ ವ್ಯತ್ಯಾಸ ಉಂಟು ಮಾಡಲಿಲ್ಲ. ಆದರೆ ಶಿಖರ್ ಕುಟುಂಬ ಈ ಸಂಬಂಧವನ್ನು ಒಪ್ಪಲಿಲ್ಲ. ಇದಕ್ಕೆ ಕಾರಣ ಆಯೇಷಾ ಶಿಖರ್ಗಿಂತ 10 ವರ್ಷ ದೊಡ್ಡವರೆಂಬುದು. ಜೊತೆಗೆ ಆಯೇಷಾ ವಿಚ್ಛೇದಿತ ಮತ್ತು ಇಬ್ಬರು ಹೆಣ್ಣು ಮಕ್ಕಳ ತಾಯಿ ಆಗಿರುವುದು. ಆದರೆ ಧವನ್ ಹೇಗೋ ಕುಟುಂಬದವರನ್ನು ಮದುವೆಗೆ ಒಪ್ಪಿಸಿದ್ದರು. (Shikhar dhawan Instagram)
ಇದು ಆಯೇಷಾ ಅವರ ಎರಡನೇ ವಿವಾಹವಾಗಿದ್ದು, ಮೊದಲೇ ಆಸ್ಟ್ರೇಲಿಯಾ ಉದ್ಯಮಿಯೊಬ್ಬರನ್ನು ವಿವಾಹವಾಗಿ ಅವರಿಂದ ದೂರವಾಗಿದ್ದರು. ಬಂಗಾಳಿ ಹುಡುಗಿ ಆಯೇಷಾಗೆ ಮೊದಲ ಮದುವೆಯಿಂದ ರಿಯಾ ಮತ್ತು ಆಲಿಯಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದರು. ಧವನ್ ಕೂಡ ಆ ಇಬ್ಬರೂ ಹೆಣ್ಣುಮಕ್ಕಳನ್ನು ತುಂಬಾ ಪ್ರೀತಿಯಿಂದ ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಿದ್ದರು. ಧವನ್ ಮತ್ತು ಆಯೇಷಾ ದಂಪತಿಗೆ ಜೋರಾವರ್ ಎಂಬ ಮಗನಿದ್ದಾನೆ. (Shikhar dhawan Instagram)