ಐಪಿಎಲ್ 16 ನೇ ಸೀಸನ್ ತನ್ನ ಕೊನೆಯ ಹಂತಕ್ಕೆ ತಲುಪಿದೆ. ಮೇ 28ಕ್ಕೆ ಚಾಂಪಿಯನ್ ಯಾರು ಎಂಬುದು ನಿರ್ಧಾರವಾಗಲಿದೆ. ಆ ಬಳಿಕ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಭಾರತ ಭಾಗಿಯಾಗಲಿದೆ. ಜೂನ್ 7 ರಿಂದ ಓವಲ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ WTC ಫೈನಲ್ ಪಂದ್ಯ ನಡೆಯಲಿದೆ. ಅದೇನೇ ಇರಲಿ ಈ ಫೈನಲ್ ಗೂ ಮುನ್ನ ಟೀಂ ಇಂಡಿಯಾಗೆ ಹೊಸ ಶಾಕ್ ಎದುರಾಗಿದೆ.
ಉನದ್ಕತ್ ಕೂಡ ಫಿಟ್ ಆಗುವ ಸಾಧ್ಯತೆ ಇದೆ. ಭಾರತದ ಆಟಗಾರರು ಮತ್ತು ಕೋಚಿಂಗ್ ಸಿಬ್ಬಂದಿ 3 ಬ್ಯಾಚ್‌ಗಳಲ್ಲಿ ಇಂಗ್ಲೆಂಡ್‌ಗೆ ತೆರಳಲಿದ್ದಾರೆ. ಮೊದಲ ಬ್ಯಾಚ್ ಈಗಾಗಲೇ ಲಂಡನ್ ತಲುಪಿದೆ. ಐಪಿಎಲ್ ಆರಂಭಕ್ಕೂ ಮುನ್ನ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ಕೂಕಬುರಾ ಕೆಂಪು ಚೆಂಡಿನಲ್ಲಿ ಎಲ್ಲಾ ವೇಗದ ಬೌಲರ್‌ಗಳಿಗೆ ಪ್ರ್ಯಾಕ್ಟಿಸ್ ಮಾಡಲು ಹೇಳಿದ್ದಾಗಿ ತಿಳಿಸಿದ್ದಾರೆ.
ಸಮಯ ಸಿಕ್ಕಾಗಲೆಲ್ಲಾ ಕೆಂಪು ಚೆಂಡಿನೊಂದಿಗೆ ಅಭ್ಯಾಸ ಮಾಡುವಂತೆ ರೋಹಿತ್ ಬೌಲರ್‌ಗಳನ್ನು ಕೇಳಿಕೊಂಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ನಂತರ ರೋಹಿತ್, ಟಿ20 ಲೀಗ್‌ನಲ್ಲಿ ತಮ್ಮನ್ನು ತಾವು ಫಿಟ್ ಆಗಿಟ್ಟುಕೊಳ್ಳುವುದು ಆಟಗಾರರ ಜವಾಬ್ದಾರಿಯಾಗಿದೆ ಎಂದು ಹೇಳಿದ್ದರು. ನಾಯಕ ರೋಹಿತ್ ಶರ್ಮಾ ಮತ್ತು ಟೀಂ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅಂತಿಮ ತಂಡದ ಭಾಗವಾಗಿರುವ ಎಲ್ಲಾ ಆಟಗಾರರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.