ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಜಗತ್ತಿನ ಅತ್ಯಂತ ಪ್ರತಿಷ್ಠಿತ ಟಿ20 ಲೀಗ್ ಆಗಿದೆ. ಈ ಟೂರ್ನಿಯಲ್ಲಿ ವಿಶ್ವದಾದ್ಯಂತದ ಕ್ರಿಕೆಟಿಗರು ಆಡುತ್ತಾರೆ. ಆದರೆ, ಐಪಿಎಲ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಅಪಾಯ ತಂದೊಡ್ಡಬಹುದು ಎಂದು ಐಸಿಸಿ ಈಗಾಗಲೇ ಊಹಿಸುತ್ತಿದೆ. ಐಪಿಎಲ್ನಂತಹ T20 ಲೀಗ್ಗಳ ಅವಧಿಯನ್ನು ಹೆಚ್ಚಿಸುವುದರಿಂದ ಭವಿಷ್ಯದಲ್ಲಿ ಅಂತಾರಾಷ್ಟ್ರೀಯ ತಂಡಗಳ ನಡುವಿನ ದ್ವಿಪಕ್ಷೀಯ ಸರಣಿಗಳ ಸಂಖ್ಯೆಯನ್ನು ಕಡಿಮೆ ಆಗುತ್ತದೆ ಎಂದು ICC ನಿರ್ದೇಶಕ ಗ್ರೆಗ್ ಬಾರ್ಕ್ಲೇ ಇತ್ತೀಚೆಗೆ ಹೇಳಿದ್ದರು. ಆದರೆ ಇದಿಗ ಈ ಹೇಳಿಕೆಗೆ ರವಿಶಾಸ್ತ್ರಿ ತಿರುಗೇಟು ನೀಡಿದ್ದಾರೆ.
ನಾನು ಮೊದಲೇ ಹೇಳಿದ್ದೆ. ನಾನು ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿದ್ದಾಗಲೂ ಭಾರತ ತಂಡ ನೂರಾರು ಟಿ20 ಪಂದ್ಯಗಳನ್ನು ಆಡಿದೆ. ಅವರ ನಡುವಿನ ಒಂದೇ ಒಂದು ಪಂದ್ಯ ನನಗೆ ನೆನಪಿಲ್ಲ. ವಿಶ್ವಕಪ್ ಗೆದ್ದರೆ ನಮಗೆ ನೆನಪಾಗುತ್ತದೆ. ಆದರೆ ದುರದೃಷ್ಟವಶಾತ್ ನಾವು ಗೆಲ್ಲಲಿಲ್ಲ. ಟಿ20 ಕ್ರಿಕೆಟ್ ದೇಶಗಳ ನಡುವೆ ಅತಿಯಾಗಿ ಆಡಲಾಗುತ್ತದೆ. ಅಷ್ಟು ಅಗತ್ಯವಿಲ್ಲ. ಫ್ರಾಂಚೈಸಿ ಕ್ರಿಕೆಟ್ ಸಾಕು.
ಫುಟ್ಬಾಲ್ ಮಾದರಿ ಕ್ರಿಕೆಟ್ನಲ್ಲೂ ಬರಬೇಕು. ನೀವು ಫುಟ್ಬಾಲ್ ಅನ್ನು ನೋಡಿದರೆ ನೀವು ವಿಶ್ವಕಪ್ ನಲ್ಲಿ ಅವರ ದೇಶಕ್ಕಾಗಿ ಮಾತ್ರ ಆಡುತ್ತಾರೆ. ಆ ನಂತರ ಇನ್ನೂ ಕೆಲವು ಪ್ರಮುಖ ಟೂರ್ನಿಗಳು ಅಷ್ಟೆ. ಉಳಿದಂತೆ ಫ್ರ್ಯಾಂಚೈಸ್ ಪ್ರತಿನಿಧಿಸುತ್ತದೆ. ಆ ವಿಧಾನ ಟಿ20 ಕ್ರಿಕೆಟ್ನಲ್ಲೂ ಬರಬೇಕು. ಪ್ರತಿಯೊಂದು ದೇಶವೂ ತಮ್ಮ ಆಟಗಾರರಿಗೆ ಫ್ರಾಂಚೈಸಿ ಕ್ರಿಕೆಟ್ ಆಡಲು ಅವಕಾಶ ನೀಡಬೇಕು, ಎರಡು ವರ್ಷಕ್ಕೊಮ್ಮೆ ಟಿ20 ವಿಶ್ವಕಪ್ ಆಯೋಜಿಸಿದರೆ ಸಾಕು,'' ಎಂದು ರವಿಶಾಸ್ತ್ರಿ ಹೇಳಿದ್ದಾರೆ.