ಟೀಂ ಇಂಡಿಯಾ ಮಾಜಿ ನಾಯಕ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಇಂದು ಕರ್ನಾಟಕದ ಕರಾವಳಿ ಭಾಗವಾದ ಮಂಗಳೂರಿಗೆ ಆಗಮಿಸಿದ್ದಾರೆ.
2/ 7
ಇಂದು ಟೀಂ ಇಂಡಿಯಾದ ಮಾಜಿ ನಾಯಕ ಧೋನಿ ಇಂದು ಖಾಸಗಿ ಕಾರ್ಯಕ್ರಮದ ನಿಮಿತ್ತ ಮಂಗಳೂರಿಗೆ ಬಂದಿಳಿದಿದ್ದಾರೆ. ಧೋನಿ ಮುಂಬೈನಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ್ದಾರೆ.
3/ 7
ಕ್ರಿಕೆಟ್ಗೆ ವಿದಾಯದ ನಂತರ ಧೋನಿ ಅನೇಖ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಕಳೆದ ಕೆಲ ತಿಂಗಳುಗಳ ಹಿಂದೆ ಅವರು ಬೆಮಗಳೂರಿಗೆ ಶಾಲೆ ಉದ್ಘಾಟನೆ ಮಾಡಲು ಬಂದಿದ್ದರು. ಇದೀಗ ಅದೇ ರೀತಿ ಧೋನಿ ಮತ್ತೊಮ್ಮೆ ಮಂಗಳೂರಿಗೆ ಆಗಮಿಸಿದ್ದಾರೆ.
4/ 7
ಇಂದು ಧೋನಿ ತಮ್ಮ ಸ್ನೇಹಿತ ಕಾಸರಗೋಡಿನ ಡಾ. ಶಾಜೀರ್ ಗಫಾರ್ ಅವರ ತಂದೆ ಪ್ರೊ ಕೆ.ಕೆ ಅಬ್ದುಲ್ ಗಫಾರ್ ಅವರ ಜೀವನಾಧಾರಿತ ಆತ್ಮಕಥನ ಪುಸ್ತಕ ಬಿಡುಗಡೆಗೆ ಭಾಗಿಯಾಗಲು ಆಗಮಿಸಿದ್ದಾರೆ.
5/ 7
ಇಂದು ಧೋನಿ ತಮ್ಮ ಸ್ನೇಹಿತ ಕಾಸರಗೋಡಿನ ಡಾ. ಶಾಜೀರ್ ಗಫಾರ್ ಅವರ ತಂದೆ ಪ್ರೊ ಕೆ.ಕೆ ಅಬ್ದುಲ್ ಗಫಾರ್ ಅವರ ಜೀವನಾಧಾರಿತ ಆತ್ಮಕಥನ ಪುಸ್ತಕ ಬಿಡುಗಡೆಗೆ ಭಾಗಿಯಾಗಲು ಆಗಮಿಸಿದ್ದಾರೆ.
6/ 7
ಈ ವೇಳೆ ಧೋನಿಯನ್ನು ಮಾಜಿ ಸಚಿವ ಯು.ಟಿ ಖಾದರ್ ಅವರ ಸಹೋದರ, ಯು.ಟಿ ಇಫ್ತಿಕಾರ್ ಅವರು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆತ್ಮೀಯವಾಗಿ ಸ್ವಾಗತಿಸಿದರು. ಇನ್ನು, ಧೋನಿ ಕಾಸರಗೋಡಿನ ಬೇಕಲ್ನಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಲಿದ್ದಾರೆ.
7/ 7
ಇದರ ನಡುವೆ ವಿಶೇಷ ಎಂಬಂತೆ ಧೋನಿ ಅವರನ್ನು ಖಾದರ್ ಅವರ ಸಹೋದರ ಯು.ಟಿ ಇಫ್ತಿಕಾರ್ ಅವರೇ ಡ್ರೈವ್ ಮಾಡಿ ಕಾರಿನಲ್ಲಿ ಕರೆದೊಯ್ದಿದ್ದಾರೆ. ಇನ್ನು, ಧೋನಿ ಬಂದಿಳಿಯುತ್ತಿದ್ದಂತೆ ಅಭಿಮಾನಿಗಳು ಧೊಣಿ ಬಳಿ ಸೆಲ್ಪಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದಿದ್ದರು.