ಅತಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ಬಹಳ ಸಮಯದಿಂದ ಸಂಬಂಧದಲ್ಲಿದ್ದಾರೆ. ಕಳೆದ ಹಲವು ದಿನಗಳಿಂದ ಇಬ್ಬರ ಮದುವೆಯ ಚರ್ಚೆಯೂ ನಡೆಯುತ್ತಿದೆ. ಮದುವೆ ವಿಚಾರವಾಗಿ ರಾಹುಲ್ ಮತ್ತು ಅತಿಯಾ ಅವರ ಪೋಷಕರು ಕೂಡ ಭೇಟಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಮುಂದಿನ ತಿಂಗಳ ಮೊದಲ ವಾರದಲ್ಲಿ ರಾಹುಲ್ ಅಥಿಯಾ ಅವರನ್ನು ವರಿಸಲಿದ್ದಾರೆ ಎಂದು ಈಗ ವರದಿಯಾಗಿದೆ. ಇದಕ್ಕಾಗಿ ಬಿಸಿಸಿಐನಿಂದಲೂ ರಜೆ ಪಡೆದಿದ್ದು, ಅವರ ರಜೆಗೂ ಅನುಮೋದನೆ ನೀಡಲಾಗಿದೆ.