ಆದರೆ 2024ರ ಟಿ20 ವಿಶ್ವಕಪ್ ಕುರಿತ ಮಾತುಕತೆ ಈಗಾಗಲೇ ಆರಂಭವಾಗಿದೆ. ಅಲ್ಲದೇ ಮುಂದಿನ ವರ್ಷ ಏಕದಿನ ವಿರ್ಶವಕಪ್ ಸಹ ನಡೆಯಲಿದೆ. ಹಿರಿಯ ಆಟಗಾರರನ್ನು ಬಿಟ್ಟು ಯುವಕರಿಗೆ ಸ್ಥಾನ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ನಂತರ ಭಾರತ ತಂಡದಲ್ಲಿರುವ ಹಲವು ಹಿರಿಯರು ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡದೇ ಇರಬಹುದು.
ದಿನೇಶ್ ಕಾರ್ತಿಕ್: ದಿನೇಶ್ ಕಾರ್ತಿಕ್ ಅನಿರೀಕ್ಷಿತವಾಗಿ ಟಿ20 ಭಾರತ ತಂಡದಲ್ಲಿ ಸ್ಥಾನ ಪಡೆದರು. ಕ್ರಿಕೆಟ್ ಗೆ ಬಹುತೇಕ ವಿದಾಯ ಹೇಳುವ ಹಮಥದಲ್ಲಿ ಇದ್ದಾಗ ಅವರು ಕಂಬ್ಯಾಕ್ ಮಾಡಿದರು. ಈಗ ಡಿಕೆ ಅವರಿಗೆ 37 ವರ್ಷ. ಈ ಟಿ20 ವಿಶ್ವಕಪ್ ಬಳಿಕ ಅವರ ಹೆಸರನ್ನು ಆಡಳಿತ ಮಂಡಳಿ ಪರಿಗಣಿಸುವ ಸಾಧ್ಯತೆ ಕಡಿಮೆ. 2024ರ ಟಿ20 ವಿಶ್ವಕಪ್ಗೆ ಟೀಂ ಇಂಡಿಯಾವನ್ನು ಸಿದ್ಧಪಡಿಸಲು ಹಿರಿಯ ಆಟಗಾರನನ್ನು ಕೈಬಿಡಬಹುದು.
ವಿರಾಟ್ ಕೊಹ್ಲಿ: ವಿರಾಟ್ ಇತ್ತೀಚೆಗೆ ಮತ್ತೆ ತಮ್ಮ ಹಳೆಯ ಫಾರ್ಮ್ಗೆ ಮರಳಿದ್ದಾರೆ. ಆದರೂ ಅವರು ಕೆಲವು ಸರಣಿಗಳಿಂದ ದೂರ ಉಳಿದಿದ್ದಾರೆ. ಭವಿಷ್ಯದಲ್ಲಿ ಕೊಹ್ಲಿ ಒಂದು ಫಾರ್ಮ್ಯಾಟ್ ತೊರೆಯುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಕೊಹ್ಲಿ ಟೆಸ್ಟ್ ಕ್ರಿಕೆಟ್ ಅನ್ನು ಇಷ್ಟಪಡುತ್ತಾರೆ. ಜೊತೆಗೆ ಏಕದಿನ ವಿಶ್ವಕಪ್ಗಾಗಿ ಟಿ20 ಮಾದರಿಯಿಂದ ಹಿಂದೆ ಸರಿಯಬಹುದು. 2023ರ ವಿಶ್ವಕಪ್ ಮೇಲೆ ಹೆಚ್ಚು ಗಮನ ಹರಿಸಲು ಅವರು ಕೊಹ್ಲಿ ಖಂಡಿತವಾಗಿಯೂ ವಿಶ್ವದ ಅತ್ಯುತ್ತಮ ಟಿ20 ಆಟಗಾರರಲ್ಲಿ ಒಬ್ಬರು.
ರವಿಚಂದ್ರನ್ ಅಶ್ವಿನ್: ಒಂದು ಕಾಲದಲ್ಲಿ ಟೆಸ್ಟ್ ಸ್ಪೆಷಲಿಸ್ಟ್ ಎಂದೇ ಹೆಸರಾಗಿದ್ದ ರವಿಚಂದ್ರನ್ ಅಶ್ವಿನ್ ಈಗ ಐಪಿಎಲ್ ನಂತಹ ಸೀಮಿತ ಓವರ್ ಗಳಲ್ಲಿಯೂ ಅದ್ಭುತ ಪ್ರದರ್ಶನ ನೀಡುವ ಮೂಲಕ ತಂಡದ ಬೆನ್ನೆಲುಬಾಗಿದ್ದಾರೆ. ಕಳೆದ 10 ಟಿ20 ಪಂದ್ಯಗಳಲ್ಲಿ ಅಶ್ವಿನ್ ಅವರ ಎಕಾನಮಿ ರೇಟ್ 6.10 ಆಗಿದೆ. ಈ ಸ್ಪಿನ್ನರ್ 2021ರಿಂದ ಕನಿಷ್ಠ 10 ವಿಕೆಟ್ ಪಡೆದಿದ್ದಾರೆ. ಇಂತಹ ಅದ್ಭುತ ಪ್ರದರ್ಶನದಿಂದಾಗಿ ಬಿಸಿಸಿಐ ಈ 35 ವರ್ಷದ ಹಿರಿಯ ಸ್ಪಿನ್ನರ್ಗೆ ಟಿ20 ವಿಶ್ವಕಪ್ನಲ್ಲಿ ಆಡುವ ಅವಕಾಶವನ್ನು ನೀಡಿದೆ. ಆದರೆ ಈ ವಿಶ್ವಕಪ್ ಅವರ ವೃತ್ತಿಜೀವನದಲ್ಲಿ ಕೊನೆಯದಾಗಿರಬಹುದು.