ಈ ಪಟ್ಟಿಯಲ್ಲಿ ಮೊಹಮ್ಮದ್ ಶಮಿ ಕೂಡ ಇದ್ದಾರೆ. ವಾಸ್ತವವಾಗಿ, ಅವರು ಈ ವಿಶ್ವಕಪ್‌ನಲ್ಲಿ ಆಡಬೇಕಾಗಿಲ್ಲ. ಆದರೆ, ಪ್ರಸಿದ್ಧ್ ಗಾಯ, ಅವೇಶ್ ಖಾನ್ ಅವರ ಕಳಪೆ ಫಾರ್ಮ್, ಕೊನೆಯಲ್ಲಿ ಬುಮ್ರಾ ಗಾಯಗೊಂಡಿದ್ದರಿಂದ ಶಮಿ ಟಿ20 ವಿಶ್ವಕಪ್‌ನಲ್ಲಿ ಸ್ಥಾನ ಪಡೆದರು. ಅವರಿಗೆ ಕೇವಲ 32 ವರ್ಷವಾದರೂ ಈ ಬಾರಿಯ ವಿಶ್ವಕಪ್ ಬಳಿಕವೇ ಟೆಸ್ಟ್ ಹಾಗೂ ಏಕದಿನ ಪಂದ್ಯಗಳಿಗೆ ಸೀಮಿತವಾಗುವ ಸಾಧ್ಯತೆ ಇದೆ.
ಹಿಟ್ ಮ್ಯಾನ್ ರೋಹಿತ್ ಶರ್ಮಾಗೆ ಇದು ಕೊನೆಯ ವಿಶ್ವಕಪ್ ಆಗಿರಬಹುದು. ಈ ಸುದ್ದಿ ಅವರ ಅಭಿಮಾನಿಗಳಿಗೆ ಇಷ್ಟವಾಗದೇ ಇರಬಹುದು. ಆದರೆ ಸದ್ಯ ರೋಹಿತ್ ಗೆ 35 ವರ್ಷ. ಆಟದ ವಿಚಾರದಲ್ಲಿ ರೋಹಿತ್ ಅವರನ್ನು ಬದಿಗೊತ್ತಲು ಅವಕಾಶವಿಲ್ಲ. ಆದಾಗ್ಯೂ, ಗಾಯಗಳು ಮತ್ತು ಫಿಟ್ನೆಸ್ ಸಮಸ್ಯೆಗಳು ಅವರ ವಿರುದ್ಧವಾಗಿವೆ. ಫಿಟ್ನೆಸ್ ಕಡೆ ಹೆಚ್ಚು ಗಮನ ಹರಿಸಿದರೆ 2024ರ ವಿಶ್ವಕಪ್ ಕಣದಲ್ಲಿ ರೋಹಿತ್ ಕಣಕ್ಕಿಳಿಯುವ ಸಾಧ್ಯತೆ ಇದೆ.
ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಕೂಡ ಇದ್ದಾರೆ. ಫಿಟ್ ಆಗಿರುವ ಕೊಹ್ಲಿ ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಏಕೆ ಆಡುವುದಿಲ್ಲ ಎಂದು ಅವರ ಅಭಿಮಾನಿಗಳು ಕೇಳಬಹುದು. ಈ ವಿಶ್ವಕಪ್ ಬಳಿಕ ಕೊಹ್ಲಿ ಮತ್ತು ಜಡೇಜಾ ಮೇಲೆ ಟ್ರಾನ್ಸಿಶನ್ ವಿಧಾನವನ್ನು ಅಳವಡಿಸುವ ಸಾಧ್ಯತೆ ಇದೆ. ಅಂದರೆ ಧವನ್ ರೀತಿಯಲ್ಲಿ ಕೊಹ್ಲಿ ಒಂದೋ ಎರಡೋ ಫಾರ್ಮೆಟ್ ಗೆ ಸೀಮಿತವಾಗುವ ಸಾಧ್ಯತೆ ಇದೆ. ಮುಂದಿನ ಟಿ20 ವಿಶ್ವಕಪ್‌ನಲ್ಲಿ ಕೊಹ್ಲಿ ಆಡುವುದು ಅನುಮಾನ.