T20 WC 2022: ಈ ಬಾರಿ ಟಿ20 ವಿಶ್ವಕಪ್ ಗೆಲ್ಲೋದು ಏಷ್ಯಾ ತಂಡವಂತೆ! ಕಾರಣ ಏನು ಗೊತ್ತಾ?
T20 World Cup 2022: ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಭಾರತದೊಂದಿಗೆ ಟೂರ್ನಿಯಲ್ಲಿ ಹಾಟ್ ಫೇವರಿಟ್ಗಳಾಗಿವೆ. ಪಾಕಿಸ್ತಾನ, ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳನ್ನು ಕಡಿಮೆ ಅಂದಾಜಿಸಿದರೆ ನಷ್ಟ ಅನುಭವಿಸಬೇಕಾಗುವ ಸಾಧ್ಯತೆ ಇದೆ.
2022ರ ಟಿ20 ವಿಶ್ವಕಪ್ಗೆ ವೇದಿಕೆ ಸಜ್ಜಾಗಿದೆ. ಎಲ್ಲಾ 16 ತಂಡಗಳು ವಿಶ್ವಕಪ್ನಲ್ಲಿ ಅದೃಷ್ಟ ಪರೀಕ್ಷೆ ನಡೆಸಲಿವೆ. ಐರ್ಲೆಂಡ್, ಯುಎಇ, ಸ್ಕಾಟ್ಲೆಂಡ್, ನಮೀಬಿಯಾ ಮುಂತಾದ ತಂಡಗಳು ಸೂಪರ್ 12 ಹಂತಕ್ಕೆ ತಲುಪುವುದು ಅನುಮಾನ ಎನ್ನಲಾಗಿದೆ.
2/ 8
ಟೂರ್ನಿಯಲ್ಲಿ ಹಾಟ್ ಫೇವರಿಟ್ ಆಗಿ ಭಾರತದ ಜತೆಗೆ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳು ಕಣದಲ್ಲಿವೆ. ಪಾಕಿಸ್ತಾನ, ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳನ್ನು ಕಡಿಮೆ ಅಂದಾಜಿಸಿದರೆ ನಷ್ಟ ಅನುಭವಿಸಬೇಕಾಗಬುದು ಎಂದು ಕ್ರಿಕೆಟ್ ಪಂಡಿತರು ಹೇಳುತ್ತಿದ್ದಾರೆ.
3/ 8
ಆದರೆ, ಈ ಟೂರ್ನಿಯಲ್ಲಿ ಒಂದು ತಂಡ ಅಂಡರ್ರೇಟೆಡ್ ಟೀಂ ಆಗಿ ಕಣಕ್ಕಿಳಿದಿದೆ. ಏಷ್ಯಾದ ಈ ತಂಡ ನೇರವಾಗಿ ಸೂಪರ್ 12ಕ್ಕೆ ಅರ್ಹತೆ ಪಡೆದಿರಲಿಲ್ಲ. ದೇಶದಲ್ಲಿನ ಬಿಕ್ಕಟ್ಟು ಮತ್ತು ಕಳಪೆ ಪ್ರದರ್ಶನದಿಂದ ಶ್ರೀಲಂಕಾ ತಂಡವು ಇಲ್ಲಿಯವರೆಗೆ ಕಠಿಣ ಪರಿಸ್ಥಿತಿಗಳನ್ನು ಎದುರಿಸುತ್ತಿದೆ.
4/ 8
ಆದರೆ, ತಿಂಗಳ ಹಿಂದೆ ನಡೆದ ಏಷ್ಯಾಕಪ್ ಟೂರ್ನಿಯಲ್ಲಿ ಫೇವರಿಟ್ ಭಾರತ ಮತ್ತು ಪಾಕಿಸ್ತಾನಕ್ಕೆ ಆಘಾತ ನೀಡಿದ ಶ್ರೀಲಂಕಾ ತಂಡ ಚಾಂಪಿಯನ್ ಆಯಿತು. ಆ ಟೂರ್ನಿಯಲ್ಲಿ ಅಫ್ಘಾನಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲಿ ಹೀನಾಯವಾಗಿ ಸೋತ ಶ್ರೀಲಂಕಾ ನಂತರ ಅದ್ಭುತ ರೀತಿಯಲ್ಲಿ ಕಮ್ ಬ್ಯಾಕ್ ಮಾಡಿ ಚಾಂಪಿಯನ್ ಆಯಿತು.
5/ 8
ಯಾವುದೇ ನಿರೀಕ್ಷೆಯಿಲ್ಲದೆ ಶ್ರೀಲಂಕಾ ಟಿ20 ವಿಶ್ವಕಪ್ ಪ್ರವೇಶಿಸಿದೆ. ದಸುನ್ ಸನಕ ನಾಯಕತ್ವದಲ್ಲಿ ಶ್ರೀಲಂಕಾ ತಂಡ ಸಂಘಟಿತ ಪ್ರದರ್ಶನದ ಮೂಲಕ ಗೆಲ್ಲುವ ಸಾಧ್ಯತೆ ಇದೆ. ಸ್ಟಾರ್ ಆಟಗಾರರು ಇಲ್ಲದಿದ್ದರೂ ಉತ್ತಮ ಆಟವಾಡಿ ಯಶಸ್ಸು ಸಾಧಿಸುತ್ತಿದ್ದಾರೆ.
6/ 8
ಪ್ರಸ್ತುತ ಶ್ರೀಲಂಕಾ ತಂಡವನ್ನು ನೋಡಿದರೆ 2007ರ ಟಿ20 ವಿಶ್ವಕಪ್ನಲ್ಲಿ ಟೀಂ ಇಂಡಿಯಾ ನೆನಪಾಗದೇ ಇರದು. ನಂತರ ಯಾವುದೇ ನಿರೀಕ್ಷೆ ಇಲ್ಲದೆ ಕಣಕ್ಕಿಳಿದ ಭಾರತ ಏಕಾಂಗಿಯಾಗಿ ಚಾಂಪಿಯನ್ ಆಯಿತು.
7/ 8
ಶ್ರೀಲಂಕಾ ತನ್ನ T20 ವಿಶ್ವಕಪ್ ಬೇಟೆಯನ್ನು ನಮೀಬಿಯಾ ವಿರುದ್ಧ ಅಕ್ಟೋಬರ್ 16 ರಂದು ಪ್ರಾರಂಭಿಸಲಿದೆ. 'ಎ' ಗುಂಪಿನಲ್ಲಿರುವ ಶ್ರೀಲಂಕಾ ನಮೀಬಿಯಾ, ನೆದರ್ಲೆಂಡ್ಸ್ ಮತ್ತು ಯುಎಇ ವಿರುದ್ಧ ಪೈಪೋಟಿ ನಡೆಸಲಿದೆ. ಗುಂಪು ಹಂತ ದಾಟುವುದು ಶ್ರೀಲಂಕಾಕ್ಕೆ ಸುಲಭ ಎನ್ನಲಾಗಿದೆ.
8/ 8
ಶ್ರೀಲಂಕಾ ‘ಎ’ ಗುಂಪಿನ ಟಾಪರ್ ಆಗಿ ನಿಂತರೆ, ಸೂಪರ್ 12 ರಲ್ಲಿ ನಂ.1 ಗುಂಪಿಗೆ ಸೇರುತ್ತದೆ. ಅಲ್ಲಿ ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿವೆ.