T20 World Cup 2022: ಟಿ20 ವಿಶ್ವಕಪ್ನಲ್ಲಿ ಬಿಗ್ ಟ್ವಿಸ್ಟ್, ಭಾರತ-ಪಾಕ್ ಪಂದ್ಯ ನಡೆಯುವುದು ಡೌಟ್?
IND vs PAK T20 World Cup 2022: ಅಕ್ಟೋಬರ್ 23 ರಂದು ಬಹುಕಾಲದ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲಿವೆ. ಈ ಎರಡು ತಂಡಗಳ ನಡುವಿನ ಪಂದ್ಯ ಎಂದರೆ ಅಲ್ಲಿ 2 ದೇಶಗಳ ನಡುವಿನ ಅಭಿಮಾನಿಗಳಲ್ಲಿ ಹಾಗೂ ಕ್ರಿಕೆಟ್ ಲೋಕದಲ್ಲಿ ಸಖತ್ ಕ್ರೇಜ್ ಇರುತ್ತದೆ.
ಟಿ20 ವಿಶ್ವಕಪ್ 2022 ಇನ್ನೇನು ಕೆಲವೇ ಗಂಟೆಗಳಲ್ಲಿ ಆರಂಭವಾಗಲಿದೆ. ಧನಾಧನ್ ಸಮರಾ ಅಕ್ಟೋಬರ್ 16 ರಂದು ಆಸ್ಟ್ರೇಲಿಯಾದಲ್ಲಿ ಪ್ರಾರಂಭವಾಗಲಿದೆ. ಅಕ್ಟೋಬರ್ 22ರಂದು ಭರ್ಜರಿ ಪಂದ್ಯ ನಡೆಯಲಿದ್ದು, ಈ ಪಂದ್ಯದ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.
2/ 8
ಅಕ್ಟೋಬರ್ 23 ರಂದು ಬಹುಕಾಲದ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲಿವೆ. ಈ ಎರಡು ತಂಡಗಳ ನಡುವಿನ ಪಂದ್ಯ ಎಂದರೆ ಅಲ್ಲಿ 2 ದೇಶಗಳ ನಡುವಿನ ಅಭಿಮಾನಿಗಳಲ್ಲಿ ಹಾಗೂ ಕ್ರಿಕೆಟ್ ಲೋಕದಲ್ಲಿ ಸಖತ್ ಕ್ರೇಜ್ ಇರುತ್ತದೆ.
3/ 8
ಐಸಿಸಿ ಟೂರ್ನಿಗಳಲ್ಲಿ ಈ ಎರಡು ತಂಡಗಳು ಮುಖಾಮುಖಿಗಾಗಿ ಈಗಾಗಲೇ ಟಿಕೆಟ್ಗಳು ಸಂಪೂರ್ಣವಾಗಿ ಸೋಲ್ಡ್ ಔಟ್ ಆಗಿದೆ. ಅಕ್ಟೋಬರ್ 23ರ ಪಂದ್ಯಕ್ಕೆ ಈಗಾಗಲೇ 90,000ಕ್ಕೂ ಹೆಚ್ಚು ಟಿಕೆಟ್ಗಳು ಮಾರಾಟವಾಗಿವೆ.
4/ 8
ಆದರೆ ಈ ಪಂದ್ಯದ ಮೇಲೆ ನೀಲಿ ಛಾಯೆ ಆವರಿಸಿದೆ. ಅಕ್ಟೋಬರ್ 23 ರಂದು ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಅನುಮಾನವಾಗಿದೆ. ಇದಕ್ಕೆ ಕಾರಣ ಮಳೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವು ಮೆಲ್ಬೋರ್ನ್ನ ಪ್ರಸಿದ್ಧ ಕ್ರೀಡಾಂಗಣ ಎಂಸಿಜಿಯಲ್ಲಿ ನಡೆಯಲಿದೆ.
5/ 8
ಆದರೆ ಮುಂದಿನ ಗುರುವಾರದಿಂದ ಮೆಲ್ಬೋರ್ನ್ ನಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಭಾನುವಾರ (ಅಕ್ಟೋಬರ್ 23) ಭಾರೀ ಮಳೆಯ ಮುನ್ಸೂಚನೆ ಇದಲ್ಲದೆ, ಮೆಲ್ಬೋರ್ನ್ನ ಕೆಲವು ಭಾಗಗಳಲ್ಲಿ ಭಾರೀ ಮಳೆಯ ಮುನ್ಸೂಚನೆಯನ್ನು ಸಹ ನೀಡಲಾಗಿದೆ.
6/ 8
ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹೀಗಾದರೆ ಭಾರತ-ಪಾಕಿಸ್ತಾನ ನಡುವಿನ ಪಂದ್ಯ ವೀಕ್ಷಿಸಲು ಬಯಸುವ ಅಭಿಮಾನಿಗಳಿಗೆ ನಿರಾಸೆಯಾಗಲಿದೆ.
7/ 8
ಇದು ಆಸ್ಟ್ರೇಲಿಯಾದಲ್ಲಿ ಬೇಸಿಗೆ. ಆದರೆ, ಬದಲಾದ ಹವಾಮಾನದಿಂದಾಗಿ ಮುಂಗಾರು ಮಳೆಯ ಜೊತೆಗೆ ಅಲ್ಲಿಯೂ ಮಳೆ ಸುರಿಯುತ್ತಿದೆ. 2019-2020 ರ ನಡುವೆ ಬೆಂಕಿಯಿಂದಾಗಿ ಆಸ್ಟ್ರೇಲಿಯಾದ ಕಾಡುಗಳು ಸುಟ್ಟುಹೋಗಿದ್ದವು.ವ
8/ 8
ಟಿ20 ವಿಶ್ವಕಪ್ಗಾಗಿ ಈಗಾಗಲೇ ಆಸ್ಟ್ರೇಲಿಯಾ ತಲುಪಿರುವ ಭಾರತ ತಂಡ ಅಕ್ಟೋಬರ್ 17 ಮತ್ತು 19 ರಂದು ಎರಡು ಅಭ್ಯಾಸ ಪಂದ್ಯಗಳನ್ನು ಆಡಲಿದೆ. ಭಾರತ ಮೊದಲು ಅಭ್ಯಾಸ ಪಂದ್ಯಗಳನ್ನು ಆಸ್ಟ್ರೇಲಿಯಾ ವಿರುದ್ಧ ಮತ್ತು ನಂತರ ನ್ಯೂಜಿಲೆಂಡ್ ವಿರುದ್ಧ ಆಡಲಿದೆ.