Sorry ಮ್ಯಾಂಗೋ! ಕೊಹ್ಲಿ ಜೊತೆ ಕಿರಿಕ್​ ಮಾಡಿದ್ದ ನವೀನ್​ ಉಲ್​ ಹಕ್​​ಗೆ ಸ್ವಿಗ್ಗಿ ಟಾಂಗ್!

Virat Kohli: ಕೊಹ್ಲಿ ಹೈದರಾಬಾದ್​ ವಿರುದ್ಧ ಭರ್ಜರಿ ಶತಕ ಸಿಡಿಸುವ ಮೂಲಕ ಆರ್​ಸಿಬಿ ತಂಡವನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಆದರೆ ಈ ಶತಕದ ಸಂಭ್ರಮವನ್ನು ಬಳಿಸಿಕೊಂಡು ಸ್ವಿಗ್ಗಿ ಲಕ್ನೋದ ಬೌಲರ್​ಗೆ ಟಾಂಗ್​ ನೀಡದೆ.

First published:

  • 17

    Sorry ಮ್ಯಾಂಗೋ! ಕೊಹ್ಲಿ ಜೊತೆ ಕಿರಿಕ್​ ಮಾಡಿದ್ದ ನವೀನ್​ ಉಲ್​ ಹಕ್​​ಗೆ ಸ್ವಿಗ್ಗಿ ಟಾಂಗ್!

    ವಿರಾಟ್ ಕೊಹ್ಲಿ 1490 ದಿನಗಳ ನಂತರ ಐಪಿಎಲ್‌ನಲ್ಲಿ ಶತಕ ಬಾರಿಸಿದ್ದಾರೆ. ಇದಕ್ಕೂ ಮೊದಲು ಐಪಿಎಲ್‌ನಲ್ಲಿ ಅವರು ತಮ್ಮ ಕೊನೆಯ ಶತಕವನ್ನು 2019 ರ ಐಪಿಎಲ್‌ನಲ್ಲಿ ಗಳಿಸಿದ್ದರು. ಹೈದರಾಬಾದ್ ವಿರುದ್ಧ ಕೊಹ್ಲಿ 63 ಎಸೆತಗಳಲ್ಲಿ 100 ರನ್ ಗಳಿಸಿ ಮಿಂಚಿದರು.

    MORE
    GALLERIES

  • 27

    Sorry ಮ್ಯಾಂಗೋ! ಕೊಹ್ಲಿ ಜೊತೆ ಕಿರಿಕ್​ ಮಾಡಿದ್ದ ನವೀನ್​ ಉಲ್​ ಹಕ್​​ಗೆ ಸ್ವಿಗ್ಗಿ ಟಾಂಗ್!

    ವಿರಾಟ್ ಅವರ ಈ ಶತಕದ ಇನ್ನಿಂಗ್ಸ್ ನಂತರ, ಲಕ್ನೋ ಸೂಪರ್‌ಜೈಂಟ್ಸ್ ಟ್ವೀಟ್ ಮಾಡಿದ್ದು, ಇದಕ್ಕೆ ಅಭಿಮಾನಿಗಳು ಸಖತ್​ ಕಾಮೆಂಟ್​ ಮಾಡುತ್ತಿದ್ದಾರೆ. ವಿರಾಟ್ ಕೊಹ್ಲಿ ಶತಕದ ನಂತರ, ಲಕ್ನೋ ತಮ್ಮ ಟ್ವಿಟ್ಟರ್ ಮೂಲಕ "ವಿರಾಟ್ ಕೊಹ್ಲಿ ಅವರು ಅತ್ಯುತ್ತಮ" ಎಂದು ಬರೆದಿದ್ದಾರೆ.

    MORE
    GALLERIES

  • 37

    Sorry ಮ್ಯಾಂಗೋ! ಕೊಹ್ಲಿ ಜೊತೆ ಕಿರಿಕ್​ ಮಾಡಿದ್ದ ನವೀನ್​ ಉಲ್​ ಹಕ್​​ಗೆ ಸ್ವಿಗ್ಗಿ ಟಾಂಗ್!

    ಈ ಟ್ವೀಟ್​ಗೆ ಕೆಲವು ದಿನಗಳ ಹಿಂದೆ ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿ ನಡುವೆ ಮೈದಾನದಲ್ಲಿ ನಡೆದ ವಾದವನ್ನು ಅಭಿಮಾನಿಗಳು ಕಾಮೆಂಟ್​ ಮೂಲಕ ನೆನಪಿಸುತ್ತಿದ್ದಾರೆ. ಅಭಿಮಾನಿಗಳು ತಮ್ಮ ಪ್ರತಿಕ್ರಿಯೆಗಳಲ್ಲಿ ಗಂಭೀರ್ ಮತ್ತು ನವೀನ್-ಉಲ್-ಹಕ್ ಅವರನ್ನೂ ಉಲ್ಲೇಖಿಸಿದ್ದಾರೆ.

    MORE
    GALLERIES

  • 47

    Sorry ಮ್ಯಾಂಗೋ! ಕೊಹ್ಲಿ ಜೊತೆ ಕಿರಿಕ್​ ಮಾಡಿದ್ದ ನವೀನ್​ ಉಲ್​ ಹಕ್​​ಗೆ ಸ್ವಿಗ್ಗಿ ಟಾಂಗ್!

    ಇದರ ನಡುವೆ ಕೊಹ್ಲಿ ಅಭಿಮಾನಿಗಳು ನವೀನ್​ ಉಲ್​ ಹಕ್​ ಅವರನ್ನು ಟ್ರೋಲ್​ ಮಾಡುತ್ತಿದ್ದರು. ಆದರೆ ಇದೀಗ ಕೊಹ್ಲಿ ಶತಕದ ಬಳಿಕ ಆಹಾರ ವಿತರಣೆ ಸಂಸ್ಥೆ ಸ್ವಿಗ್ಗಿ ಸಹ ನವೀನ್​ ಉಲ್​ ಹಕ್​ಗೆ ಸಖತ್​ ಕೌಂಟರ್​ ನೀಡಿದೆ.

    MORE
    GALLERIES

  • 57

    Sorry ಮ್ಯಾಂಗೋ! ಕೊಹ್ಲಿ ಜೊತೆ ಕಿರಿಕ್​ ಮಾಡಿದ್ದ ನವೀನ್​ ಉಲ್​ ಹಕ್​​ಗೆ ಸ್ವಿಗ್ಗಿ ಟಾಂಗ್!

    ಹೌದು, ಕೊಹ್ಲಿ ಹೈದರಾಬಾದ್​ ವಿರುದ್ಧ ಭರ್ಜರಿ ಶತಕ ಸಿಡಿಸುವ ಮೂಲಕ ಆರ್​ಸಿಬಿ ತಂಡವನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಆದರೆ ಈ ಶತಕದ ಸಂಭ್ರಮವನ್ನು ಬಳಸಿಕೊಂಡು ಸ್ವಿಗ್ಗಿ ಲಕ್ನೋದ ಬೌಲರ್​ಗೆ ಟಾಂಗ್​ ನೀಡಿದೆ.

    MORE
    GALLERIES

  • 67

    Sorry ಮ್ಯಾಂಗೋ! ಕೊಹ್ಲಿ ಜೊತೆ ಕಿರಿಕ್​ ಮಾಡಿದ್ದ ನವೀನ್​ ಉಲ್​ ಹಕ್​​ಗೆ ಸ್ವಿಗ್ಗಿ ಟಾಂಗ್!

    ಕೊಹ್ಲಿ ಶತಕದ ಬಳಿಕ ಟ್ವೀಟ್​ ಮಾಡಿರುವ ಸ್ವಿಗ್ಗಿ, ‘Sorry ಮ್ಯಾಂಗೋ... ಚೀಕ್​​ ನಿಜವಾದ ಕಿಂಗ್‘​ ಎಂದು ತನ್ನ ಅಧಿಕೃತ ಟ್ವಿಟರ್​ ಹ್ಯಾಂಡಲ್​​ನಲ್ಲಿ ಟ್ವೀಟ್​ ಮಾಡುವ ಮೂಲಕ ನವೀನ್​ ಉಲ್​ ಹಕ್​ಗೆ ಟಕ್ಕರ್ ನೀಡಿದೆ.

    MORE
    GALLERIES

  • 77

    Sorry ಮ್ಯಾಂಗೋ! ಕೊಹ್ಲಿ ಜೊತೆ ಕಿರಿಕ್​ ಮಾಡಿದ್ದ ನವೀನ್​ ಉಲ್​ ಹಕ್​​ಗೆ ಸ್ವಿಗ್ಗಿ ಟಾಂಗ್!

    ಕೊಹ್ಲಿ ಮತ್ತು ನವೀನ್​ ಉಲ್​ ಹಕ್​ ಜಗಳ ಬಳಿಕ ನವೀನ್​ ಉಲ್​​ ಹಕ್​ ಆರ್​​ಸಿಬಿ ಪಂದ್ಯದ ವೇಳೆ ಮಾವಿನ ಹಣ್ಣಿನ ಚಿತ್ರವನ್ನು ಹಂಚಿಕೊಂಡು ಕೊಹ್ಲಿಗೆ ಪರೋಕ್ಷವಾಗಿ ಟಾಂಗ್​ ನೀಡಿದ್ದರು. ಇದೀಗ ಸ್ವಿಗ್ಗಿ ಇದಕ್ಕೆ ತನ್ನದೇ ರೀತಿಯಲ್ಲಿ ಕೌಂಟರ್​ ನೀಡಿದೆ.

    MORE
    GALLERIES