Prithvi Shaw: ಅವರು ಯಾರೆಂದು ನನಗೆ ಗೊತ್ತಿಲ್ಲ, ಪೃಥ್ವಿ ಶಾ ಪ್ರಕರಣದಲ್ಲಿ ಬಿಗ್​ ಟ್ವಿಸ್ಟ್

Prithvi Shaw: ಭಾರತೀಯ ಕ್ರಿಕೆಟಿಗ ಪೃಥ್ವಿ ಶಾ ಅವರೊಂದಿಗಿನ ಜಗಳದ ವಿಡಿಯೋ ವೈರಲ್ ಆದ ನಂತರ ನಟಿ ಸಪ್ನಾ ಗಿಲ್ ಅವರನ್ನು ಬಂಧಿಸಲಾಗಿದೆ. ಆದರೆ ಇದೀಗ ಈ ಪ್ರಕರಣಕ್ಕೆ ಹೊಸ ಟ್ವಿಸ್ಟ್​ ಸಿಕ್ಕಿದೆ.

First published:

  • 17

    Prithvi Shaw: ಅವರು ಯಾರೆಂದು ನನಗೆ ಗೊತ್ತಿಲ್ಲ, ಪೃಥ್ವಿ ಶಾ ಪ್ರಕರಣದಲ್ಲಿ ಬಿಗ್​ ಟ್ವಿಸ್ಟ್

    ಟೀಂ ಇಂಡಿಯಾ ಕ್ರಿಕೆಟಿಗ ಪೃಥ್ವಿ ಶಾ ಮೇಲಿನ ಹಲ್ಲೆ ಪ್ರಕರಣದ ಆರೋಪಿ ಸಪ್ನಾ ಗಿಲ್​ಗೆ ಮುಂಬೈ ಮ್ಯಾಜಿಸ್ಟ್ರೇಟ್ ಕೋರ್ಟ್ ಕಸ್ಟಡಿ ನೀಡುವಂತೆ ಆದೇಶ ಹೊರಡಿಸಿದೆ. ಆದರೆ, ವಿಚಾರಣೆ ವೇಳೆ ನಟಿ ಸಪ್ನಾ ಗಿಲ್ ಪರ ವಕೀಲರು ನ್ಯಾಯಾಲಯದಲ್ಲಿ ಪೃಥ್ವಿ ಶಾಗೆ ಸಂಬಂಧಿಸಿದ ಹಲವು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ ಎಂದು ವರದಿಯಾಗಿದೆ.

    MORE
    GALLERIES

  • 27

    Prithvi Shaw: ಅವರು ಯಾರೆಂದು ನನಗೆ ಗೊತ್ತಿಲ್ಲ, ಪೃಥ್ವಿ ಶಾ ಪ್ರಕರಣದಲ್ಲಿ ಬಿಗ್​ ಟ್ವಿಸ್ಟ್

    ಬಿಸಿಸಿಐ ಈ ಹಿಂದೆ ಮದ್ಯಪಾನ ಮಾಡುವ ಅಭ್ಯಾಸ ಹೊಂದಿರುವ ಪೃಥ್ವಿ ಶಾಗೆ ನಿಷೇಧ ಹೇರಿತ್ತು ಎಂದು ಸಪ್ನಾ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಈ ಪ್ರಕರಣಕ್ಕೆ ಯಾವುದೇ ಆಧಾರವಿಲ್ಲ. ಘಟನೆ ನಡೆದು 15 ಗಂಟೆಗಳ ಬಳಿಕ ಪೃಥ್ವಿ ಶಾ ದೂರು ನೀಡಿದ್ದಾರೆ. ಏಕೆ ಮೊದಲೇ ದೂರು ನೀಡಲಿಲ್ಲ ಎಂದು ಪ್ರಶ್ನಿಸಿದ್ದಾರೆ.

    MORE
    GALLERIES

  • 37

    Prithvi Shaw: ಅವರು ಯಾರೆಂದು ನನಗೆ ಗೊತ್ತಿಲ್ಲ, ಪೃಥ್ವಿ ಶಾ ಪ್ರಕರಣದಲ್ಲಿ ಬಿಗ್​ ಟ್ವಿಸ್ಟ್

    ಮುಂದಿನ ತನಿಖೆಯಲ್ಲಿ ಸಪ್ನಾಗೆ ವಿಧಿಸಲಾಗಿರುವ ಪೊಲೀಸ್ ಕಸ್ಟಡಿಯನ್ನು ತೆಗೆದುಹಾಕುವ ನಿರೀಕ್ಷೆಯಿದೆ ಎಂದು ವಕೀಲರು ತಿಳಿಸಿದ್ದಾರೆ. ಜಾಮೀನು ಕೋರಿ ಮೇಲ್ಮನವಿ ಸಲ್ಲಿಸಲಿದ್ದಾರೆ. ಎಫ್‌ಐಆರ್‌ನಲ್ಲಿ ಸೆಕ್ಷನ್ 387 ಅನ್ನು ಸಹ ಸೇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    MORE
    GALLERIES

  • 47

    Prithvi Shaw: ಅವರು ಯಾರೆಂದು ನನಗೆ ಗೊತ್ತಿಲ್ಲ, ಪೃಥ್ವಿ ಶಾ ಪ್ರಕರಣದಲ್ಲಿ ಬಿಗ್​ ಟ್ವಿಸ್ಟ್

    ಪೃಥ್ವಿ ಶಾ ಯಾರೆಂದು ನನಗೆ ತಿಳಿದಿಲ್ಲ ಎಂದು ಸಾಮಾಜಿಕ ಮಾಧ್ಯಮದ ಪ್ರಭಾವಿ ಸಪ್ನಾ ಗಿಲ್ ಹೇಳಿದ್ದಾರೆ. ಆತನಿಂದ ಹಣಕ್ಕೆ ಬೇಡಿಕೆಯಿಟ್ಟಿರುವ ಆರೋಪವನ್ನು ಆಕೆ ನಿರಾಕರಿಸಿದ್ದಾರೆ.

    MORE
    GALLERIES

  • 57

    Prithvi Shaw: ಅವರು ಯಾರೆಂದು ನನಗೆ ಗೊತ್ತಿಲ್ಲ, ಪೃಥ್ವಿ ಶಾ ಪ್ರಕರಣದಲ್ಲಿ ಬಿಗ್​ ಟ್ವಿಸ್ಟ್

    ಆದರೆ, ತನ್ನ ಸ್ನೇಹಿತ ಶೋಬಿತ್ ಠಾಕೂರ್ ಅವರು ಪೃಥ್ವಿ ಶಾ ಅವರನ್ನು ಸೆಲ್ಫಿಗಾಗಿ ಕೇಳಿದ್ದಾರೆ ಎಂದು ಸಪ್ನಾ ಹೇಳಿದ್ದಾರೆ.

    MORE
    GALLERIES

  • 67

    Prithvi Shaw: ಅವರು ಯಾರೆಂದು ನನಗೆ ಗೊತ್ತಿಲ್ಲ, ಪೃಥ್ವಿ ಶಾ ಪ್ರಕರಣದಲ್ಲಿ ಬಿಗ್​ ಟ್ವಿಸ್ಟ್

    ಬುಧವಾರ ರಾತ್ರಿ ಪೃಥ್ವಿ ಶಾ ಮತ್ತು ಅವರ ಸ್ನೇಹಿತರು ಸಾಂತಾಕ್ರೂಜ್ ಪ್ರದೇಶದ ಹೋಟೆಲ್‌ಗೆ ಊಟಕ್ಕೆ ಹೋಗಿದ್ದರು. ಸಪ್ನಾ ಗಿಲ್ ಕೂಡ ಅದೇ ಹೋಟೆಲ್‌ನಲ್ಲಿ ತನ್ನ ಕೆಲವು ಸ್ನೇಹಿತರ ಜೊತೆ ಪಾರ್ಟಿ ಮಾಡುತ್ತಿದ್ದರು. ಇದೇ ವೇಳೆ ಸಪ್ನಾ ತನ್ನ ಸ್ನೇಹಿತರ ಜೊತೆ ಸೆಲ್ಫಿಗೆ ಪೃಥ್ವಿ ಶಾ ಬಳಿ ವಿನಂತಿಸಿದ್ದಾಳೆ. ಪೃಥ್ವಿ ಅವರೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಾರೆ. ಇದರ ಹೊರತಾಗಿಯೂ, ಸಪ್ನಾ ಮತ್ತು ಅವರ ಸಹಚರರು ಪೃಥ್ವಿಯ ಫೋಟೋಗಳು ಮತ್ತು ವೀಡಿಯೊಗಳನ್ನು ರೆಕಾರ್ಡ್ ಮಾಡುತ್ತಿದ್ದರು. ಈ ಬಗ್ಗೆ ಶಾ ಅಸಮಾಧಾನ ವ್ಯಕ್ತಪಡಿಸಿದ್ದು, ವಿವಾದ ಶುರುವಾಗಿದೆ.

    MORE
    GALLERIES

  • 77

    Prithvi Shaw: ಅವರು ಯಾರೆಂದು ನನಗೆ ಗೊತ್ತಿಲ್ಲ, ಪೃಥ್ವಿ ಶಾ ಪ್ರಕರಣದಲ್ಲಿ ಬಿಗ್​ ಟ್ವಿಸ್ಟ್

    ಈ ಬಗ್ಗೆ ಪೃಥ್ವಿ ರೆಸ್ಟೋರೆಂಟ್‌ನ ಮ್ಯಾನೇಜರ್‌ಗೆ ಕರೆ ಮಾಡಿ ಸಪ್ನಾ ವಿರುದ್ಧ ದೂರು ನೀಡಿದ್ದರು. ಆ ವೇಳೆ ಹೊಟೇಲ್ ಮ್ಯಾನೇಜರ್ ಮಾತನಾಡಿ ಸಮಾಧಾನಪಡಿಸಿ ಸಪ್ನಾ ಹಾಗೂ ಆಕೆಯ ಸ್ನೇಹಿತರನ್ನು ಹೋಟೆಲ್ ನಿಂದ ಹೊರ ಹಾಕಿದ್ದಾರೆ. ಆದರೆ ಪೃಥ್ವಿ ಶಾ ತನ್ನ ಸ್ನೇಹಿತರೊಂದಿಗೆ ರಾತ್ರಿ ಊಟ ಮುಗಿಸಿ ಹೋಟೆಲ್‌ನಿಂದ ಹೊರಗೆ ಬಂದಾಗ ವಿವಾದ ತಾರಕಕ್ಕೇರಿತ್ತು.

    MORE
    GALLERIES