ಮುಂಬೈನಿಂದ ಆಡುತ್ತಿರುವ ಸೂರ್ಯ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ (IND vs BAN) ಅವಕಾಶ ಪಡೆದಿಲ್ಲ. ಭಾರತ ಈಗ ಆಸ್ಟ್ರೇಲಿಯಾದ ಜೊತೆ ತವರಿನಲ್ಲಿ ಟೆಸ್ಟ್ ಸರಣಿಯನ್ನು ಆಡಬೇಕಾಗಿದೆ. ಇದಕ್ಕೂ ಮುನ್ನ ರಣಜಿ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಲಯ ಸಾಧಿಸಲು ಸೂರ್ಯ ಸಿದ್ಧರಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಯು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಭಾಗವಾಗಿದೆ.
ಆದರೆ, ಸೂರ್ಯಕುಮಾರ್ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯಲು ಹಲವು ಅನುಭವಿಗಳೊಂದಿಗೆ ಪೈಪೋಟಿ ನಡೆಸಬೇಕಾಗುತ್ತದೆ. 3ನೇ ಕ್ರಮಾಂಕದಲ್ಲಿ ಆಡುತ್ತಿರುವ ಚೇತೇಶ್ವರ ಪೂಜಾರ ಬಾಂಗ್ಲಾದೇಶ ಪ್ರವಾಸಕ್ಕೆ ಆಯ್ಕೆಯಾಗಿದ್ದಾರೆ. ಈ ವರ್ಷ ಟೆಸ್ಟ್ನಲ್ಲಿ ಅವರ ಸಾಧನೆ ವಿಶೇಷವೇನಲ್ಲ. ಅವರು 3 ಪಂದ್ಯಗಳ 6 ಇನ್ನಿಂಗ್ಸ್ಗಳಲ್ಲಿ 31 ರ ಸರಾಸರಿಯಲ್ಲಿ 187 ರನ್ ಗಳಿಸಿದ್ದಾರೆ. 2 ಅರ್ಧಶತಕ ಗಳಿಸಿದ್ದಾರೆ.