Suryakumar Yadav: ಭಾರತ ಕ್ರಿಕೆಟ್ ಇತಿಹಾಸದಲ್ಲಿ ಅಪರೂಪದ ರೆಕಾರ್ಡ್ ಬರೆದ ಸೂರ್ಯಕುಮಾರ್, ಕೊಹ್ಲಿಯಿಂದಲೂ ಮಾಡಲಾಗದ ದಾಖಲೆ ಮಾಡಿದ SKY
Suryakumar Yadav: ಸೂರ್ಯಕುಮಾರ್ ಯಾದವ್ ಸದ್ಯ ಟಿ20 ಕ್ರಿಕೆಟ್ನಲ್ಲಿ ಹೆಚ್ಚು ಕೇಳಿಬರುತ್ತಿರುವ ಹೆಸರು. ಯಾವುದೇ ಪಿಚ್ ಆದರೂ ಸಹ ಸೂರ್ಯಕುಮಾರ್ ಯಾದವ್ ಬಿರುಸಿನ ಬ್ಯಾಟಿಂಗ್ ಮಾಡುವುದರಲ್ಲಿ ಹೆಸರುವಾಸಿ. ಇಂತಹ ಆಟಗಾರ ಇದೀಗ ಯಾರೂ ಮಾಡಲಾಗದ ದಾಖಲೆಯನ್ನು ನಿರ್ಮಿಸಿದ್ದಾರೆ.
30ರ ಹರೆಯದಲ್ಲಿ ಟೀಂ ಇಂಡಿಯಾಕ್ಕೆ ಪದಾರ್ಪಣೆ ಮಾಡಿದ ಸೂರ್ಯಕುಮಾರ್, ಕೆಲವೇ ಸಮಯದಲ್ಲಿ ಟಿ20 ಮಾದರಿಯಲ್ಲಿ ಟೀಂ ಇಂಡಿಯಾದ ಬೆನ್ನೆಲುಬಾಗಿ ನಿಂತಿದ್ದಾರೆ. ಟಿ20 ಕ್ರಿಕೆಟ್ಗೆ ಹೇಳಿ ಮಾಡಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
2/ 8
ಪಿಚ್ ಯಾವುದೇ ಆದರೂ ಸಹ ಸೂರ್ಯ ಅವರು ಎಲ್ಲಾ ತಂಡಗಳ ಎದುರು ರನ್ ಮಳೆ ಸುರಿಸುತ್ತಾರೆ. ಮಧ್ಯಮ ಓವರ್ಗಳಲ್ಲಿ 200 ಸ್ಟ್ರೈಕ್ ರೇಟ್ನೊಂದಿಗೆ ರನ್ ಗಳಿಸುವುದು ಸೂರ್ಯಕುಮಾರ್ ಅವರ ವಿಶೇಷತೆಯಾಗಿದೆ.
3/ 8
ಟಿ20 ವಿಶ್ವಕಪ್ನಲ್ಲಿ ಸೂರ್ಯ ವಿಫಲರಾದರೂ ಬಳಿಕ ಇತ್ತೀಚೆಗೆ ಶ್ರೀಲಂಕಾ ವಿರುದ್ಧದ ಮೂರನೇ ಟಿ20ಯಲ್ಲಿ (51 ಎಸೆತಗಳಲ್ಲಿ ಔಟಾಗದೆ 112; 7 ಬೌಂಡರಿ, 9 ಸಿಕ್ಸರ್ ಸಿಡಿಸಿ ಭರ್ಜರಿ ಶತಕ ಸಿಡಿಸಿದರು.
4/ 8
ಇದು ಸೂರ್ಯ ಅವರ ಮೂರನೇ ಟಿ20 ಶತಕವಾಗಿದೆ. ಈ ಇನ್ನಿಂಗ್ಸ್ನಲ್ಲೂ ಅವರು ತಮ್ಮ 360 ಡಿಗ್ರಿ ಮಾರ್ಕ್ ಶಾಟ್ಗಳ ಮೂಲಕ ರಂಜಿಸಿದರು. ಈ ಮೂಳಕ ಸೂರ್ಯಕುಮಾರ್ ಅವರು ಮತ್ತೊಂದು ಅಪರೂಪದ ದಾಖಲೆಯನ್ನು ತಮ್ಮ ಖಾತೆಗೆ ಸೇರಿಸಿಕೊಂಡಿದ್ದಾರೆ.
5/ 8
ಸೂರ್ಯಕುಮಾರ್ ಟಿ20 ಶ್ರೇಯಾಂಕದಲ್ಲಿ 900 ಅಂಕ ಗಳಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಸದ್ಯ ಸೂರ್ಯ 908 ರೇಟಿಂಗ್ ಅಂಕಗಳೊಂದಿಗೆ ಐಸಿಸಿಯ ನಂ.1 ಬ್ಯಾಟ್ಸ್ಮನ್ ಆಗಿದ್ದಾರೆ. ನಂತರದ ಸ್ಥಾನಗಳಲ್ಲಿ ಪಾಕಿಸ್ತಾನದ ಬ್ಯಾಟ್ಸ್ಮನ್ ಮೊಹಮ್ಮದ್ ರಿಜ್ವಾನ್ 836 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.
6/ 8
ಸೂರ್ಯ ಮೊದಲು ಡೇವಿಡ್ ಮಲಾನ್ ಮತ್ತು ಆರನ್ ಫಿಂಚ್ ಮಾತ್ರ ಟಿ20 ಕ್ರಿಕೆಟ್ ಇತಿಹಾಸದಲ್ಲಿ 900 ಅಂಕಗಳನ್ನು ದಾಟಿದ್ದರು. ಇದೀಗ ಸೂರ್ಯ ಈ ದಾಖಲೆ ಮಾಡಿದ ಮೂರನೇ ಆಟಗಾರ ಎನಿಸಿಕೊಂಡಿದ್ದಾರೆ.
7/ 8
ಕಳೆದ ವರ್ಷ ಸೂರ್ಯ ಟಿ20ಯಲ್ಲಿ 1500 ರನ್ ಗಳಿಸಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರು 1500 ರನ್ ಗಡಿ ತಲುಪಲು ಕೇವಲ 843 ಎಸೆತಗಳನ್ನು ತೆಗೆದುಕೊಂಡರು. ಇದು ವಿಶ್ವದ ಯಾವುದೇ ಬ್ಯಾಟ್ಸ್ಮನ್ನಿಂದ ಮಾಡಲು ಸಾಧ್ಯವಾಗಿರಲಿಲ್ಲ.
8/ 8
ಸೂರ್ಯಕುಮಾರ್ ಯಾದವ್ 150 ಅಥವಾ ಅದಕ್ಕಿಂತ ಹೆಚ್ಚಿನ ಸ್ಟ್ರೈಕ್ ರೇಟ್ನೊಂದಿಗೆ ಟಿ20 ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ 1500 ರನ್ಗಳ ಗಡಿ ದಾಟಿದ ಮೊದಲ ಆಟಗಾರ. ಸದ್ಯ ಟಿ20 ಕ್ರಿಕೆಟ್ನ ಹೊಸ ಭರವಸೆಯ ಆಟಗಾರರಾಗಿ ಮಿಂಚುತ್ತಿದ್ದಾರೆ.