KL Rahul-Athiya Shetty: ಡೇಟ್ ಫಿಕ್ಸ್ ಆದ್ಮೇಲೆ ಮಗಳ ಮದುವೆಗೆ ನನ್ನನ್ನು ಕರೆಯಿರಿ, ರಾಹುಲ್-ಆಥಿಯಾ ವಿವಾಹದ ವದಂತಿಗೆ ಬಿಗ್ ಟ್ವಿಸ್ಟ್
KL Rahul-Athiya Shetty: ಅತಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ಮದುವೆಯ ವದಂತಿಗಳನ್ನು ಸುನೀಲ್ ಶೆಟ್ಟಿ ಅಲ್ಲಗಳೆದಿದ್ದಾರೆ. ಕಳೆದ ವರ್ಷ ನಟಿಯ ಹುಟ್ಟುಹಬ್ಬದಂದು ಅತಿಯಾ-ಕೆಎಲ್ ರಾಹುಲ್ ಅವರ ಸಂಬಂಧದ ಕುರಿತು ಬಹಿರಂಗವಾಗಿತ್ತು.
ಸುನೀಲ್ ಶೆಟ್ಟಿ ಅವರ ಮಗಳು ಅತಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ಅವರ ವಿವಾಹದ ವದಂತಿಗಳು ಕೆಲ ದಿನಗಳಿಂದ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅಲ್ಲದೇ ಇದರ ನಡುವೆ ಮುಂದಿನ ವರ್ಷದ ಜನವರಿಯಲ್ಲಿ ಸ್ಟಾರ್ ಜೋಡಿ ಹಸೆಮಣೆ ಏರಲಿದ್ದಾರೆ ಎಂದು ವರದಿಯಾಗಿತ್ತು.
2/ 8
ಆದರೆ, ಈ ಕುರಿತು ರಾಹುಲ್ ಅಥವಾ ಆತಿಯಾ ಆಗಲಿ ಯಾವುದೇ ಸ್ಪಷ್ಟನೆ ನೀಡಿರಲಿಲ್ಲ. ಆದರೆ ಇದೀಗ ಈ ಕುರಿತು ಆತಿಯಾ ಶೆಟ್ಟಿ ತಂದೆ, ನಟ ಸುನೀಲ್ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.
3/ 8
ಈ ಕುರಿತು ಮಾತನಾಡಿರುವ ಅವರು, ನೀವುಗಳೇ ಆತಿಯಾ ಮತ್ತು ರಾಹುಲ್ ವಿವಾಹದ ದಿನಾಂಕವನ್ನು ಖಚಿತಪಡಿಸಿದ ಮೇಳೆ ನನಗೂ ತಿಳಿಸಿ. ನಾನೂ ಸಹ ನನ್ನ ಮಗಳ ಮದುವೆಗೆ ಬರಲು ಸಹಾಯಕವಾಗುತ್ತದೆ‘ ಎಂದು ತಮಾಷೆಯಾಗಿ ಹೇಳುವ ಮೂಲಕ ಇನ್ನೂ ಸಹ ಯಾವುದೇ ದಿನಾಂಕವನ್ನು ಫಿಕ್ಸ್ ಮಾಡಿಲ್ಲ ಎಂದು ಹೇಳಿದ್ದಾರೆ.
4/ 8
ಆತಿಯಾ ಮತ್ತು ಕೆಎಲ್ ರಾಹುಲ್ ಅವರು ತಮ್ಮ ಕೆಲಸಗಳಿಂದ ಕೊಂಚ ಬ್ರೇಕ್ ಪಡೆದ ನಂತರದಲ್ಲಿ ಮಾತ್ರ ಅವರ ವಿವಾಹದ ಮಾತುಕಥೆಗಳು ನಡೆಸಲಾಗುತ್ತದೆ. ಇನ್ನೂ ಸಹ ಇಬ್ಬರ ನಿಶ್ಛಿತಾರ್ಥವಾಗಿಲ್ಲ. ಇವುಗಳು ಆದಮೇಳೆ ಮದುವೆಯ ಮಾತು ಎಂದು ಹೇಳಿದ್ದಾರೆ.
5/ 8
ಅದರಲ್ಲಿಯೂ ಕೆಎಲ್ ರಾಹುಲ್ ಅವರಿಗೆ ಸದ್ಯ, ಬಾಂಗ್ಲಾ ಪ್ರವಾಸ, ಆಸೀಸ್, ನ್ಯೂಜಿಲ್ಯಾಂಡ್, ಸಶ್ರೀಲಂಕಾ ಪ್ರವಾಸ ಮತ್ತು ವಿಶ್ವಕಪ್ಗಳಂತಹ ದೊಡ್ಡ ಟೂರ್ನಿಗಳಿವೆ. ಇದು ಒಂದು ದಿನದಲ್ಲಿ ಆಗುವಂತಹುದಲ್ಲ. ಸಮಯ ಸಿಕ್ಕಾಗ ನಾವುಗಳೇ ನಿರ್ಧರಿಸಿ ಹೇಳುತ್ತೇವೆ ಎಂದಿದ್ದಾರೆ.
6/ 8
ಅತಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ಕಳೆದ ಹಲವು ದಿನಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದು, ಇಬ್ಬರೂ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅವರು ತಮ್ಮ ರೊಮ್ಯಾಂಟಿಕ್ ಫೋಟೋಗಳನ್ನು ನಿರಂತರವಾಗಿ ಹಂಚಿಕೊಳ್ಳುತ್ತಿರುತ್ತಾರೆ.
7/ 8
ಅತಿಯಾ ಶೆಟ್ಟಿ ಮತ್ತು ರಾಹುಲ್ ಕಳೆದ ವರ್ಷ ತಮ್ಮ ಪ್ರೀತಿ ಬಗೆಗಿನ ಗುಟ್ಟನ್ನು ಬಹಿರಂಗಮಾಡಿದ್ದರು. ಇವರಿಬ್ಬರು ಸುಮಾರು ವರ್ಷಗಳಿಂದ ಪ್ರೇಮ ಸಂಬಂಧ ಹೊಂದಿದ್ದು, ಸಿನಿಮಾ ಕುರಿತಾದ ಕಾರ್ಯಕ್ರಮ, ಪಾರ್ಟಿ, ಟ್ರಿಪ್ ಹೀಗೆ ಹಲವಾರು ಕಡೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ
8/ 8
ಈ ಹಿಂದೆಯೂ ಸಹ ಅತಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ಇವರಿಬ್ಬರ ಮದುವೆಯ ಸುದ್ದಿ ಮುನ್ನೆಲೆಗೆ ಬಂದಿತ್ತು. ಆ ವೇಳೆ ಈ ಜೋಡಿಯ ವಿವಾಹದ ಕುರಿತು ನಟ ಸುನೀಲ್ ಶೆಟ್ಟಿ ಸ್ವತಃ ಪ್ರತಿಕ್ರಿಯಿಸಿದ್ದರು.