Kusal Mendis: 6,6,6,6,6,6,6,6,6,6,6: ವಿಶ್ವ ಕ್ರಿಕೆಟ್​ನಲ್ಲಿ ಹೊಸ ದಾಖಲೆ ನಿರ್ಮಾಣ!

Kusal Mendis: ಕ್ರಿಕೆಟ್ ಮೈದಾನದಲ್ಲಿ ಅನೇಕ ಅನುಭವಿಗಳ ದಾಖಲೆಗಳು ಮುರಿಯುತ್ತಲೇ ಇರುತ್ತವೆ. ಇದೀಗ ಶ್ರೀಲಂಕಾದ ಬ್ಯಾಟ್ಸ್‌ಮನ್‌ಯೊಬ್ಬರು ತಮ್ಮದೇ ದೇಶದ ಶ್ರೇಷ್ಠ ಕ್ರಿಕೆಟಿಗ ಕುಮಾರ ಸಂಗಕ್ಕಾರ ಅವರ ದಾಖಲೆಯನ್ನು ಮುರಿದಿದ್ದಾರೆ.

First published:

  • 17

    Kusal Mendis: 6,6,6,6,6,6,6,6,6,6,6: ವಿಶ್ವ ಕ್ರಿಕೆಟ್​ನಲ್ಲಿ ಹೊಸ ದಾಖಲೆ ನಿರ್ಮಾಣ!

    ಐರ್ಲೆಂಡ್ ವಿರುದ್ಧದ 2 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಶ್ರೀಲಂಕಾ ಭರ್ಜರಿ ಜಯ ದಾಖಲಿಸಿದೆ. ಶ್ರೀಲಂಕಾ ತಂಡ ಮೊದಲ ಟೆಸ್ಟ್‌ನಲ್ಲಿ ಇನ್ನಿಂಗ್ಸ್ ಮತ್ತು 280 ರನ್‌ಗಳ ಜಯ ಸಾಧಿಸಿದೆ. ನಂತರ ಎರಡನೇ ಟೆಸ್ಟ್‌ನಲ್ಲಿ ಇನ್ನಿಂಗ್ಸ್ ಮತ್ತು 10 ರನ್‌ಗಳ ಜಯ ಸಾಧಿಸಿದರು.

    MORE
    GALLERIES

  • 27

    Kusal Mendis: 6,6,6,6,6,6,6,6,6,6,6: ವಿಶ್ವ ಕ್ರಿಕೆಟ್​ನಲ್ಲಿ ಹೊಸ ದಾಖಲೆ ನಿರ್ಮಾಣ!

    ರಡನೇ ಟೆಸ್ಟ್‌ನಲ್ಲಿ ಶ್ರೀಲಂಕಾದ ಬ್ಯಾಟ್ಸ್‌ಮನ್‌ ಭಾರಿ ಸಂಚಲನ ಮೂಡಿಸಿದ್ದಾರೆ. ಈ ಬ್ಯಾಟ್ಸ್‌ಮನ್ 11 ಸಿಕ್ಸರ್‌ಗಳೊಂದಿಗೆ ದ್ವಿಶತಕ ಪೂರೈಸಿದರು. ಹೌದು, ಕುಸಾಲ್ ಮೆಂಡಿಸ್ ಈ ಭರ್ಜರಿ ಇನ್ನಿಂಗ್ಸ್ ಆಡಿದರು. ಎರಡನೇ ಟೆಸ್ಟ್ ನಲ್ಲಿ ಐರ್ಲೆಂಡ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್ ತಂಡ 493 ರನ್ ಗಳಿಸಿತ್ತು.

    MORE
    GALLERIES

  • 37

    Kusal Mendis: 6,6,6,6,6,6,6,6,6,6,6: ವಿಶ್ವ ಕ್ರಿಕೆಟ್​ನಲ್ಲಿ ಹೊಸ ದಾಖಲೆ ನಿರ್ಮಾಣ!

    ಶ್ರೀಲಂಕಾ ತಂಡವು ಬ್ಯಾಟಿಂಗ್‌ಗೆ ಬಂದಾಗ, ಅವರ ಮೊದಲ ನಾಲ್ಕು ಬ್ಯಾಟ್ಸ್‌ಮನ್‌ಗಳು ಶತಕ ಗಳಿಸಿದರು. ಇದರಲ್ಲಿ ಎರಡು ದ್ವಿಶತಕಗಳು ಸೇರಿದ್ದವು. ನಿಶಾನ್ ಮಧುಶಂಕ 205 ರನ್ ಗಳಿಸಿದರು. ಕರುಣರತ್ನೆ 115 ರನ್ ಗಳಿಸಿದರು.

    MORE
    GALLERIES

  • 47

    Kusal Mendis: 6,6,6,6,6,6,6,6,6,6,6: ವಿಶ್ವ ಕ್ರಿಕೆಟ್​ನಲ್ಲಿ ಹೊಸ ದಾಖಲೆ ನಿರ್ಮಾಣ!

    ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ಕುಸಾಲ್ ಮೆಂಡಿಸ್ 245 ರನ್ ಗಳಿಸಿದರು. ಇದಲ್ಲದೆ ಏಂಜೆಲೊ ಮ್ಯಾಥ್ಯೂಸ್ 114 ಎಸೆತಗಳಲ್ಲಿ 100 ರನ್ ಗಳಿಸಿದರು. ಈ ನಾಲ್ಕು ಇನ್ನಿಂಗ್ಸ್‌ಗಳಲ್ಲಿ, ಕುಸಾಲ್ ಮೆಂಡಿಸ್ ಅವರ ಇನ್ನಿಂಗ್ಸ್ ವಿಶೇಷವಾಗಿತ್ತು ಏಕೆಂದರೆ ಅವರು ಗರಿಷ್ಠ 245 ರನ್ ಗಳಿಸಿದರು ಮತ್ತು ಅವರ ವೃತ್ತಿಜೀವನದ ಮೊದಲ ದ್ವಿಶತಕವನ್ನು ಸಹ ಗಳಿಸಿದರು.

    MORE
    GALLERIES

  • 57

    Kusal Mendis: 6,6,6,6,6,6,6,6,6,6,6: ವಿಶ್ವ ಕ್ರಿಕೆಟ್​ನಲ್ಲಿ ಹೊಸ ದಾಖಲೆ ನಿರ್ಮಾಣ!

    ಅವರು ತಮ್ಮ ಇನ್ನಿಂಗ್ಸ್‌ನಲ್ಲಿ 18 ಬೌಂಡರಿ ಮತ್ತು 11 ಸಿಕ್ಸರ್‌ಗಳನ್ನು ಸಿಡಿಸಿದರು. ಕುಸಾಲ್ ಮೆಂಡಿಸ್ 11 ಸಿಕ್ಸರ್ ಬಾರಿಸುವ ಮೂಲಕ ವಿಶೇಷ ಕ್ಲಬ್ ಸೇರಿದ್ದಾರೆ. ವಾಸ್ತವವಾಗಿ, ಮೆಂಡಿಸ್ ಮೊದಲು, ಯಾವುದೇ ಶ್ರೀಲಂಕಾದ ಬ್ಯಾಟ್ಸ್‌ಮನ್ ಟೆಸ್ಟ್ ಇನ್ನಿಂಗ್ಸ್‌ನಲ್ಲಿ ಇಷ್ಟು ಸಿಕ್ಸರ್‌ಗಳನ್ನು ಹೊಡೆದಿರಲಿಲ್ಲ.

    MORE
    GALLERIES

  • 67

    Kusal Mendis: 6,6,6,6,6,6,6,6,6,6,6: ವಿಶ್ವ ಕ್ರಿಕೆಟ್​ನಲ್ಲಿ ಹೊಸ ದಾಖಲೆ ನಿರ್ಮಾಣ!

    ಟೆಸ್ಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ದಾಖಲೆಯನ್ನು ವಾಸಿಂ ಅಕ್ರಂ ಹೊಂದಿದ್ದಾರೆ. ಅವರು ಜಿಂಬಾಬ್ವೆ ವಿರುದ್ಧ 12 ಸಿಕ್ಸರ್‌ಗಳನ್ನು ಸಿಡಿಸಿದ್ದರು.

    MORE
    GALLERIES

  • 77

    Kusal Mendis: 6,6,6,6,6,6,6,6,6,6,6: ವಿಶ್ವ ಕ್ರಿಕೆಟ್​ನಲ್ಲಿ ಹೊಸ ದಾಖಲೆ ನಿರ್ಮಾಣ!

    ಕುಸಾಲ್ ಮೆಂಡಿಸ್ 11 ಸಿಕ್ಸರ್ ಬಾರಿಸುವ ಮೂಲಕ ತಮ್ಮ ದೇಶದ ಹಿರಿಯ ಆಟಗಾರ ಕುಮಾರ ಸಂಗಕ್ಕಾರ ಅವರ ದಾಖಲೆಯನ್ನು ಮುರಿದಿದ್ದಾರೆ.ಕುಮಾರ ಸಂಗಕ್ಕಾರ ಅವರು 2014 ರಲ್ಲಿ ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾ ಪರ ಆಡುವಾಗ ಟೆಸ್ಟ್ ಇನ್ನಿಂಗ್ಸ್‌ನಲ್ಲಿ 8 ಸಿಕ್ಸರ್‌ಗಳನ್ನು ಬಾರಿಸಿದ್ದರು.

    MORE
    GALLERIES