Sunrisers Hyderabad : ದಕ್ಷಿಣ ಆಫ್ರಿಕಾದಲ್ಲಿ ಕಪ್​ ಗೆದ್ರೆ, 2023ರ ಐಪಿಲ್​ಗೆ ಈತನೇ SRH ಕ್ಯಾಪ್ಟನ್​!

ದಕ್ಷಿಣ ಆಫ್ರಿಕಾದ ಆಟಗಾರ ಸ್ಟಾರ್​ ಆಲ್​ರೌಂಡರ್​ ಮಾರ್ಕ್ರಮ್​ರನ್ನು ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕರನ್ನಾಗಿ ಮಾಡಲು ಕಾವ್ಯಾ ಮಾರನ್ ಚಿಂತನೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಪ್ರಸ್ತುತ ದಕ್ಷಿಣ ಆಫ್ರಿಕಾದ T20 ಲೀಗ್‌ನಲ್ಲಿ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ತಂಡದ ನಾಯಕರಾಗಿ ಅದ್ಭುತವಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಸದ್ಯ ಈ ಟೂರ್ನಿ ಅಂತಿಮ ಹಂತ ತಲುಪಿದೆ. ಈಸ್ಟರ್ನ್ ಕೇಪ್ ತಂಡವನ್ನು ಮಾರ್ಕ್ರಾಮ್ ಸೆಮೀಸ್​ಗೆ ತಂದಿದ್ದಾರೆ.

First published:

 • 18

  Sunrisers Hyderabad : ದಕ್ಷಿಣ ಆಫ್ರಿಕಾದಲ್ಲಿ ಕಪ್​ ಗೆದ್ರೆ, 2023ರ ಐಪಿಲ್​ಗೆ ಈತನೇ SRH ಕ್ಯಾಪ್ಟನ್​!

  ಇನ್ನು ಎರಡು ತಿಂಗಳಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023 ರ ಸೀಸನ್ ಪ್ರಾರಂಭವಾಗಲಿದೆ ಎಂದು ತಿಳಿದಿದೆ. ಕಳೆದ ವರ್ಷದಂತೆ, ಈ ವರ್ಷವೂ ಮಾರ್ಚ್ ಅಂತ್ಯದಿಂದ ಮೇ ಅಂತ್ಯದವರೆಗೆ ಶ್ರೀಮಂತ ಕ್ರಿಕೆಟ್​ ಲೀಗ್​ ನಡೆಯಲಿದೆ.

  MORE
  GALLERIES

 • 28

  Sunrisers Hyderabad : ದಕ್ಷಿಣ ಆಫ್ರಿಕಾದಲ್ಲಿ ಕಪ್​ ಗೆದ್ರೆ, 2023ರ ಐಪಿಲ್​ಗೆ ಈತನೇ SRH ಕ್ಯಾಪ್ಟನ್​!

  2022 ರ ಋತುವಿನ ನಂತರ, ಅನೇಕ ಫ್ರಾಂಚೈಸಿಗಳು ತಂಡಕ್ಕೆ ಹೊರೆ ಎನಿಸಿದ ಆಟಗಾರರನ್ನು ಕೈಬಿಟ್ಟಿವೆ. ಕಳೆದ ವರ್ಷ ಡಿಸೆಂಬರ್ 23ರಂದು ನಡೆದ ಮಿನಿ ಹರಾಜಿನಲ್ಲಿ ತಮಗೆ ಬೇಕಾದ ಆಟಗಾರರನ್ನು ಖರೀದಿಸಿವೆ.

  MORE
  GALLERIES

 • 38

  Sunrisers Hyderabad : ದಕ್ಷಿಣ ಆಫ್ರಿಕಾದಲ್ಲಿ ಕಪ್​ ಗೆದ್ರೆ, 2023ರ ಐಪಿಲ್​ಗೆ ಈತನೇ SRH ಕ್ಯಾಪ್ಟನ್​!

  ಮೆಗಾ ಹರಾಜಿನಲ್ಲಿ ಹಲವಾರು ಆಟಗಾರರನ್ನು ಖರೀದಿಸಿದ ಸನ್ ರೈಸರ್ಸ್ ಹೈದರಾಬಾದ್ ಕಳೆದ ಆವೃತ್ತಿಯಲ್ಲಿ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲವಾಗಿತ್ತು. ಹಾಗಾಗಿ ಮಿನಿ ಹರಾಜಿನಲ್ಲಿ ದಿಟ್ಟತನ ತೋರಿ ದುಬಾರಿಯಾದರೂ ಹ್ಯಾರಿ ಬ್ರೂಕ್‌ನಂತಹ ಪವರ್ ಹಿಟ್ಟರ್‌ ಬ್ಯಾಟರ್​​ರನ್ನು ದೊಡ್ಡ ಮೊತ್ತ ನೀಡಿ ಖರೀದಿಸಿದೆ.

  MORE
  GALLERIES

 • 48

  Sunrisers Hyderabad : ದಕ್ಷಿಣ ಆಫ್ರಿಕಾದಲ್ಲಿ ಕಪ್​ ಗೆದ್ರೆ, 2023ರ ಐಪಿಲ್​ಗೆ ಈತನೇ SRH ಕ್ಯಾಪ್ಟನ್​!

  ಕಳೆದ ಸೀಸನ್‌ಗಿಂತ ಈ ಬಾರಿ ಸನ್‌ರೈಸರ್ಸ್ ತಂಡ ಉತ್ತಮವಾಗಿ ಕಾಣುತ್ತಿದೆ. ಆದರೆ ಕೇನ್ ವಿಲಿಯಮ್ಸನ್ ತಂಡದಲ್ಲಿ ಇಲ್ಲದ ಕಾರಣ ಮುಂದಿನ ಸೀಸನ್​ನಲ್ಲಿ ತಂಡವನ್ನು ಮುನ್ನಡೆಸುವವರು ಯಾರು ಯಾರು ಎಂಬ ಚರ್ಚೆ ಅಭಿಮಾನಿಗಳಲ್ಲಿ ಮೂಡಿದೆ.

  MORE
  GALLERIES

 • 58

  Sunrisers Hyderabad : ದಕ್ಷಿಣ ಆಫ್ರಿಕಾದಲ್ಲಿ ಕಪ್​ ಗೆದ್ರೆ, 2023ರ ಐಪಿಲ್​ಗೆ ಈತನೇ SRH ಕ್ಯಾಪ್ಟನ್​!

  ಈ ನಿಟ್ಟಿನಲ್ಲಿ ಈಗಾಗಲೇ ಫ್ರಾಂಚೈಸಿ ಓನರ್ ಕಾವ್ಯಾ ಮಾರನ್‌ಗೆ ಐಡಿಯಾ ಸಿಕ್ಕಿದೆ ಎಂದು ವರದಿಯಾಗಿದೆ. ದಕ್ಷಿಣ ಆಫ್ರಿಕಾದ ಆಟಗಾರ ಐಡೆನ್ ಮಾರ್ಕ್ರಮ್​ ಅವರನ್ನು ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕರನ್ನಾಗಿ ಮಾಡಲು ಕಾವ್ಯಾ ಮಾರನ್ ಚಿಂತನೆ ನಡೆಸಿದ್ದಾರೆ ಎಂದು ವರದಿಯಾಗಿದೆ.

  MORE
  GALLERIES

 • 68

  Sunrisers Hyderabad : ದಕ್ಷಿಣ ಆಫ್ರಿಕಾದಲ್ಲಿ ಕಪ್​ ಗೆದ್ರೆ, 2023ರ ಐಪಿಲ್​ಗೆ ಈತನೇ SRH ಕ್ಯಾಪ್ಟನ್​!

  ಪ್ರಸ್ತುತ ದಕ್ಷಿಣ ಆಫ್ರಿಕಾದ T20 ಲೀಗ್‌ನಲ್ಲಿ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ತಂಡದ ನಾಯಕರಾಗಿ ಅದ್ಭುತವಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಸದ್ಯ ಈ ಟೂರ್ನಿ ಅಂತಿಮ ಹಂತ ತಲುಪಿದೆ. ಈಸ್ಟರ್ನ್ ಕೇಪ್ ತಂಡವನ್ನು ಮಾರ್ಕ್ರಮ್  ಸೆಮಿಫೈನಲ್​ ವರೆಗೆ ತಂದಿದ್ದಾರೆ.

  MORE
  GALLERIES

 • 78

  Sunrisers Hyderabad : ದಕ್ಷಿಣ ಆಫ್ರಿಕಾದಲ್ಲಿ ಕಪ್​ ಗೆದ್ರೆ, 2023ರ ಐಪಿಲ್​ಗೆ ಈತನೇ SRH ಕ್ಯಾಪ್ಟನ್​!

  ಈ ಲೀಗ್‌ನಲ್ಲಿ ಸನ್‌ರೈಸರ್ಸ್ ಕಳಪೆ ಆರಂಭವನ್ನು ಪಡೆದಿತ್ತು. ಆರಂಭದಲ್ಲಿ ಸತತ ಎರಡು ಪಂದ್ಯಗಳಲ್ಲಿ ಸೋತು ನಿರಾಸೆ ಮೂಡಿಸಿತ್ತು. ಆದರೆ ನಂತರದಲ್ಲಿ ಮಾರ್ಕ್ರಾಮ್ ತಮ್ಮ ನಾಯಕತ್ವದ ಮೂಲಕ ತಂಡಕ್ಕೆ ಹ್ಯಾಟ್ರಿಕ್ ಜಯ ತಂದುಕೊಟ್ಟು ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ತಂದು ನಿಲ್ಲಿಸಿದ್ದಾರೆ.

  MORE
  GALLERIES

 • 88

  Sunrisers Hyderabad : ದಕ್ಷಿಣ ಆಫ್ರಿಕಾದಲ್ಲಿ ಕಪ್​ ಗೆದ್ರೆ, 2023ರ ಐಪಿಲ್​ಗೆ ಈತನೇ SRH ಕ್ಯಾಪ್ಟನ್​!

  ದಕ್ಷಿಣ ಆಫ್ರಿಕಾ ಲೀಗ್ ನಲ್ಲಿ ಮಾರ್ಕ್ರಮ್ ನಾಯಕನಾಗಿ, ಬ್ಯಾಟರ್ ಆಗಿ, ಬೌಲರ್ ಆಗಿ ಮಿಂಚುತ್ತಿದ್ದಾರೆ. ಈ ಲೀಗ್‌ನಲ್ಲಿ ಮಾರ್ಕ್ರಮ್ ಈಸ್ಟರ್ನ್ ಕೇಪ್ ತಂಡವನ್ನು ಚಾಂಪಿಯನ್ ಮಾಡಿದರೆ, ಈ ವರ್ಷದ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕರಾಗುವ ಅವಕಾಶವಿದೆ.

  MORE
  GALLERIES