Rishabh Pant: ಐಪಿಎಲ್ನಿಂದ ಪಂತ್ ಔಟ್! ಮಹತ್ವದ ಮಾಹಿತಿ ಹಂಚಿಕೊಂಡ ಗಂಗೂಲಿ
Rishabh Pant: ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಡಿಸೆಂಬರ್ 30 ರಂದು ಅಪಘಾತಕ್ಕೀಡಾಗಿದ್ದರು. ಇದಾದ ಬಳಿಕ ಅವರು ಇದೀಗ ಚೇತರಿಸಿಕೊಳ್ಳುತ್ತಿದ್ದು, ಅವರ ಕ್ರಿಕೆಟ್ ವೃತ್ತಿಜೀವನದ ಬಗ್ಗೆ ದೊಡ್ಡ ಮಾಹಿತಿಯನ್ನು ಸ್ವತಃ ಸೌರವ್ ಗಂಗೂಲಿಯೇ ಬಹಿರಂಗಪಡಿಸಿದ್ದಾರೆ.
ಡಿಸೆಂಬರ್ 30 2022ರಂದು ಭಾರತ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ ಭೀಕರ ಅಪಘಾತಕ್ಕೊಳಗಾಗಿದ್ದರು. ಅವರು ದೆಹಲಿಯಿಂದ ರೂರ್ಕಿಯಲ್ಲಿರುವ ತಮ್ಮ ಮನೆಗೆ ಹೋಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದ್ದು, ಪಂತ್ ಗಂಭೀರವಾಗಿ ಗಾಯಗೊಂಡಿದ್ದರು.
2/ 8
ರಸ್ತೆ ಅಪಘಾತದಲ್ಲಿ ಗಾಯಗೊಂಡ ಟೀಂ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ರಿಶಪ್ ಪಂತ್ ಅಸ್ಥಿರಜ್ಜು ಗಾಯಕ್ಕೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ತಜ್ಞರ ಪ್ರಕಾರ, ಅವರು ಶಸ್ತ್ರಚಿಕಿತ್ಸೆಯ ನಂತರ ಮೈದಾನಕ್ಕೆ ಮರಳಲು 6 ತಿಂಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳಬಹುದು ಎಂದಿದ್ದಾರೆ.
3/ 8
ಅಂತಹ ಪರಿಸ್ಥಿತಿಯಲ್ಲಿ, ಅವರು ಐಪಿಎಲ್ 2023 ರಲ್ಲಿ ಆಡುವ ಬಗ್ಗೆ ಅನುಮಾನವಿತ್ತು. ಪಂತ್ ಐಪಿಎಲ್ನಲ್ಲಿ ಆಡುತ್ತಾರೋ ಇಲ್ಲವೋ ಎಂಬುದನ್ನು ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಈಗ ಸ್ಪಷ್ಟಪಡಿಸಿದ್ದಾರೆ.
4/ 8
ರಿಷಬ್ ಪಂತ್ ಐಪಿಎಲ್ 2023 ರಲ್ಲಿ ಆಡಲು ಸಾಧ್ಯವಾಗುವುದಿಲ್ಲ ಎಂದು ಡೆಲ್ಲಿ ಕ್ಯಾಪಿಟಲ್ಸ್ ಕ್ರಿಕೆಟ್ ನಿರ್ದೇಶಕ ಸೌರವ್ ಗಂಗೂಲಿ ಹೇಳಿದ್ದಾರೆ. ಕೋಲ್ಕತ್ತಾದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಂತ್ ಚೇತರಿಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ.
5/ 8
ಹೀಗಾಗಿ ಅವರು ಈ ಬಾರಿಯ ಐಪಿಎಲ್ನಲ್ಲಿ ಕಣಕ್ಕಿಳಿಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದು ಪಂತ್ ಅಭಿಮಾನಿಗಳಿಗೆ ಬೇಸರದ ಮಾಹಿತ ಆಗಿದೆ. ಇನ್ನು, ಕೇವಲ 23 ವರ್ಷ ವಯಸ್ಸಿನ ಪಂತ್ ಅವರಿಗೆ ಕ್ರಿಕೆಟ್ನಲ್ಲಿ ಸಾಕಷ್ಟು ಸಮಯವಿದೆ ಎಂದು ದಾದಾ ಹೇಳಿದ್ದಾರೆ.
6/ 8
ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಮೂರು ತಿಂಗಳ ನಂತರ ಕ್ರಿಕೆಟ್ಗೆ ಮರಳಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಅವರನ್ನು ತಮ್ಮ ತಂಡದ ಕ್ರಿಕೆಟ್ ನಿರ್ದೇಶಕರನ್ನಾಗಿ ಮಾಡಿದೆ. ಗಂಗೂಲಿ ಅವರು 2019ರಲ್ಲಿ ದೆಹಲಿ ಕ್ಯಾಪಿಟಲ್ಸ್ನ ಮಾರ್ಗದರ್ಶಕರಾಗಿದ್ದರು.
7/ 8
ಪಂತ್ ಈ ವರ್ಷ ಐಪಿಎಲ್ನಲ್ಲಿ ಆಡದಿದ್ದರೂ, ಬಿಸಿಸಿಐ ಅವರ ಐಪಿಎಲ್ ಸಂಬಳದ 16 ಕೋಟಿಗಳನ್ನು ದೆಹಲಿ ಕ್ಯಾಪಿಟಲ್ಸ್ ಪರವಾಗಿ ಸಂಪೂರ್ಣವಾಗಿ ಪಾವತಿಸುತ್ತದೆ. ಇದು ಮಾತ್ರವಲ್ಲದೆ, ಕೇಂದ್ರ ಒಪ್ಪಂದದಡಿಯಲ್ಲಿ ಅವರು ಪಡೆದ ವಾರ್ಷಿಕ ರಿಟೈನರ್ಶಿಪ್ ಶುಲ್ಕಕ್ಕೆ 5 ಕೋಟಿ ರೂ.ಗಳನ್ನು ನೀಡುತ್ತದೆ.
8/ 8
ವಾಸ್ತವವಾಗಿ, ಎಲ್ಲಾ ಕೇಂದ್ರೀಯ ಗುತ್ತಿಗೆ ಆಟಗಾರರನ್ನು ವಿಮೆ ಮಾಡಲಾಗುತ್ತದೆ. ಬಿಸಿಸಿಐ ನಿಯಮಗಳ ಪ್ರಕಾರ, ಈ ಆಟಗಾರರು ಗಾಯದ ಕಾರಣ ಐಪಿಎಲ್ನಿಂದ ಹೊರಗುಳಿದಿದ್ದಲ್ಲಿ ಮಂಡಳಿಯಿಂದ ಪೂರ್ಣವಾಗಿ ಪಾವತಿಸಲಾಗುತ್ತದೆ. ಸಂಬಂಧಪಟ್ಟ ಫ್ರಾಂಚೈಸಿ ಅಲ್ಲ, ಬದಲಿಗೆ ವಿಮಾ ಕಂಪನಿಯು ಸಂಬಳವನ್ನು ಪಾವತಿಸುತ್ತದೆ.