Shubman Gill: ಒಂದೇ ಒಂದು ಶತಕಕ್ಕೆ 10 ದಾಖಲೆಗಳು ಉಡೀಸ್​, ಶುಭ್​ಮನ್ ಗಿಲ್​ ಅಬ್ಬರಕ್ಕೆ ದಂಗಾದ ವಿಶ್ವ ಕ್ರಿಕೆಟ್​

Shubman Gill: ವಿರಾಟ್ ಕೊಹ್ಲಿ ಆಗಮನದ ನಂತರ ಸಚಿನ್ ಅವರ ದಾಖಲೆಗಳನ್ನು ಕೊಹ್ಲಿ ಮುರಿಯಲಿದ್ದಾರೆ ಎಂಬ ಮಾತುಗಳನ್ನು ಆಡುತ್ತಿದ್ದರು. ಇದೀಗ ಅದೇ ರೀತಿ ಶುಭ್​ಮನ್ ಗಿಲ್​ ಆಗಮನದ ಬಳಿಕ ವಿರಾಟ್ ದಾಖಲೆ ಮುರಿಯಲು ಮತ್ತೊರ್ವ ಕ್ರಿಕೆಟಿಗ ಸಿದ್ಧರಾಗಿದ್ದಾರೆ ಎನ್ನಲಾಗುತ್ತಿದೆ.

First published:

 • 111

  Shubman Gill: ಒಂದೇ ಒಂದು ಶತಕಕ್ಕೆ 10 ದಾಖಲೆಗಳು ಉಡೀಸ್​, ಶುಭ್​ಮನ್ ಗಿಲ್​ ಅಬ್ಬರಕ್ಕೆ ದಂಗಾದ ವಿಶ್ವ ಕ್ರಿಕೆಟ್​

  ವಿರಾಟ್ ಕೊಹ್ಲಿ ಆಗಮನದ ನಂತರ ಸಚಿನ್ ಅವರ ದಾಖಲೆಗಳನ್ನು ಕೊಹ್ಲಿ ಮುರಿಯಲಿದ್ದಾರೆ ಎಂಬ ಮಾತುಗಳನ್ನು ಆಡುತ್ತಿದ್ದರು. ಇದೀಗ ಅದೇ ರೀತಿ ಶುಭ್​ಮನ್ ಗಿಲ್​ ಆಗಮನದ ಬಳಿಕ ವಿರಾಟ್ ದಾಖಲೆ ಮುರಿಯಲು ಮತ್ತೊರ್ವ ಕ್ರಿಕೆಟಿಗ ಸಿದ್ಧರಾಗಿದ್ದಾರೆ ಎನ್ನಲಾಗುತ್ತಿದೆ. ಅದೇ ರೀತಿ ಇದೀಗ ಗಿಲ್​ ಸಾಲು ಸಾಲು ಶತಕಗಳನ್ನು ಸಿಡಿಸುವ ಮೂಲಕ ಅಬ್ಬರಿಸುತ್ತಿದ್ದಾರೆ.

  MORE
  GALLERIES

 • 211

  Shubman Gill: ಒಂದೇ ಒಂದು ಶತಕಕ್ಕೆ 10 ದಾಖಲೆಗಳು ಉಡೀಸ್​, ಶುಭ್​ಮನ್ ಗಿಲ್​ ಅಬ್ಬರಕ್ಕೆ ದಂಗಾದ ವಿಶ್ವ ಕ್ರಿಕೆಟ್​

  ನ್ಯೂಜಿಲೆಂಡ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಶುಭ್​ಮನ್ ಗಿಲ್ ತಮ್ಮ ಚೊಚ್ಚಲ ಟಿ20 ಶತಕ ಸಿಡಿಸುವ ಮೂಲಕ ಸಾಲು ಸಾಲು ದಾಖಲೆಗಳನ್ನು ಬರೆದಿದ್ದಾರೆ. ಗಿಲ್ ಟೀಂ ಇಂಡಿಯಾ ಪರ ಮೂರು ಮಾದರಿ ಕ್ರಿಕೆಟ್​ನಲ್ಲಿ ಶತಕ ಬಾರಿಸಿದ 5ನೇ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.

  MORE
  GALLERIES

 • 311

  Shubman Gill: ಒಂದೇ ಒಂದು ಶತಕಕ್ಕೆ 10 ದಾಖಲೆಗಳು ಉಡೀಸ್​, ಶುಭ್​ಮನ್ ಗಿಲ್​ ಅಬ್ಬರಕ್ಕೆ ದಂಗಾದ ವಿಶ್ವ ಕ್ರಿಕೆಟ್​

  ಇನ್ನು, ಟೀಂ ಇಂಡಿಯಾ ಪರ ಈವರೆಗೆ ವಿರಾಟ್ ಕೊಹ್ಲಿ ಅಫ್ಘಾನಿಸ್ತಾನ್ ವಿರುದ್ಧ ಅಜೇಯ 122 ರನ್​ ಗಳಿಸುವ ಮೂಲಕ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನ್ನಿಸಿಕೊಂಡಿದ್ದರು. ಇದೀಗ ಗಿಲ್ 126 ರನ್ ಗಳಿಸುವ ಮೂಲಕ ಈ ದಾಖಲೆ ಮುರಿದಿದ್ದಾರೆ.

  MORE
  GALLERIES

 • 411

  Shubman Gill: ಒಂದೇ ಒಂದು ಶತಕಕ್ಕೆ 10 ದಾಖಲೆಗಳು ಉಡೀಸ್​, ಶುಭ್​ಮನ್ ಗಿಲ್​ ಅಬ್ಬರಕ್ಕೆ ದಂಗಾದ ವಿಶ್ವ ಕ್ರಿಕೆಟ್​

  ಟಿ20 ಕ್ರಿಕೆಟ್​ನಲ್ಲಿ ಶತಕ ಬಾರಿಸಿದ ಟೀಂ ಇಂಡಿಯಾದ 7ನೇ ಆಟಗಾರ​ ಎಂಬ ಹೆಗ್ಗಳಿಕೆಗೂ ಗಿಲ್ ಪಾತ್ರರಾಗಿದ್ದು, ಇದಕ್ಕೂ ಮೊದಲು ಸುರೇಶ್ ರೈನಾ, ರೋಹಿತ್ ಶರ್ಮಾ, ಕೆಎಲ್ ರಾಹುಲ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್ ಮತ್ತು ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ್ದರು.

  MORE
  GALLERIES

 • 511

  Shubman Gill: ಒಂದೇ ಒಂದು ಶತಕಕ್ಕೆ 10 ದಾಖಲೆಗಳು ಉಡೀಸ್​, ಶುಭ್​ಮನ್ ಗಿಲ್​ ಅಬ್ಬರಕ್ಕೆ ದಂಗಾದ ವಿಶ್ವ ಕ್ರಿಕೆಟ್​

  ಇವುಗಳಲ್ಲದೇ ಟೀಂ ಇಂಡಿಯಾ ಪರ ಟೆಸ್ಟ್​, ಏಕದಿನ ಮತ್ತು ಟಿ20 ಮಾದರಿ ಕ್ರಿಕೆಟ್​ನಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ಗಿಲ್ ಕೇವಲ 23ನೇ ವಯಸ್ಸಿನಲ್ಲಿ 3 ಮಾದರಿಯಲ್ಲಿ ಶತಕ ಸಿಡಿಸಿದ್ದಾರೆ.

  MORE
  GALLERIES

 • 611

  Shubman Gill: ಒಂದೇ ಒಂದು ಶತಕಕ್ಕೆ 10 ದಾಖಲೆಗಳು ಉಡೀಸ್​, ಶುಭ್​ಮನ್ ಗಿಲ್​ ಅಬ್ಬರಕ್ಕೆ ದಂಗಾದ ವಿಶ್ವ ಕ್ರಿಕೆಟ್​

  ಏಕದಿನ ಕ್ರಿಕೆಟ್​ನಲ್ಲಿ ದ್ವಿಶತಕ ಹಾಗೂ ಶತಕ ಬಾರಿಸಿರುವ ಗಿಲ್​, ಇದಕ್ಕೂ ಮುನ್ನ ನ್ಯೂಜಿಲೆಂಡ್ ವಿರುದ್ಧವೇ ಏಕದಿನ ಕ್ರಿಕೆಟ್​ನಲ್ಲಿ ಶುಭ್​ಮನ್ ಗಿಲ್ 208 ರನ್​ ಗಳಿಸಿದ್ದರು.

  MORE
  GALLERIES

 • 711

  Shubman Gill: ಒಂದೇ ಒಂದು ಶತಕಕ್ಕೆ 10 ದಾಖಲೆಗಳು ಉಡೀಸ್​, ಶುಭ್​ಮನ್ ಗಿಲ್​ ಅಬ್ಬರಕ್ಕೆ ದಂಗಾದ ವಿಶ್ವ ಕ್ರಿಕೆಟ್​

  ಟೀಂ ಇಂಡಿಯಾ ಪರ ಏಕದಿನ ದ್ವಿಶತಕ ಹಾಗೂ ಟಿ20 ಕ್ರಿಕೆಟ್​ನಲ್ಲಿ ಶತಕ ಸಿಡಿಸಿದ 2ನೇ ಆಟಗಾರ ಎಂಬ ದಾಖಲೆಯನ್ನು ಗಿಲ್​ ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ರೋಹಿತ್ ಹೆಸರಿನಲ್ಲಿತ್ತು.

  MORE
  GALLERIES

 • 811

  Shubman Gill: ಒಂದೇ ಒಂದು ಶತಕಕ್ಕೆ 10 ದಾಖಲೆಗಳು ಉಡೀಸ್​, ಶುಭ್​ಮನ್ ಗಿಲ್​ ಅಬ್ಬರಕ್ಕೆ ದಂಗಾದ ವಿಶ್ವ ಕ್ರಿಕೆಟ್​

  ಇನ್ನು, ಕಿವೀಸ್​ ವಿರುದ್ಧ ಟಿ20 ಕ್ರಿಕೆಟ್​ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಸಾಧನೆ ಗಿಲ್​ ಮಾಡಿದ್ದು, ಇದಕ್ಕೂ ಮುನ್ನ ಈ ದಾಖಲೆಯನ್ನು ಸೌತ್ ಆಫ್ರಿಕಾದ ರಿಚರ್ಡ್ ಲೆವಿ 117 ರನ್ ಗಳಿಸುವ ಮೂಲಕ ಅವರ ಹೆಸರಿನಲ್ಲಿತ್ತು.

  MORE
  GALLERIES

 • 911

  Shubman Gill: ಒಂದೇ ಒಂದು ಶತಕಕ್ಕೆ 10 ದಾಖಲೆಗಳು ಉಡೀಸ್​, ಶುಭ್​ಮನ್ ಗಿಲ್​ ಅಬ್ಬರಕ್ಕೆ ದಂಗಾದ ವಿಶ್ವ ಕ್ರಿಕೆಟ್​

  ಗಿಲ್ ಅತಿ ಚಿಕ್ಕ ವಯಸ್ಸಿನಲ್ಲಿ ಟಿ209 ಶತಕ ಸಿಡಿಸಿದ ದಾಖಲೆ ಬರೆದಿದ್ದಾರೆ. ಗಿಲ್ 23 ವರ್ಷ 146 ದಿನಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಸುರೇಶ್ ರೈನಾ (23 ವರ್ಷ, 156 ದಿನ) ಹೆಸರಿನಲ್ಲಿತ್ತು.

  MORE
  GALLERIES

 • 1011

  Shubman Gill: ಒಂದೇ ಒಂದು ಶತಕಕ್ಕೆ 10 ದಾಖಲೆಗಳು ಉಡೀಸ್​, ಶುಭ್​ಮನ್ ಗಿಲ್​ ಅಬ್ಬರಕ್ಕೆ ದಂಗಾದ ವಿಶ್ವ ಕ್ರಿಕೆಟ್​

  ಡಿಸೆಂಬರ್​ನಿಂದ ಜನವರಿಯೊಳಗೆ ಅಂದರೆ ಸರಿಸುಮಾರು 2 ತಿಂಗಳಲ್ಲಿ ಗಿಲ್​ ಒಟ್ಟು 5 ಶತಕ ಬಾರಿಸಿದ್ದಾರೆ. ಕಡಿಮೆ ಸಮಯದಲ್ಲಿ ಇಷ್ಟೊಂದು ಶತಕ ಬಾರಿಸಿರುವುದು ಒಂದು ದಾಖಲೆಯಾಗಿದೆ.

  MORE
  GALLERIES

 • 1111

  Shubman Gill: ಒಂದೇ ಒಂದು ಶತಕಕ್ಕೆ 10 ದಾಖಲೆಗಳು ಉಡೀಸ್​, ಶುಭ್​ಮನ್ ಗಿಲ್​ ಅಬ್ಬರಕ್ಕೆ ದಂಗಾದ ವಿಶ್ವ ಕ್ರಿಕೆಟ್​

  ನ್ಯೂಜಿಲೆಂಡ್ ವಿರುದ್ಧ ವಿಶೇಷ ದಾಖಲೆ ಬರೆದಿರುವ ಶುಭ್​ಮನ್ ಗಿಲ್, ಏಕದಿನ ಕ್ರಿಕೆಟ್​ನಲ್ಲಿ 208 ಹಾಗೂ ಟಿ20 ಕ್ರಿಕೆಟ್​ನಲ್ಲಿ 126 ರನ್ ಬಾರಿಸುವ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ.

  MORE
  GALLERIES