ನ್ಯೂಜಿಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಗಿಲ್ 112 ರನ್ ಸಿಡಿಸಿದ್ದರು. ಈ ಕ್ರಮದಲ್ಲಿ ಅವರು ಅನೇಕ ವಿಶ್ವ ದಾಖಲೆಗಳನ್ನು ನಿರ್ಮಿಸಿದರು. ಗಿಲ್ ಭಾರತದ ಪರ ಅತಿ ಕಡಿಮೆ ಇನ್ನಿಂಗ್ಸ್‌ಗಳಲ್ಲಿ 4 ಶತಕಗಳನ್ನು ಗಳಿಸಿದ ಆಟಗಾರ ಎನಿಸಿಕೊಂಡರು. ಇದಕ್ಕೂ ಮುನ್ನ ಶಿಖರ್ ಧವನ್ 24 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದರು. ಗಿಲ್ 21 ಪಂದ್ಯಗಳಲ್ಲಿ ಈ ಮೈಲಿಗಲ್ಲು ತಲುಪಿದ್ದಾರೆ.
ಇದು ಮಾತ್ರವಲ್ಲದೇ ಗಿಲ್ ಕಿವೀಸ್ ಸರಣಿ ಬಳಿಕ ಏಕದಿನ ಶ್ರೇಯಾಂಕದಲ್ಲಿಯೂ ಭರ್ಜರಿ ಏರಿಕೆ ಕಂಡಿದ್ದಾರೆ. ಅವರು ಇದೀಗ ಏಕದಿನ ಐಸಿಸಿ ರ್ಯಾಂಕಿಂಗ್ನಲ್ಲಿ 734 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದ್ದಾರೆ. ಒಟ್ಟಾರೆಯಾಗಿ ಸಚಿನ್ ನಿರ್ಗಮನದ ಬಳಿಕ ಅವರ ಸ್ಥಾನವನ್ನು ವಿರಾಟ್ ಕೊಹ್ಲಿ ತುಂಬಿದರೆ, ಇದೀಗ ಕೊಹ್ಲಿ ಬಳಿಕ ಅವರ ಸ್ಥಾನಕ್ಕೆ ಶುಭ್ಮನ್ ಗಿಲ್ ಎಂಟ್ರಿ ಕೊಟ್ಟಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ.