ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿದೆ. ಈ ಪಂದ್ಯ ಜೂನ್ 7 ರಿಂದ 11 ರವರೆಗೆ ಇಂಗ್ಲೆಂಡ್‌ನಲ್ಲಿ ನಡೆಯಲಿದೆ. ಆದರೆ ದೊಡ್ಡ ಪಂದ್ಯಕ್ಕೂ ಮುನ್ನವೇ ತಂಡಕ್ಕೆ ಮತ್ತೊಂದು ದೊಡ್ಡ ಹೊಡೆತ ಬಿದ್ದಿದೆ. ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ನಂತರ ಶ್ರೇಯಸ್ ಅಯ್ಯರ್ ಕೂಡ ಫೈನಲ್‌ನಿಂದ ಹೊರಗುಳಿದಿದ್ದಾರೆ.
ಶ್ರೇಯರ್ ಅಯ್ಯರ್ ಕೆಳ ಬೆನ್ನಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಈ ಕಾರಣದಿಂದಾಗಿ, ಅವರು ಸುಮಾರು 4 ರಿಂದ 5 ತಿಂಗಳ ಕಾಲ ಹೊರಗೆ ಇರಬೇಕಾಗಬಹುದು. ಈ ಕಾರಣಕ್ಕಾಗಿ, ಐಪಿಎಲ್ 2023 ಹೊರತುಪಡಿಸಿ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿಯೂ ಅವರು ಆಡುವುದು ಅನುಮಾನವಾಗಿದೆ. ಅಲ್ಲದೇ ಅವರು ಸಂಪೂರ್ಣವಾಗಿ ಚೇತರಿಸಿಕೊಂಡು ಮತ್ತೆ ಕಣಕ್ಕಿಳಿಯುವುದರ ಒಳಗಾಗಿ ಏಖದಿನ ವಿಶ್ವಕಪ್ ಸಹ ಮಿಸ್ ಮಾಡಿಕೊಳ್ಳುವ ಸಾಧ್ಯತೆ ಇದೆ.
ನಾವು ವೇಗದ ಬೌಲರ್‌ಗಳ ಪ್ರದರ್ಶನವನ್ನು ನೋಡಿದರೆ, ಜನವರಿ 1, 2022 ರಿಂದ, ಜಸ್ಪ್ರೀತ್ ಬುಮ್ರಾ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದಿದ್ದಾರೆ. 5 ಪಂದ್ಯಗಳಲ್ಲಿ 20ರ ಸರಾಸರಿಯಲ್ಲಿ 22 ವಿಕೆಟ್ ಪಡೆದಿದ್ದಾರೆ. 2 ಬಾರಿ 5 ವಿಕೆಟ್ ಪಡೆದಿದ್ದಾರೆ. ಮೊಹಮ್ಮದ್ ಶಮಿ 8 ಟೆಸ್ಟ್‌ಗಳಲ್ಲಿ 22 ವಿಕೆಟ್‌ಗಳನ್ನು ಕಬಳಿಸಿದ್ದಾರೆ ಮತ್ತು ಉಮೇಶ್ ಯಾದವ್ 5 ಟೆಸ್ಟ್‌ಗಳಲ್ಲಿ 12 ವಿಕೆಟ್‌ಗಳನ್ನು ಪಡೆದಿದ್ದಾರೆ.