2022ರ ಏಷ್ಯಾಕಪ್‌ನಲ್ಲಿ, ವಿರಾಟ್ ಕೊಹ್ಲಿ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ತಮ್ಮ ಮೂರು ವರ್ಷಗಳ ಸುದೀರ್ಘ ಶತಕಗಳ ಬರವನ್ನು ಕೊನೆಗೊಳಿಸಿದರು. ಇದು ಅಂತಾರಾಷ್ಟ್ರೀಯ ಟಿ20ಯಲ್ಲಿ ಕಿಂಗ್ ಕೊಹ್ಲಿ ಅವರ ಮೊದಲ ಶತಕವಾಗಿತ್ತು. ಏಷ್ಯಾಕಪ್ ನಂತರ, ಅವರು ಟಿ20, ODI ಮತ್ತು ಟೆಸ್ಟ್ ಸೇರಿದಂತೆ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸುಮಾರು 1,600 ರನ್ ಗಳಿಸಿದ್ದಾರೆ.