ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಮದುವೆಯ ಸೀಸನ್ ನಡೆಯುತ್ತಿದೆ. ಹ್ಯಾರಿಸ್ ರೌಫ್, ಶಾದಾಬ್ ಖಾನ್ ಮತ್ತು ಶಾನ್ ಮಸೂದ್ ನಂತರ ಪಾಕಿಸ್ತಾನದ ಮತ್ತೊಬ್ಬ ಕ್ರಿಕೆಟಿಗ ಶಾಹೀನ್ ಅಫ್ರಿದಿ ವಿವಾಹವಾಗಿದ್ದಾರೆ. ಶಾಹೀನ್ ಮಾಜಿ ನಾಯಕ ಶಾಹಿದ್ ಅಫ್ರಿದಿ ಪುತ್ರಿ ಅನ್ಶಾ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಕಾರ್ಯಕ್ರಮವು ಪಾಕಿಸ್ತಾನದ ಬಂದರು ನಗರ ಎಂದು ಕರೆಯಲ್ಪಡುವ ಕರಾಚಿ ನಗರದಲ್ಲಿ ನಡೆಯಿತು.