IND vs NZ T20: ಒಂದೇ ದಿನ ಟೀಂ ಇಂಡಿಯಾದ 2 ಟಿ20 ಪಂದ್ಯ, ಸೂಪರ್ ಸಂಡೇಗೆ ಡಬಲ್​ ಧಮಾಕಾ

IND vs NZ T20: ಕ್ರಿಕೆಟ್ ಅಭಿಮಾನಿಗಳಿಗೆ ಭಾನುವಾರ ಸೂಪರ್ ಸಂಡೇ ಆಗಲಿದೆ. ಟೀಂ ಇಂಡಿಯಾ ಇಂದು ಒಂದಲ್ಲ ಎರಡು ಮಹತ್ವದ ಟಿ20 ಪಂದ್ಯಗಳನ್ನು ಆಡಲಿದೆ. ಮೊದಲ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಆಡಬೇಕಿದ್ದರೆ, ಎರಡನೇ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೆಣಸಲಿದೆ.

First published:

 • 18

  IND vs NZ T20: ಒಂದೇ ದಿನ ಟೀಂ ಇಂಡಿಯಾದ 2 ಟಿ20 ಪಂದ್ಯ, ಸೂಪರ್ ಸಂಡೇಗೆ ಡಬಲ್​ ಧಮಾಕಾ

  ಭಾರತ ತಂಡಕ್ಕೆ ಇಂದು ವಿಶೇಷ ದಿನವಾಗಿದೆ. ಟೀಂ ಇಂಡಿಯಾ ಇಂದು ಒಂದಲ್ಲ ಎರಡು ಬಿಗ್ ಹಿಟ್ ಟಿ20 ಪಂದ್ಯಗಳನ್ನು ಆಡಲಿದೆ. ಒಂದೆಡೆ ಇಂಗ್ಲೆಂಡ್ ತಂಡದ ವಿರುದ್ಧ ಪಂದ್ಯ ನಡೆಯುತ್ತಿದ್ದರೆ, ಎರಡನೇ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೆಣಸಾಟ ನಡೆಯಲಿದೆ.

  MORE
  GALLERIES

 • 28

  IND vs NZ T20: ಒಂದೇ ದಿನ ಟೀಂ ಇಂಡಿಯಾದ 2 ಟಿ20 ಪಂದ್ಯ, ಸೂಪರ್ ಸಂಡೇಗೆ ಡಬಲ್​ ಧಮಾಕಾ

  ಐಸಿಸಿ ಮೊದಲ ಬಾರಿಗೆ 19 ವರ್ಷದೊಳಗಿನವರ ಮಹಿಳಾ ಟಿ20 ವಿಶ್ವಕಪ್ ಅನ್ನು ಆಯೋಜಿಸಿದೆ. ಶೆಫಾಲಿ ವರ್ಮಾ ನಾಯಕತ್ವದಲ್ಲಿ ಭಾರತ ತಂಡ ಎಲ್ಲಾ ಎದುರಾಳಿಗಳನ್ನು ಸೋಲಿಸಿ ಫೈನಲ್‌ಗೆ ಲಗ್ಗೆ ಇಟ್ಟಿತು. ಈಗ ಅವರು ಟ್ರೋಫಿ ಪಡೆಯಲು ಸಂಜೆ ಇಂಗ್ಲೆಂಡ್ ಅನ್ನು ಎದುರಿಸಬೇಕಾಗಿದೆ.

  MORE
  GALLERIES

 • 38

  IND vs NZ T20: ಒಂದೇ ದಿನ ಟೀಂ ಇಂಡಿಯಾದ 2 ಟಿ20 ಪಂದ್ಯ, ಸೂಪರ್ ಸಂಡೇಗೆ ಡಬಲ್​ ಧಮಾಕಾ

  ಟಿ20 ವಿಶ್ವಕಪ್‌ನ ಅಂತಿಮ ಪಂದ್ಯವು ಭಾರತ ಮತ್ತು ಇಂಗ್ಲೆಂಡ್‌ನ ಅಂಡರ್-19 ಮಹಿಳಾ ತಂಡಗಳ ನಡುವೆ ಸಂಜೆ 5 ಗಂಟೆಯ ನಂತರ ನಡೆಯಲಿದೆ. ಭಾರತವು ನ್ಯೂಜಿಲೆಂಡ್ ಅನ್ನು ಸೋಲಿಸುವ ಮೂಲಕ ಫೈನಲ್‌ಗೆ ಪ್ರವೇಶಿಸಿತು, ಆದರೆ ಇಂಗ್ಲೆಂಡ್ ಆಸ್ಟ್ರೇಲಿಯಾ ವಿರುದ್ಧ ರೋಚಕ ಜಯದೊಂದಿಗೆ ಫೈನಲ್‌ಗೇರಿದೆ.

  MORE
  GALLERIES

 • 48

  IND vs NZ T20: ಒಂದೇ ದಿನ ಟೀಂ ಇಂಡಿಯಾದ 2 ಟಿ20 ಪಂದ್ಯ, ಸೂಪರ್ ಸಂಡೇಗೆ ಡಬಲ್​ ಧಮಾಕಾ

  ಇನ್ನೊಂದು ಪಂದ್ಯದಲ್ಲಿ ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯ ಇಂದು ಸಂಜೆ ಲಕ್ನೋದಲ್ಲಿ ನಡೆಯಲಿದೆ. ಈ ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದೆ.

  MORE
  GALLERIES

 • 58

  IND vs NZ T20: ಒಂದೇ ದಿನ ಟೀಂ ಇಂಡಿಯಾದ 2 ಟಿ20 ಪಂದ್ಯ, ಸೂಪರ್ ಸಂಡೇಗೆ ಡಬಲ್​ ಧಮಾಕಾ

  ಪ್ರವಾಸಿ ತಂಡ ಮೊದಲ ಪಂದ್ಯದಲ್ಲಿ ಗೆದ್ದು 1-0 ಮುನ್ನಡೆ ಸಾಧಿಸಿದೆ. ಹೀಗಾಗಿ ಇಂದಿನ ಪಂದ್ಯವನ್ನು ಭಾರತ ತಂಡ ಗೆಲ್ಲಲೇಬೇಕಿದೆ. ಎರಡನೇ ಪಂದ್ಯದಲ್ಲೂ ಹಾರ್ದಿಕ್ ಪಾಂಡ್ಯ ಪಡೆ ಸೋತರೆ ಸರಣಿ ಕೈ ತಪ್ಪಲಿದೆ.

  MORE
  GALLERIES

 • 68

  IND vs NZ T20: ಒಂದೇ ದಿನ ಟೀಂ ಇಂಡಿಯಾದ 2 ಟಿ20 ಪಂದ್ಯ, ಸೂಪರ್ ಸಂಡೇಗೆ ಡಬಲ್​ ಧಮಾಕಾ

  ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಟಿ20 ಪಂದ್ಯ ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಆರಂಭವಾಗಲಿದ್ದು, 6:30ಕ್ಕೆ ಟಾಸ್ ನಡೆಯಲಿದೆ.

  MORE
  GALLERIES

 • 78

  IND vs NZ T20: ಒಂದೇ ದಿನ ಟೀಂ ಇಂಡಿಯಾದ 2 ಟಿ20 ಪಂದ್ಯ, ಸೂಪರ್ ಸಂಡೇಗೆ ಡಬಲ್​ ಧಮಾಕಾ

  ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ವಿವಿಧ ಚಾನಲ್‌ಗಳಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಎರಡನೇ ಟಿ 20 ಪಂದ್ಯದ ನೇರ ಪ್ರಸಾರವಾಗಲಿದೆ. ಲೈವ್-ಸ್ಟ್ರೀಮಿಂಗ್ ಅನ್ನು ಭಾರತದಲ್ಲಿ ಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲಿ ವೀಕ್ಷಿಸಬಹುದು.

  MORE
  GALLERIES

 • 88

  IND vs NZ T20: ಒಂದೇ ದಿನ ಟೀಂ ಇಂಡಿಯಾದ 2 ಟಿ20 ಪಂದ್ಯ, ಸೂಪರ್ ಸಂಡೇಗೆ ಡಬಲ್​ ಧಮಾಕಾ

  ಭಾರತ ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ಶುಭಮನ್ ಗಿಲ್, ಇಶಾನ್ ಕಿಶನ್, ಪೃಥ್ವಿ ಶಾ, ಸೂರ್ಯಕುಮಾರ್ ಯಾದವ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಕುಲ್ದೀಪ್ ಯಾದವ್, ಅರ್ಶ್​ದೀಪ್​ ಸಿಂಗ್, ಶಿವಂ ಮಾವಿ, ಉಮ್ರಾನ್ ಮಲಿಕ್, ಮುಖೇಶ್ ಕುಮಾರ್.

  MORE
  GALLERIES