ಅಷ್ಟಕ್ಕೂ ಏನಿದು ಪ್ರಕರಣ ಎಂದು ನೋಡುವುದಾದರೆ, ಬುಧವಾರ ರಾತ್ರಿ ಪೃಥ್ವಿ ಶಾ ಮತ್ತು ಅವರ ಸ್ನೇಹಿತರು ಸಾಂತಾಕ್ರೂಜ್ ಪ್ರದೇಶದ ಹೋಟೆಲ್‌ಗೆ ಊಟಕ್ಕೆ ಹೋಗಿದ್ದರು. ಸಪ್ನಾ ಗಿಲ್ ಕೂಡ ಅದೇ ಹೋಟೆಲ್‌ನಲ್ಲಿ ತನ್ನ ಕೆಲವು ಸ್ನೇಹಿತರ ಜೊತೆ ಪಾರ್ಟಿ ಮಾಡುತ್ತಿದ್ದರು. ಇದೇ ವೇಳೆ ಸಪ್ನಾ ತನ್ನ ಸ್ನೇಹಿತರ ಜೊತೆ ಸೆಲ್ಫಿಗೆ ಪೃಥ್ವಿ ಶಾ ಬಳಿ ವಿನಂತಿಸಿದ್ದಾಳೆ. ಪೃಥ್ವಿ ಅವರೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಾರೆ.