Team India: ಈ ವರ್ಷ ಭಾರತದ ಪರ ODIಗಳಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ, ಆದ್ರೂ ತಂಡದಲ್ಲಿಲ್ಲ ಸ್ಥಾನ
Team India: ಭಾರತ ತಂಡಕ್ಕೆ 2022ರಲ್ಲಿ ಏಕದಿನ ಮಾದರಿಯಲ್ಲಿ ಅತಿ ಹೆಚ್ಚು ಸಿಕ್ಸರ್ಗಳನ್ನು ಬಾರಿಸಿದ ವಿಶೇಷ ಸಾಧನೆ ಸದ್ಯ ಸಂಜು ಸ್ಯಾಮ್ಸನ್ ಹೆಸರಿನಲ್ಲಿದೆ. ಪ್ರಸಕ್ತ ವರ್ಷ ಏಕದಿನ ಪಂದ್ಯಗಳ ಒಂಬತ್ತು ಇನ್ನಿಂಗ್ಸ್ಗಳಲ್ಲಿ ಸ್ಯಾಮ್ಸನ್ 14 ಸಿಕ್ಸರ್ಗಳನ್ನು ಬಾರಿಸಿದ್ದಾರೆ.
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯ ರದ್ದಾಗಿದೆ. ಈ ಮೂಲಕ ಕಿವೀಸ್ ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿದೆ. ಆದರೆ 2ನೇ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಬದಲಿಗೆ ದೀಪಕ್ ಹೂಡಾ ಮತ್ತು ಶಾರ್ದೂಲ್ ಠಾಕೂರ್ ಬದಲಿಗೆ ದೀಪಕ್ ಚಹಾರ್ಗೆ ಸ್ಥಾನ ದೊರಕಿತ್ತು.
2/ 7
ಎರಡನೇ ಏಕದಿನ ಪಂದ್ಯದಿಂದ ಸಂಜು ಸ್ಯಾಮ್ಸನ್ ಅವರನ್ನು ಕ್ಯಾಪ್ಟನ್ ಧವನ್ ಮತ್ತು ಟೀಮ್ ಮ್ಯಾನೇಜ್ಮೆಂಟ್ ಕೈಬಿಟ್ಟಿದ್ದು, ಅಭಿಮಾನಿಗಳ ಬೇಸರಕ್ಕೆ ಕಾರಣವಾಯಿತು. ಪಂತ್ ಬದಲು ಸ್ಯಾಮ್ಸನ್ ಅವರನ್ನು ತಂಡದಲ್ಲಿ ಇರಿಸಿಕೊಳ್ಳಲು ಜನರು ಸಲಹೆ ನೀಡುತ್ತಿದ್ದಾರೆ.
3/ 7
ಸಂಜು ಸ್ಯಾಮ್ಸನ್ ಈ ವರ್ಷ ಭಾರತ ತಂಡದ ಪರ ಒಂಬತ್ತು ಏಕದಿನ ಇನ್ನಿಂಗ್ಸ್ಗಳಲ್ಲಿ 14 ಸಿಕ್ಸರ್ಗಳನ್ನು ಬಾರಿಸಿದ್ದಾರೆ. ಪ್ರಸ್ತುತ, 2022 ರಲ್ಲಿ ಏಕದಿನ ಮಾದರಿಯಲ್ಲಿ ಅತಿ ಹೆಚ್ಚು ಸಿಕ್ಸರ್ಗಳನ್ನು ಬಾರಿಸಿದ ದೇಶದ ಮೊದಲ ಬ್ಯಾಟ್ಸ್ಮನ್.
4/ 7
ಸ್ಯಾಮ್ಸನ್ ನಂತರ ಶ್ರೇಯಸ್ ಅಯ್ಯರ್ ಹೆಸರು ಎರಡನೇ ಸ್ಥಾನದಲ್ಲಿದೆ. ಅಯ್ಯರ್ ಈ ವರ್ಷ ಭಾರತ ತಂಡದ ಪರ 10 ಸಿಕ್ಸರ್ಗಳನ್ನು ಬಾರಿಸಿದ್ದಾರೆ.
5/ 7
ಯುವ ಬ್ಯಾಟ್ಸ್ಮನ್ ಶುಭಮನ್ ಗಿಲ್ ಮೂರನೇ ಸ್ಥಾನದಲ್ಲಿದ್ದಾರೆ. ಗಿಲ್ ಈ ವರ್ಷ ಭಾರತ ತಂಡಕ್ಕಾಗಿ 10 ಇನ್ನಿಂಗ್ಸ್ಗಳಲ್ಲಿ ಒಂಬತ್ತು ಸಿಕ್ಸರ್ಗಳನ್ನು ಬಾರಿಸಿದ್ದಾರೆ. ಗಿಲ್ ಅವರ ಸ್ಥಾನವನ್ನು ಸುಧಾರಿಸಲು ಸುವರ್ಣ ಅವಕಾಶವಿದೆ.
6/ 7
ಯುವ ಆರಂಭಿಕ ಆಟಗಾರ ಇಶಾನ್ ಕಿಶನ್ ನಾಲ್ಕನೇ ಸ್ಥಾನದಲ್ಲಿದ್ದಾರೆ. ಕಿಶನ್ ಟೀಂ ಇಂಡಿಯಾ ಪರ ಆರು ಇನ್ನಿಂಗ್ಸ್ಗಳಲ್ಲಿ ಎಂಟು ರನ್ ಗಳಿಸಿದ್ದಾರೆ.
7/ 7
ಆಲ್ ರೌಂಡರ್ ಅಕ್ಷರ್ ಪಟೇಲ್ ಹೆಸರು ಐದನೇ ಸ್ಥಾನದಲ್ಲಿದೆ. ಪಟೇಲ್ ಈ ವರ್ಷ ಭಾರತ ತಂಡಕ್ಕಾಗಿ ಏಕದಿನ ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳನ್ನು ಆಡುವಾಗ ಆರು ಸಿಕ್ಸರ್ಗಳನ್ನು ಬಾರಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಪಟೇಲ್ಗೆ ವಿಶ್ರಾಂತಿ ನೀಡಲಾಗಿದೆ.