PHOTOS: 2ನೇ ಬಾರಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಾನಿಯಾ ತಂಗಿ; ಮಾಜಿ ಕ್ರಿಕೆಟರ್ ಪುತ್ರನನ್ನು ವರಿಸಿದ ಅನಮ್ ಮಿರ್ಜಾ
ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಕಿರಿಯ ಸಹೋದರಿ ಅನಮ್ ಮಿರ್ಜಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಟೀಂ ಇಂಡಿಯಾದ ಮಾಜಿ ನಾಯಕ ಮೊಹಮದ್ ಅಜರುದ್ದೀನ್ ಮಗ ಅಸಾದುದ್ದೀನ್ ಅವರ ಜೊತೆ ಆನಮ್ ಮಿರ್ಜಾರ ವಿವಾಹವಾಗಿದೆ. ಈ ಸಂತೋಷದ ಕ್ಷಣವನ್ನು ಅನಮ್ ತಮ್ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಕಿರಿಯ ಸಹೋದರಿ ಅನಮ್ ಮಿರ್ಜಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
2/ 8
ಟೀಂ ಇಂಡಿಯಾದ ಮಾಜಿ ನಾಯಕ ಮೊಹಮದ್ ಅಜರುದ್ದೀನ್ ಮಗ ಅಸಾದುದ್ದೀನ್ ಅವರ ಜೊತೆ ಆನಮ್ ಮಿರ್ಜಾರ ವಿವಾಹವಾಗಿದೆ. ಈ ಸಂತೋಷದ ಕ್ಷಣವನ್ನು ಅನಮ್ ತಮ್ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
3/ 8
ಮೂರು ದಿನಗಳ ಕಾಲ ಅನಂ ಮತ್ತು ಅಸಾದುದ್ದೀನ್ ವಿವಾಹ ಕಾರ್ಯಕ್ರಮ ನಡೆದಿದೆ. ಮಧುಮಕ್ಕಳು ಸಾಂಪ್ರದಾಯಿಕ ಹೈದರಾಬಾದಿ ಧಿರಿಸಿನಲ್ಲಿ ಮಿಂಚಿದ್ದಾರೆ.
4/ 8
ಈ ವಿವಾಹ ಮಹೋತ್ಸವದಲ್ಲಿ ಸಾನಿಯಾ ಮಿರ್ಜಾ ಕೂಡ ಮಿಂಚಿದ್ದು, ಮೆಹಂದಿಯಂದು ನೀಲಿ ಮತ್ತು ಸಿಲ್ವರ್ ಬಣ್ಣದ ಧಿರಿಸಿನಲ್ಲಿ ಕಾಣಿಸಿಕೊಂಡಿದ್ದಾರೆ.
5/ 8
25 ವರ್ಷದ ಆನಮ್ 2016ರಲ್ಲಿ ಅಖ್ತರ್ ರಶೀದ್ ಎಂಬುವವರನ್ನು ಮದುವೆಯಾಗಿದ್ದರು. ಆದರೆ, ಒಂದೂವರೆ ವರ್ಷಗಳ ನಂತರ ಅವರ ಮದುವೆ ಮುರಿದುಬಿದ್ದಿತ್ತು.
6/ 8
ಇದೀಗ ಅಸಾದುದ್ದೀನ್ ಜೊತೆಗೆ ಆನಮ್ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.