Sania Mirza: ಕೊನೆಯ ಪಂದ್ಯವಾಡಿದ ಸಾನಿಯಾ ಮಿರ್ಜಾ, ಸೋಲಿನೊಂದಿಗೆ ಟೆನಿಸ್​ಗೆ ವಿದಾಯ ಹೇಳಿದ ಮೂಗುತಿ ಸುಂದರಿ

Sania Mirza: ಭಾರತದಲ್ಲಿ ಟೆನಿಸ್‌ಗೆ ಹೊಸ ಯುಗವನ್ನು ಪ್ರಾರಂಭಿಸಿದ ಸಾನಿಯಾ ಮಿರ್ಜಾ ತಮ್ಮ ವೃತ್ತಿಜೀವನದಿಂದ ನಿವೃತ್ತರಾಗಿದ್ದಾರೆ.

First published:

  • 18

    Sania Mirza: ಕೊನೆಯ ಪಂದ್ಯವಾಡಿದ ಸಾನಿಯಾ ಮಿರ್ಜಾ, ಸೋಲಿನೊಂದಿಗೆ ಟೆನಿಸ್​ಗೆ ವಿದಾಯ ಹೇಳಿದ ಮೂಗುತಿ ಸುಂದರಿ

    ಭಾರತದಲ್ಲಿ ಟೆನಿಸ್‌ನ ಹೊಸ ಯುಗವನ್ನು ಪ್ರಾರಂಭಿಸಿದ ಸಾನಿಯಾ ಮಿರ್ಜಾ ತಮ್ಮ ವೃತ್ತಿಜೀವನದಿಂದ ನಿವೃತ್ತರಾಗಿದ್ದಾರೆ. WTA ದುಬೈ ಡ್ಯೂಟಿ ಫ್ರೀ ಚಾಂಪಿಯನ್‌ಶಿಪ್‌ನ ಮೊದಲ ಪಂದ್ಯದೊಂದಿಗೆ ಸಾನಿಯಾ ಟೆನಿಸ್‌ನಿಂದ ನಿವೃತ್ತರಾದರು.

    MORE
    GALLERIES

  • 28

    Sania Mirza: ಕೊನೆಯ ಪಂದ್ಯವಾಡಿದ ಸಾನಿಯಾ ಮಿರ್ಜಾ, ಸೋಲಿನೊಂದಿಗೆ ಟೆನಿಸ್​ಗೆ ವಿದಾಯ ಹೇಳಿದ ಮೂಗುತಿ ಸುಂದರಿ

    ಭಾರತದ ಟೆನಿಸ್ ಆಟಗಾರ್ತಿ ಮೊದಲ ಸುತ್ತಿನಲ್ಲೇ ಹೊರಬೀಳಬೇಕಾಯಿತು. ಮಹಿಳೆಯರ ಡಬಲ್ಸ್‌ನಲ್ಲಿ ಸಾನಿಯಾ ಮತ್ತು ಅಮೆರಿಕದ ಜೊತೆಗಾರ್ತಿ ಮ್ಯಾಡಿಸನ್ ಕೀಸ್ ಅವರು ತಮ್ಮ ಮೊದಲ ಪಂದ್ಯದಲ್ಲಿ ರಷ್ಯಾದ ವೆರೋನಿಕಾ ಕುಡೆರ್ಮೆಟೋವಾ ಮತ್ತು ಲ್ಯುಡ್ಮಿಲಾ ಸ್ಯಾಮ್ಸೊನೊವಾ ವಿರುದ್ಧ ಸೋಲನ್ನಪ್ಪಿದರು.

    MORE
    GALLERIES

  • 38

    Sania Mirza: ಕೊನೆಯ ಪಂದ್ಯವಾಡಿದ ಸಾನಿಯಾ ಮಿರ್ಜಾ, ಸೋಲಿನೊಂದಿಗೆ ಟೆನಿಸ್​ಗೆ ವಿದಾಯ ಹೇಳಿದ ಮೂಗುತಿ ಸುಂದರಿ

    ಸಾನಿಯಾ-ಕೀಸ್ ಜೋಡಿ ರಷ್ಯಾದ ವೆರ್ನೊಕಿಯಾ ಕುಡೆರ್ಮೆಟೊವಾ ಮತ್ತು ಲಿಯುಡ್ಮಿಲಾ ಸ್ಯಾಮ್ಸೊನೊವಾ ವಿರುದ್ಧ 4-6, 0-6 ಅಂತರದಲ್ಲಿ ಸೋಲನುಭವಿಸಿತು.

    MORE
    GALLERIES

  • 48

    Sania Mirza: ಕೊನೆಯ ಪಂದ್ಯವಾಡಿದ ಸಾನಿಯಾ ಮಿರ್ಜಾ, ಸೋಲಿನೊಂದಿಗೆ ಟೆನಿಸ್​ಗೆ ವಿದಾಯ ಹೇಳಿದ ಮೂಗುತಿ ಸುಂದರಿ

    ಮಹಿಳಾ ಡಬಲ್ಸ್‌ನಲ್ಲಿ ಮೂರು ಪ್ರಶಸ್ತಿಗಳು ಸೇರಿದಂತೆ ಆರು ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿಗಳನ್ನು ಸಾನಿಯಾ ಈವರೆಗೆ ಗೆದ್ದಿದ್ದಾರೆ. ಅಲ್ಲದೇ ಸಾನಿಯಾ ಮಿರ್ಜಾ ಮೂರು ದಶಕಗಳ ಕಾಲ ಟೆನಿಸ್ ಜಗತ್ತಿನಲ್ಲಿ ಪ್ರಾಬಲ್ಯ ಸಾಧಿಸಿದ್ದಾರೆ.

    MORE
    GALLERIES

  • 58

    Sania Mirza: ಕೊನೆಯ ಪಂದ್ಯವಾಡಿದ ಸಾನಿಯಾ ಮಿರ್ಜಾ, ಸೋಲಿನೊಂದಿಗೆ ಟೆನಿಸ್​ಗೆ ವಿದಾಯ ಹೇಳಿದ ಮೂಗುತಿ ಸುಂದರಿ

    ಗ್ರ್ಯಾಂಡ್ ಸ್ಲಾಮ್ ಟೂರ್ನಿಯಲ್ಲಿ ಪ್ರೀ ಕ್ವಾರ್ಟರ್ ತಲುಪಿದ ಮೊದಲ ಭಾರತೀಯ ಆಟಗಾರ್ತಿ ಸಾನಿಯಾ. ಸಾನಿಯಾ 1999 ರಲ್ಲಿ ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆದ ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಮೂಲಕ ತಮ್ಮ ಅಂತರರಾಷ್ಟ್ರೀಯ ಚೊಚ್ಚಲ ಪ್ರವೇಶ ಮಾಡಿದ್ದರು.

    MORE
    GALLERIES

  • 68

    Sania Mirza: ಕೊನೆಯ ಪಂದ್ಯವಾಡಿದ ಸಾನಿಯಾ ಮಿರ್ಜಾ, ಸೋಲಿನೊಂದಿಗೆ ಟೆನಿಸ್​ಗೆ ವಿದಾಯ ಹೇಳಿದ ಮೂಗುತಿ ಸುಂದರಿ

    ಬಳಿಕ 2003 ರಲ್ಲಿ, ಅವರು ವಿಂಬಲ್ಡನ್ ಜೂನಿಯರ್ ಗ್ರ್ಯಾಂಡ್ ಸ್ಲ್ಯಾಮ್ ಡಬಲ್ಸ್ ಪ್ರಶಸ್ತಿಯನ್ನು ಗೆದ್ದರು. ವಿಂಬಲ್ಡನ್‌ ವಿಭಾಗದಲ್ಲಿ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ. ಅವರು 2005 ರ ಆಸ್ಟ್ರೇಲಿಯನ್ ಓಪನ್ ಟೆನಿಸ್‌ನ ಮೂರನೇ ಸುತ್ತನ್ನು ತಲುಪಿದ ಸಾಧನೆ ಮಾಡಿದ್ದಾರೆ.

    MORE
    GALLERIES

  • 78

    Sania Mirza: ಕೊನೆಯ ಪಂದ್ಯವಾಡಿದ ಸಾನಿಯಾ ಮಿರ್ಜಾ, ಸೋಲಿನೊಂದಿಗೆ ಟೆನಿಸ್​ಗೆ ವಿದಾಯ ಹೇಳಿದ ಮೂಗುತಿ ಸುಂದರಿ

    36 ವರ್ಷದ ಸಾನಿಯಾ ಮಿರ್ಜಾ ಮೊಣಕೈ ಗಾಯದಿಂದಾಗಿ ಕಳೆದ ವರ್ಷ ಟೆನಿಸ್​ ಲೋಕದಿಂದ ಹೊರಗುಳಿದಿದ್ದರು. ಇದೇ ಕಾರಣಕ್ಕೆ ಯುಎಸ್ ಓಪನ್ ನಿಂದ ದೂರ ಉಳಿದಿದ್ದಾರೆ. ಆಗಸ್ಟ್ 2022ರಲ್ಲಿ ಆಡಿದ ಪಂದ್ಯದ ನಂತರ ಅವರು ಟೆನಿಸ್ ಕ್ಷೇತ್ರಕ್ಕೆ ಮತ್ತೆ ಪ್ರವೇಶಿಸಿರಲಿಲ್ಲ.

    MORE
    GALLERIES

  • 88

    Sania Mirza: ಕೊನೆಯ ಪಂದ್ಯವಾಡಿದ ಸಾನಿಯಾ ಮಿರ್ಜಾ, ಸೋಲಿನೊಂದಿಗೆ ಟೆನಿಸ್​ಗೆ ವಿದಾಯ ಹೇಳಿದ ಮೂಗುತಿ ಸುಂದರಿ

    36 ವರ್ಷದ ಟೆನಿಸ್ ತಾರೆ ಪಾಕಿಸ್ತಾನಿ ಕ್ರಿಕೆಟಿಗ ಸೋಯಬ್ ಮಲಿಕ್ ಅವರನ್ನು 2010ರಲ್ಲಿ ವಿವಾಹವಾದರು. ಅದರ ನಂತರ, ಇಜಾನ್ 2018ರಲ್ಲಿ ಸಾನಿಯಾ ಮಿರ್ಜಾಗೆ ಜನಿಸಿದರು. ಸದ್ಯ ನಾಲ್ಕು ವರ್ಷದ ಮಗನೊಂದಿಗೆ ದುಬೈನಲ್ಲಿ ನೆಲೆಸಿದ್ದಾರೆ.

    MORE
    GALLERIES