ಟೆನಿಸ್ ಒಂದು ಮನಮೋಹಕ ಆಟ. ಈ ಆಟದಲ್ಲಿ ಮಹಿಳೆಯರು ಸ್ಕರ್ಟ್ ಧರಿಸಿ ಕಣಕ್ಕೆ ಇಳಿಯುತ್ತಾರೆ. ಸಾನಿಯಾ ಮಿರ್ಜಾ ಎಲ್ಲರಂತೆ ಸ್ಕರ್ಟ್ ಧರಿಸಿ ಕಣಕ್ಕೆ ಇಳಿದಾಗ ಮುಸ್ಲಿಂ ಧಾರ್ಮಿಕ ಮುಖಂಡರೂ ಇದರ ವಿರುದ್ಧ ಮಾತನಾಡಿದ್ದರು. ಅಲ್ಲದೇ ಆ ವೇಳೆ ಸಾನಿಯಾ ಅವರಿಗೆ ಫತ್ವಾ ಹೊರಡಿಸಿದ್ದರು. ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಸಾನಿಯಾ ತಮ್ಮ ಆಟದಿಂದ ದೇಶವೇ ಹೆಮ್ಮೆ ಪಡುವಂತೆ ಮಾಡಿದರು.
ಸಾನಿಯಾ ಮಿರ್ಜಾ ಎದುರಿಸಿದ ದೊಡ್ಡ ವಿವಾದ ಇದಾಗಿದೆ. 2008 ರಲ್ಲಿ, ಎದುರಿನ ಮೇಜಿನ ಮೇಲೆ ತನ್ನ ಪಾದಗಳನ್ನು ಇಟ್ಟು ಟೆನಿಸ್ ಪಂದ್ಯವನ್ನು ವೀಕ್ಷಿಸುತ್ತಿದ್ದಾಗ. ಅದೇ ಟೇಬಲ್ ಮೇಲೆ ಭಾರತದ ರಾಷ್ಟ್ರಧ್ವಜವಿತ್ತು. ಅವರ ಪಾದಗಳು ಧ್ವಜವನ್ನು ಸ್ಪರ್ಶಿಸುತ್ತಿರುವ ರೀತಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದವು. ಈ ಘಟನೆಯ ಬಗ್ಗೆ ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ಸಿಂಗ್ ಠಾಕೂರ್ ಕೂಡ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು.
2009 ರಲ್ಲಿ, ಸಾನಿಯಾ ಮಿರ್ಜಾ ತನ್ನ ಬಾಲ್ಯದ ಸ್ನೇಹಿತ ಶೋರಬ್ ಮಿರ್ಜಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು. ಹೈದರಾಬಾದಿನಲ್ಲಿ ನಡೆದ ಈ ಕಾರ್ಯಕ್ರಮದ ನೇರ ಹಕ್ಕುಗಳನ್ನು ಮಾಧ್ಯಮವೊಂದಕ್ಕೆ ಮಾರಾಟ ಮಾಡಿದ್ದು ಆ ಕಾಲಕ್ಕೆ ಸಂಚಲನ ಮೂಡಿಸಿತ್ತು. ಆದರೆ ಈ ನಿಶ್ಚಿತಾರ್ಥ ಹೆಚ್ಚು ಕಾಲ ಉಳಿಯಲಿಲ್ಲ. ಆರು ತಿಂಗಳ ನಂತರ, ದಂಪತಿಗಳು ಬೇರ್ಪಡುವುದಾಗಿ ಘೋಷಿಸಿದರು. ಇದು ಹೊಸ ಚರ್ಚೆಗೆ ಕಾರಣವಾಗಿತ್ತು.