IPL 2023: ಆರ್​ಸಿಬಿಗೆ ಮತ್ತೊಂದು ಬಿಗ್​ ಶಾಕ್​! ಸರ್ಜರಿಗೆ ಒಳಗಾದ ಸ್ಟಾರ್​ ಪ್ಲೇಯರ್​, ಟೂರ್ನಿಯಿಂದಲೇ ಔಟ್!​

IPL 2023: ಆರ್​ಸಿಬಿ ತಂಡದ ಸ್ಟಾರ್​ ವೇಗಿ ಆಗಿದ್ದ ರೀಸ್ ಟೋಪ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಫಿಲ್ಡಿಂಗ್​ ಮಾಡುವ ವೇಳೆ ಬಿದ್ದು ಭುಜಕ್ಕೆ ಗಾಯ ಮಾಡಿಕೊಂಡಿದ್ದರು.

First published:

  • 17

    IPL 2023: ಆರ್​ಸಿಬಿಗೆ ಮತ್ತೊಂದು ಬಿಗ್​ ಶಾಕ್​! ಸರ್ಜರಿಗೆ ಒಳಗಾದ ಸ್ಟಾರ್​ ಪ್ಲೇಯರ್​, ಟೂರ್ನಿಯಿಂದಲೇ ಔಟ್!​

    ಐಪಿಎಲ್ 2023ರ 16ನೇ ಸೀಸನ್​ನಲ್ಲಿ ಆರ್​ಸಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಇದೇ ಎಪ್ರಿಲ್​ 15ರಂದು ಸೆಣಸಾಡಲಿದೆ. ಈ ಪಂದ್ಯವು ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿದ್ದು, ಸತತ ಸೋಲಿನ ಬಳಿಕ ಗೆಲುವಿನ ಲಯಕ್ಕೆ ಮರಳಲು ಆರ್​ಸಿಬಿ ಸಿದ್ಧವಾಗಿದೆ.

    MORE
    GALLERIES

  • 27

    IPL 2023: ಆರ್​ಸಿಬಿಗೆ ಮತ್ತೊಂದು ಬಿಗ್​ ಶಾಕ್​! ಸರ್ಜರಿಗೆ ಒಳಗಾದ ಸ್ಟಾರ್​ ಪ್ಲೇಯರ್​, ಟೂರ್ನಿಯಿಂದಲೇ ಔಟ್!​

    ಇದರ ನಡುವೆ ಆರ್​ಸಿಬಿ ತಂಡದ ಸ್ಟಾರ್​ ವೇಗಿ ಆಗಿದ್ದ ರೀಸ್ ಟೋಪ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಫಿಲ್ಡಿಂಗ್​ ಮಾಡುವ ವೇಳೆ ಬಿದ್ದು ಭುಜಕ್ಕೆ ಗಾಯ ಮಾಡಿಕೊಂಡಿದ್ದರು. ಹೀಗಾಗಿ ಅವರು ಕೇವಲ 2 ಓವರ್​ ಬೌಲ್​ ಮಾಡಿ ಪಂದ್ಯದಿಂದ ಹಿರಗುಳಿದಿದ್ದರು.

    MORE
    GALLERIES

  • 37

    IPL 2023: ಆರ್​ಸಿಬಿಗೆ ಮತ್ತೊಂದು ಬಿಗ್​ ಶಾಕ್​! ಸರ್ಜರಿಗೆ ಒಳಗಾದ ಸ್ಟಾರ್​ ಪ್ಲೇಯರ್​, ಟೂರ್ನಿಯಿಂದಲೇ ಔಟ್!​

    ಬಳಿಕ ಅವರು ಹೆಚ್ಚಿನ ಚಿಕಿತ್ಸೆಗಾಗಿ ತವರಿಗೆ ಮರಳಿದ್ದರು. ಇದರಿಂದಾಗಿ ಅವರು ಈ ಸೀಸನ್​ನಲ್ಲಿ ಮರಳುವುದು ಅನುಮಾನವಾಗಿದೆ. ಅವರನ್ನು ಆರ್​ಸಿಬಿ ತಂಡ ಬಿಡ್​ನಲ್ಲಿ ಬರೋಬ್ಬರಿ 1.5 ಕೋಟಿಗೆ ಖರೀದಿಸಿತ್ತು. ಆದರೆ ಇದೀಗ ಅವರು ಐಪಿಎಲ್ 2023ರ ಸೀಸನ್‌ನಿಂದ ಹೊರಗುಳಿದ ನಂತರ ಮನೆಗೆ ಕಳುಹಿಸಲಾಗಿದೆ ಎಂದು ಬಹಿರಂಗಪಡಿಸಿದ್ದರು.

    MORE
    GALLERIES

  • 47

    IPL 2023: ಆರ್​ಸಿಬಿಗೆ ಮತ್ತೊಂದು ಬಿಗ್​ ಶಾಕ್​! ಸರ್ಜರಿಗೆ ಒಳಗಾದ ಸ್ಟಾರ್​ ಪ್ಲೇಯರ್​, ಟೂರ್ನಿಯಿಂದಲೇ ಔಟ್!​

    ರೀಸ್ ಟೋಪ್ಲಿ ಇಂಗ್ಲೆಂಡ್​ನಲ್ಲಿ ಭುಜದ ಗಾಯಕ್ಕೆ ಸರ್ಜರಿ ಮಾಡಿಸಿಕೊಂಡಿದ್ದಾರೆ. ಇದರ ಫೋಟೋವನ್ನು ರೀಸ್ ಟೋಪ್ಲಿ ಸೋಷಿಯ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆದಷ್ಟು ಬೇಗ ಗುಣಮುಖರಾಗಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.

    MORE
    GALLERIES

  • 57

    IPL 2023: ಆರ್​ಸಿಬಿಗೆ ಮತ್ತೊಂದು ಬಿಗ್​ ಶಾಕ್​! ಸರ್ಜರಿಗೆ ಒಳಗಾದ ಸ್ಟಾರ್​ ಪ್ಲೇಯರ್​, ಟೂರ್ನಿಯಿಂದಲೇ ಔಟ್!​

    ಈಗಾಗಲೇ ಆರ್​ಸಿಬಿ ವೇಗಿ ರೀಸ್​ ಟೋಪ್ಲಿ ಐಪಿಎಲ್ 2023ರಿಂದ ಸಂಪೂರ್ಣವಾಗಿ ಹೊರಗುಳಿದಿದ್ದಾರೆ. ಹೀಗಾಗಿ ಅವರ ಬದಲಿಗೆ ಸೌತ್ ಆಫ್ರಿಕಾದ ಎಡಗೈ ವೇಗಿ ವೇಯ್ನ್ ಪಾರ್ನೆಲ್ ಅವರನ್ನು ಆಯ್ಕೆ ಮಾಡಲಾಗಿದೆ. ಅಲ್ಲದೇ ರಜತ್ ಪಾಟಿದಾರ್ ಬದಲಿಗೆ ಕರ್ನಾಟಕದ ವೇಗಿ ವೈಶಾಖ್ ವಿಜಯಕುಮಾರ್ ಸ್ಥಾನ ಪಡೆದಿದ್ದಾರೆ.

    MORE
    GALLERIES

  • 67

    IPL 2023: ಆರ್​ಸಿಬಿಗೆ ಮತ್ತೊಂದು ಬಿಗ್​ ಶಾಕ್​! ಸರ್ಜರಿಗೆ ಒಳಗಾದ ಸ್ಟಾರ್​ ಪ್ಲೇಯರ್​, ಟೂರ್ನಿಯಿಂದಲೇ ಔಟ್!​

    ಇನ್ನು, ಐಪಿಎಲ್​ನಲ್ಲಿ ಈವರೆಗೆ ಅಂದರೆ ಕಳೆದ 16 ಸೀಸನ್​ನ ಲೆಕ್ಕ ನೋಡುವುದಾದರೆ, 200+ ರನ್​ ಗಳಸಿಯೂ ಅತೀ ಹೆಚ್ಚು ಬಾರಿ ಸೋತಿರುವ ದಾಖಲೆಯನ್ನು RCB ತಂಡ ಹೊಂದಿದೆ. ಅಂದರೆ ಐಪಿಎಲ್​ನಲ್ಲಿ ಈವರೆಗೆ ಆರ್​ಸಿಬಿ ತಂಡ 200+ ರನ್​ ಗಳಿಸಿಯೂ 5 ಬಾರಿ ಸೋಲನ್ನಪ್ಪಿದೆ.

    MORE
    GALLERIES

  • 77

    IPL 2023: ಆರ್​ಸಿಬಿಗೆ ಮತ್ತೊಂದು ಬಿಗ್​ ಶಾಕ್​! ಸರ್ಜರಿಗೆ ಒಳಗಾದ ಸ್ಟಾರ್​ ಪ್ಲೇಯರ್​, ಟೂರ್ನಿಯಿಂದಲೇ ಔಟ್!​

    RCB ಸಂಪೂರ್ಣ ತಂಡ: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಮೈಕೆಲ್ ಬ್ರೇಸ್​ವೆಲ್​, ದಿನೇಶ್ ಕಾರ್ತಿಕ್, ಅನೂಜ್ ರಾವತ್, ಫಿನ್ ಅಲೆನ್, ಜೋಶ್ ಹ್ಯಾಝಲ್​ವುಡ್​, ಮೊಹಮ್ಮದ್ ಸಿರಾಜ್, ಕರ್ಣ್​ ಶರ್ಮಾ, ಸಿದ್ಧಾರ್ಥ್​ ಕೌಲ್, ಹಿಮಾಂಶು ಶರ್ಮಾ, ರಜನ್ ಕುಮಾರ್, ಅವಿನಾಶ್ ಸಿಂಗ್, ಗ್ಲೆನ್ ಮ್ಯಾಕ್ಸ್​ವೆಲ್, ವನಿಂದು ಹಸರಂಗ, ಮಹಿಪಾಲ್ ಲೋಮ್ರರ್, ಶಹಬಾಝ್ ಅಹ್ಮದ್, ಹರ್ಷಲ್ ಪಟೇಲ್, ಆಕಾಶ್ ದೀಪ್, ಡೇವಿಡ್ ವಿಲ್ಲಿ, ಸುಯಶ್ ಪ್ರಭುದೇಸಾಯಿ, ಮನೋಜ್ ಭಾಂಡಗೆ, ಸೋನು ಯಾದವ್, ವೇಯ್ನ್ ಪಾರ್ನೆಲ್, ವೈಶಾಖ್ ವಿಜಯಕುಮಾರ್.

    MORE
    GALLERIES