Rohit Sharma: ಬರ್ತಡೇ ದಿನವೇ ರೋಹಿತ್​ ಶರ್ಮಾಗೆ ಮೋಸ, ಅಂಪೈರ್​ ಮೇಲೆ ಫ್ಯಾನ್ಸ್ ಆಕ್ರೋಶ!

Rohit Sharma: ರೋಹಿತ್ ಶರ್ಮಾ ವಿಕೆಟ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿವಾದ ಎದ್ದಿದೆ. ಮುಂಬೈ ಇಂಡಿಯನ್ಸ್ ಮತ್ತು ರೋಹಿತ್ ಅಭಿಮಾನಿಗಳು ಅಂಪೈರ್ ತಪ್ಪು ನಿರ್ಧಾರ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

First published:

  • 18

    Rohit Sharma: ಬರ್ತಡೇ ದಿನವೇ ರೋಹಿತ್​ ಶರ್ಮಾಗೆ ಮೋಸ, ಅಂಪೈರ್​ ಮೇಲೆ ಫ್ಯಾನ್ಸ್ ಆಕ್ರೋಶ!

    ಐಪಿಎಲ್ 2023 ಭಾನುವಾರ ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ರೋಚಕ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 6 ವಿಕೆಟ್‌ಗಳಿಂದ ಗೆದ್ದು ನಾಯಕ ರೋಹಿತ್ ಶರ್ಮಾಗೆ ಹುಟ್ಟುಹಬ್ಬದ ಉಡುಗೊರೆಯನ್ನು ನೀಡಿತು. ಈ ಪಂದ್ಯವನ್ನು ಮುಂಬೈ ಗೆದ್ದಿದ್ದರೂ ರೋಹಿತ್ ಶರ್ಮಾಗೆ ದೊಡ್ಡ ಮೋಸವಾಗಿದೆ.

    MORE
    GALLERIES

  • 28

    Rohit Sharma: ಬರ್ತಡೇ ದಿನವೇ ರೋಹಿತ್​ ಶರ್ಮಾಗೆ ಮೋಸ, ಅಂಪೈರ್​ ಮೇಲೆ ಫ್ಯಾನ್ಸ್ ಆಕ್ರೋಶ!

    ರೋಹಿತ್ ಶರ್ಮಾ ಭಾನುವಾರ (ಏಪ್ರಿಲ್​ 30) ತಮ್ಮ 36ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದು ಮಾತ್ರವಲ್ಲದೆ, ಐಪಿಎಲ್ ಇತಿಹಾಸದಲ್ಲಿ 1000 ನೇ ಪಂದ್ಯದಲ್ಲಿ ಐಪಿಎಲ್‌ನಲ್ಲಿ 150ನೇ ಬಾರಿಗೆ ಮುಂಬೈ ಇಂಡಿಯನ್ಸ್‌ಗೆ ನಾಯಕತ್ವ ವಹಿಸಿಕೊಂಡಿದ್ದರು. ರೋಹಿತ್ ಮುಂಬೈ ತಂಡದ ನಾಯಕನಾಗಿ ಹತ್ತು ವರ್ಷಗಳನ್ನು ಪೂರೈಸಿದ್ದಾರೆ.

    MORE
    GALLERIES

  • 38

    Rohit Sharma: ಬರ್ತಡೇ ದಿನವೇ ರೋಹಿತ್​ ಶರ್ಮಾಗೆ ಮೋಸ, ಅಂಪೈರ್​ ಮೇಲೆ ಫ್ಯಾನ್ಸ್ ಆಕ್ರೋಶ!

    ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ ರಾಯಲ್ಸ್ ನಡುವೆ ಐಪಿಎಲ್ ನ 1000ನೇ ಪಂದ್ಯ ನಡೆಯಿತು. ಈ ಪಂದ್ಯ ಅತ್ಯಂತ ವಿಶೇಷವಾಗಿತ್ತು. ಯುವ ಕ್ರಿಕೆಟಿಗ ಯಶಸ್ವಿ ಜೈಸ್ವಾಲ್ ಚೊಚ್ಚಲ ಶತಕ ಸಿಡಿಸಿದರು. ಆದರೂ ಭರ್ಜರಿ ಬ್ಯಾಟಿಂಗ್​ ಮೂಲಕ ಮುಂಬೈ ರೋಚಕವಾಗಿ ಗೆದ್ದು ಬೀಗಿತು.

    MORE
    GALLERIES

  • 48

    Rohit Sharma: ಬರ್ತಡೇ ದಿನವೇ ರೋಹಿತ್​ ಶರ್ಮಾಗೆ ಮೋಸ, ಅಂಪೈರ್​ ಮೇಲೆ ಫ್ಯಾನ್ಸ್ ಆಕ್ರೋಶ!

    ಆದರೆ ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಅವರನ್ನು ಔಟ್ ಎಂದು ಅಂಪೈರ್ ತಪ್ಪು ನಿರ್ಧಾರ ನೀಡಿದ್ದಾರೆ ಎಂದು ಪಂದ್ಯದ ಬಳಿಕ ತಿಳಿದುಬಂದಿದೆ. ಸದ್ಯ ರೋಹಿತ್ ಶರ್ಮಾ ವಿಕೆಟ್ ಪಡೆದ ವಿಡಿಯೋ ಹಾಗೂ ಫೋಟೋಗಳು ವೈರಲ್ ಆಗಿದ್ದು, ನೆಟ್ಟಿಗರು ಈ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ.

    MORE
    GALLERIES

  • 58

    Rohit Sharma: ಬರ್ತಡೇ ದಿನವೇ ರೋಹಿತ್​ ಶರ್ಮಾಗೆ ಮೋಸ, ಅಂಪೈರ್​ ಮೇಲೆ ಫ್ಯಾನ್ಸ್ ಆಕ್ರೋಶ!

    ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ಇಬ್ಬರೂ ಆರಂಭಿಕ ಬ್ಯಾಟ್ಸ್‌ಮನ್‌ಗಳಾಗಿ ಮೈದಾನಕ್ಕಿಳಿದರು. ಆದರೆ ಎರಡನೇ ಓವರ್‌ನಲ್ಲಿ ಸಂದೀಪ್ ಶರ್ಮಾ ಎಸೆದ ಕೊನೆಯ ಎಸೆತದಲ್ಲಿ ರೋಹಿತ್ ಔಟ್​ ಆದರು. ಅಂಪೈರ್ ಕೂಡ ಅವರನ್ನು ಔಟ್ ಎಂದು ತೀರ್ಪು ನೀಡಿದರು.

    MORE
    GALLERIES

  • 68

    Rohit Sharma: ಬರ್ತಡೇ ದಿನವೇ ರೋಹಿತ್​ ಶರ್ಮಾಗೆ ಮೋಸ, ಅಂಪೈರ್​ ಮೇಲೆ ಫ್ಯಾನ್ಸ್ ಆಕ್ರೋಶ!

    ಆದರೆ ಸಂದೀಪ್ ಶರ್ಮಾ ಎಸೆದ ಚೆಂಡು ನೇರವಾಗಿ ಸ್ಟಂಪ್‌ ತಗುಲಿರಲಿಲ್ಲ. ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಅವರ ಕೈಗವಸು ಟಚ್​ ಆದ ಕಾರಣ ಬೇಲ್ಸ್ ಕೇಳಗೆ ಬಿದ್ದವು. ಇದನ್ನು ಸರಿಯಾಗಿ ಗಮನಿಸದ ಅಂಪೈರ್​ ಔಟ್​ ಎಂದು ತೀರ್ಪು ನೀಡಿದರು.

    MORE
    GALLERIES

  • 78

    Rohit Sharma: ಬರ್ತಡೇ ದಿನವೇ ರೋಹಿತ್​ ಶರ್ಮಾಗೆ ಮೋಸ, ಅಂಪೈರ್​ ಮೇಲೆ ಫ್ಯಾನ್ಸ್ ಆಕ್ರೋಶ!

    ರೋಹಿತ್ ಶರ್ಮಾ ವಿಕೆಟ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿವಾದ ಎದ್ದಿದೆ. ಮುಂಬೈ ಇಂಡಿಯನ್ಸ್ ಮತ್ತು ರೋಹಿತ್ ಅಭಿಮಾನಿಗಳು ಅಂಪೈರ್ ತಪ್ಪು ನಿರ್ಧಾರ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರೋಹಿತ್ ನಾಟೌಟ್ ಆಗಿದ್ದರು. ಅವರಿಗೆ ಮೋಸವಾಗಿದೆ ಎಂದು ಹೇಳಲಾಗುತ್ತಿದೆ.

    MORE
    GALLERIES

  • 88

    Rohit Sharma: ಬರ್ತಡೇ ದಿನವೇ ರೋಹಿತ್​ ಶರ್ಮಾಗೆ ಮೋಸ, ಅಂಪೈರ್​ ಮೇಲೆ ಫ್ಯಾನ್ಸ್ ಆಕ್ರೋಶ!

    ರೋಹಿತ್​ ಅವರ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಹೈದರಾಬಾದ್‌ನ ಆರ್‌ಟಿಸಿ ಕ್ರಾಸ್ ರೋಡ್ ಪ್ರದೇಶದಲ್ಲಿ 60 ಅಡಿ ಬೃಹತ್ ಕಟೌಟ್ ಸ್ಥಾಪಿಸಲಿದ್ದಾರೆ. ಭಾರತದಲ್ಲಿ ಕ್ರಿಕೆಟಿಗನಿಗೆ ಇಷ್ಟೊಂದು ಬೃಹತ್ ಕಟೌಟ್ ಹಾಕಿರುವುದು ಇದೇ ಮೊದಲು. ODI ವಿಶ್ವಕಪ್ 2019 ಪಂದ್ಯಾವಳಿಯಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಶತಕ ಗಳಿಸಿದ ವೇಳೆಯ ಫೋಟೋವನ್ನು ಬೃಹತ್ ಕಟೌಟ್ ಮಾಡಿ ಹಾಕಲಾಗಿದೆ.

    MORE
    GALLERIES