ಬಾಂಗ್ಲಾದೇಶ ವಿರುದ್ಧದ ಎರಡನೇ ಏಕದಿನ ಪಂದ್ಯವನ್ನು ಸೋತ ಭಾರತ ಸರಣಿಯನ್ನು ಕಳೆದುಕೊಂಡಿದೆ. ಆದರೆ, ರೋಹಿತ್ ಶರ್ಮಾ ತಮ್ಮ ಗಾಯದ ನಡುವೆಯೂ ಹೋರಾಟ ನಡಿಸಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಫೀಲ್ಡಿಂಗ್ ಮಾಡುವಾಗ ಬೆರಳಿಗೆ ಗಾಯವಾಗಿತ್ತು. ಇದರ ಹೊರತಾಗಿಯೂ ಬ್ಯಾಂಡೇಜ್ ಕಟ್ಟಿಕೊಂಡು 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿದು ತಂಡವನ್ನು ಗೆಲುವಿನ ಸಮೀಪಕ್ಕೆ ತಂದರು. ಆದರೆ, ಭಾರತವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ರೋಹಿತ್ ಅಜೇಯ 51 ರನ್ ಗಳಿಸಿದರು.