Rishabh Pant: ಹೆಚ್ಚಿನ ಚಿಕಿತ್ಸೆಗಾಗಿ ರಿಷಭ್ ಪಂತ್ ಮುಂಬೈಗೆ ಶಿಫ್ಟ್, ಅಭಿಮಾನಿಗಳಲ್ಲಿ ಹೆಚ್ಚಿದ ಆತಂಕ
Rishabh Pant: ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆಯ (ಡಿಡಿಸಿಎ) ನಿರ್ದೇಶಕರು ಇಂದು ರಿಷಭ್ ಪಂತ್ ಅವರಿಗೆ ಹೆಚ್ಚಿನ ಚಿಕಿತ್ಸೆಯ ಸಲುವಾಗಿ ಏರ್ಲಿಫ್ಟ್ ಮೂಲಕ ಮುಂಬೈ ಆಸ್ಪತ್ರೆಗೆ ದಾಖಲಿಸುವ ಸಾಧ್ಯತೆ ಇದೆ ಎಂದಿದ್ದಾರೆ.
ಟೀಂ ಇಂಡಿಯಾ ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ (Rishabh Pant) ಶುಕ್ರವಾರ ಡಿಸೆಂಬರ್ 30 2023ರಂದು ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದರು. ಅವರನ್ನು ಡೆಹ್ರಾಡೂನ್ನ (Dehradun) ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇದೀಗ ಅವರನ್ನು ಮತ್ತೆ ಸ್ಥಾಳಾಂತರಿಸುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
2/ 8
ಉತ್ತಮ ಚಿಕಿತ್ಸೆಗಾಗಿ ರಿಷಭ್ ಪಂತ್ ಅವರನ್ನು ವಿಮಾನದಲ್ಲಿ ಮುಂಬೈಗೆ ಕರೆದೊಯ್ಯಲಾಗುವುದು ಎಂದು ಡಿಡಿಸಿಎ ಹೇಳಿದೆ. ದೆಹಲಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಪರವಾಗಿ ನಿರ್ದೇಶಕ ಶ್ಯಾಮ್ ಶರ್ಮಾ ಸುದ್ದಿ ಸಂಸ್ಥೆ ANI ಗೆ ಮಾಹಿತಿ ನೀಡಿದ್ದಾರೆ.
3/ 8
ಇನ್ನು, ರಿಷಭ್ ಪಂತ್ ಅವರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮುಂಬೈಗೆ ಶಿಫ್ಟ್ ಮಾಡಲಾಗುತ್ತಿದ್ದು, ಅಲ್ಲಿ ಪಂತ್ ಅವರಿಗೆ MRI ಸ್ಕ್ಯಾನ್ ಮತ್ತು ಹೆಚ್ಚಿನ ಚಿಕಿತ್ಸೆ ನೀಡಲು ಏರ್ಲಿಫ್ಟ್ ಮೂಲಕ ಸ್ಥಳಾಂತರಿಸಲಾಗುವುದು ಎಂದು ತಿಳಿದುಬಂದಿದೆ.
4/ 8
ಹಾಗಿದ್ದರೆ ರಿಷಭ್ ಪಂತ್ ಆರೋಗ್ಯದ ಮೇಲೆ ಅವರ ಅಭಿಮಾನಿಗಳಲ್ಲಿ ಆತಂಕ ಹೆಚ್ಚಿದೆ. ಆದರೆ ಪಂತ್ ಇದೀಗ ಚೇತರಿಸಿಕೊಳ್ಳುತ್ತಿದ್ದು, ಅವರ ಅಭಿಮಾನಿಗಳು ಯಾವುದೇ ಆತಂಕಗೊಳ್ಳುವ ಅವಶ್ಯಕತೆ ಇಲ್ಲ. ಅವರನ್ನು ಐಸಿಯು ಇಂದ ವಾರ್ಡಿಗೆ ಶಿಫ್ಟ ಆದ ಬಳಿಕ ಕೆಲ ಹೆಚ್ಚಿನ ಚಿಕಿತ್ಸೆಗಾಗಿ ಮಾತ್ರ ಶಿಫ್ಟ್ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ.
5/ 8
25 ವರ್ಷದ ಪಂತ್ ದೇಶೀಯ ಕ್ರಿಕೆಟ್ನಲ್ಲಿ ದೆಹಲಿಯನ್ನು ಪ್ರತಿನಿಧಿಸುತ್ತಿದ್ದಾರೆ. ಡೆಹ್ರಾಡೂನ್ನಿಂದ ಪಂತ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿಮಾನದಲ್ಲಿ (Airlifted )ತರಲು ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ (DDCA) ಸಿದ್ಧತೆ ನಡೆಸಿದೆ.
6/ 8
ರಿಷಬ್ ಪಂತ್ ಶುಕ್ರವಾರ (ಡಿಸೆಂಬರ್ 30) ದೆಹಲಿಯಿಂದ ರಸ್ತೆ ಮೂಲಕ ತನ್ನ ಮನೆ ರೂರ್ಕಿಗೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದ್ದು, ಅವರು ತಮ್ಮದೇ ಆದ ಮರ್ಸಿಡಿಸ್ ಬೆಂಜ್ ಕಾರನ್ನು ಚಲಾಯಿಸುತ್ತಿದ್ದರು. ನಿದ್ರೆಯ ಕಾರಣ, ಅವರ ಕಾರಿನ ಬ್ಯಾಲೆನ್ಸ್ ತಪ್ಪಿದ್ದು ಕಾರು ಡಿವೈಡರ್ಗೆ ಡಿಕ್ಕಿ ಹೊಡೆದಿದೆ.
7/ 8
ಇದಾದ ನಂತರ, ಪಂತ್ ಕಿಟಕಿ ಮುರಿದು ಹೊರಬರಲು ಪ್ರಯತ್ನಿಸಿದರು, ಅದರಲ್ಲಿ ಅವರ ಬಸ್ ಚಾಲಕ ಮತ್ತು ಕಂಡಕ್ಟರ್ ಸಹಾಯ ಪಡೆದರು. ಹೊಸ ವರ್ಷದ ಸಂದರ್ಭದಲ್ಲಿ ತನ್ನ ತಾಯಿಯನ್ನು ಭೇಟಿಯಾಗಲು ಪಂತ್ ಬರುತ್ತಿದ್ದರು ಎಂದು ಹೇಳಲಾಗಿತ್ತು.
8/ 8
ಹರಿಯಾಣ ರಾಜ್ಯ ಸಾರಿಗೆ ಸಂಸ್ಥೆ ಇದೀಗ ಪಂತ್ ಜೀವ ಉಳಿಸಿದ ಕಂಡೆಕ್ಟರ್ ಮತ್ತು ಚಾಲಕನಿಗೆ ಸನ್ಮಾನ ಮಾಡಿದೆ. ರಿಷಭ್ ಪಂತ್ ಅಪಘಾತವಾದ ಕಾರಿನಿಂದ ಹೊರಬರಲು ಸಹಾಯ ಮಾಡಿದ್ದಕ್ಕಾಗಿ ಹರಿಯಾಣ ರಾಜ್ಯ ಸಾರಿಗೆ ನಿಗಮದ ಚಾಲಕ ಸುಶೀಲ್ ಕುಮಾರ್ ಮತ್ತು ಕಂಡಕ್ಟರ್ ಪರಮ್ಜೀತ್ ಅವರನ್ನು ಗೌರವಿಸಿದೆ.