Rishabh Pant: ಟೀಂ ಇಂಡಿಯಾಗೆ ಬಿಗ್​ ಶಾಕ್​, ಏಕದಿನ ವಿಶ್ವಕಪ್​ನಿಂದ ರಿಷಭ್​ ಪಂತ್​ ಔಟ್​!

Rishabh Pant: ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್​ ಪಂತ್ ಅವರಿಂದ ಪ್ರಮುಖ ಅಪ್‌ಡೇಟ್ ಹೊರಬಂದಿದೆ. ರಸ್ತೆ ಅಪಘಾತದಲ್ಲಿ ಗಾಯಗೊಂಡ ನಂತರ ಕ್ರಿಕೆಟ್​ನಿಂದ ದೂರವಿರುವ ಪಂತ್ ಪ್ರಸ್ತುತ ಬೆಂಗಳೂರಿನಲ್ಲಿದ್ದು, ಎನ್​ಸಿಎ ಅಲ್ಲಿ ಇದ್ದಾರೆ.

First published:

  • 18

    Rishabh Pant: ಟೀಂ ಇಂಡಿಯಾಗೆ ಬಿಗ್​ ಶಾಕ್​, ಏಕದಿನ ವಿಶ್ವಕಪ್​ನಿಂದ ರಿಷಭ್​ ಪಂತ್​ ಔಟ್​!

    2023ರ ವರ್ಷದಲ್ಲಿ ಟೀಂ ಇಂಡಿಯಾದ ಹಲವು ಆಟಗಾರರು ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರಗುಳಿದಿದ್ದಾರೆ. ಈ ವರ್ಷ ರೋಹಿತ್ ಶರ್ಮಾ ತಂಡಕ್ಕೆ 2 ಐಸಿಸಿ ಟ್ರೋಫಿ ಗೆಲ್ಲುವ ಅವಕಾಶವಿದೆ. ಜೂನ್‌ನಲ್ಲಿ ಭಾರತವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಬೇಕಾಗಿದೆ.

    MORE
    GALLERIES

  • 28

    Rishabh Pant: ಟೀಂ ಇಂಡಿಯಾಗೆ ಬಿಗ್​ ಶಾಕ್​, ಏಕದಿನ ವಿಶ್ವಕಪ್​ನಿಂದ ರಿಷಭ್​ ಪಂತ್​ ಔಟ್​!

    ಇದಲ್ಲದೇ ಅಕ್ಟೋಬರ್-ನವೆಂಬರ್‌ನಲ್ಲಿ ಏಕದಿನ ವಿಶ್ವಕಪ್ ತವರಿನಲ್ಲಿ ನಡೆಯಲಿದೆ. ಇದೀಗ ವಿಕೆಟ್ ಕೀಪರ್ ಬ್ಯಾಟ್ಸ್​​ಮನ್ ರಿಷಭ್​ ಪಂತ್ ಚೇತರಿಸಿಕೊಳ್ಳಲು ಹೆಚ್ಚಿನ ಸಮಯ ಹಿಡಿಯಲಿದ್ದು, ಏಕದಿನ ವಿಶ್ವಕಪ್ ನಲ್ಲಿ ಆಡಲು ಸಾಧ್ಯವಿಲ್ಲ ಎಂದು ಬಿಸಿಸಿಐ ಮೂಲಗಳಿಂದ ವರದಿಯಾಗಿದೆ.

    MORE
    GALLERIES

  • 38

    Rishabh Pant: ಟೀಂ ಇಂಡಿಯಾಗೆ ಬಿಗ್​ ಶಾಕ್​, ಏಕದಿನ ವಿಶ್ವಕಪ್​ನಿಂದ ರಿಷಭ್​ ಪಂತ್​ ಔಟ್​!

    ಮೂಲಗಳ ವರದಿಯ ಪ್ರಕಾರ, ಜನವರಿ 2024ರ ಮೊದಲು ಅವರ ವಾಪಸಾತಿ ಸಾಧ್ಯವಿಲ್ಲ ಎನ್ನಲಾಗಿದೆ. ಕಳೆದ ವರ್ಷದ ಕೊನೆಯಲ್ಲಿ, ಅವರು ಭೀಕರ ಕಾರು ಅಪಘಾತಕ್ಕೆ ಒಳಗಾಗಿದ್ದರು. ಇದರ ನಂತರ, ಅವರು ಆಪರೇಷನ್​ಗೆ ಒಳಗಾಗಿದ್ದರು. ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಏಕದಿನ ಏಷ್ಯಾಕಪ್‌ನಲ್ಲಿಯೂ ಪಂತ್ ಭಾಗವಹಿಸಲು ಸಾಧ್ಯವಿಲ್ಲ.

    MORE
    GALLERIES

  • 48

    Rishabh Pant: ಟೀಂ ಇಂಡಿಯಾಗೆ ಬಿಗ್​ ಶಾಕ್​, ಏಕದಿನ ವಿಶ್ವಕಪ್​ನಿಂದ ರಿಷಭ್​ ಪಂತ್​ ಔಟ್​!

    ಹೀಗಾಗಿ ರಿಷಭ್​ ಪಂತ್​ ಏಕದಿನ ವಿಶ್ವಕಪ್​ ಮತ್ತು ಏಷ್ಯಾಕಪ್​ 2023ರಿಂದ ಹೊರಗುಳಿಯಲಿದ್ದಾರೆ. ಇಶಾನ್ ಕಿಶನ್ ಮತ್ತು ಸಂಜು ಸ್ಯಾಮ್ಸನ್ ವಿಕೆಟ್ ಕೀಪರ್‌ಗಳಾಗಿ ವಿಶ್ವಕಪ್‌ಗಾಗಿ ಭಾರತ ತಂಡದಲ್ಲಿ ಸ್ಥಾನ ಪಡೆಯಬಹುದು. ಆದರೆ, ಪಂತ್ ಗಾಯದ ಬಗ್ಗೆ ಬಿಸಿಸಿಐನಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.

    MORE
    GALLERIES

  • 58

    Rishabh Pant: ಟೀಂ ಇಂಡಿಯಾಗೆ ಬಿಗ್​ ಶಾಕ್​, ಏಕದಿನ ವಿಶ್ವಕಪ್​ನಿಂದ ರಿಷಭ್​ ಪಂತ್​ ಔಟ್​!

    ರಿಹ್ಯಾಬ್‌ಗಾಗಿ ಎನ್‌ಸಿಎಗೆ ಈಗಾಗಲೇ ರಿಷಭ್​ ಪಂತ್ ಸೇರಿಕೊಂಡಿದ್ದಾರೆ. ಹೀಗಾಗಿ ಎನ್​ಸಿಎಯಿಂದ ನಿಖರವಾದ ಮಾಹಿತಿ ಲಭ್ಯವಾಗುತ್ತದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಕುರಿತು ಮಾತನಾಡುತ್ತಾ, ಕೆಎಸ್ ಭರತ್ ಮಾತ್ರ ವಿಕೆಟ್ ಕೀಪರ್ ಆಗಿ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಇದರ ಹೊಣೆಯನ್ನು ಕೆಎಲ್ ರಾಹುಲ್ ಕೂಡ ಪಡೆಯಬಹುದು. ರಾಹುಲ್ ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲೂ ವಿಕೆಟ್ ಕೀಪಿಂಗ್ ಮಾಡುತ್ತಿದ್ದಾರೆ.

    MORE
    GALLERIES

  • 68

    Rishabh Pant: ಟೀಂ ಇಂಡಿಯಾಗೆ ಬಿಗ್​ ಶಾಕ್​, ಏಕದಿನ ವಿಶ್ವಕಪ್​ನಿಂದ ರಿಷಭ್​ ಪಂತ್​ ಔಟ್​!

    ಈ ಹಿಂದೆ ಜಸ್ಪ್ರೀತ್ ಬುಮ್ರಾ ಮತ್ತು ಶ್ರೇಯಸ್ ಅಯ್ಯರ್ ಕೂಡ ಗಾಯದ ಸಮಸ್ಯೆಯಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಸರಿಯುತ್ತಿದ್ದಾರೆ. IPL 2023 ರಲ್ಲಿ ಉತ್ತಮ ಪ್ರದರ್ಶನ ನೀಡುವ ವಿಕೆಟ್ ಕೀಪರ್‌ಗಳನ್ನು ಮೊದಲ ಏಷ್ಯಾ ಕಪ್‌ಗೆ ಆಯ್ಕೆ ಮಾಡಬಹುದು. ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಬಗ್ಗೆ ಮಾತನಾಡುತ್ತಾ, ಅವರು ಇಲ್ಲಿಯವರೆಗೆ 7 ಇನ್ನಿಂಗ್ಸ್‌ಗಳಲ್ಲಿ 26 ಸರಾಸರಿಯಲ್ಲಿ 181 ರನ್ ಗಳಿಸಿದ್ದಾರೆ.

    MORE
    GALLERIES

  • 78

    Rishabh Pant: ಟೀಂ ಇಂಡಿಯಾಗೆ ಬಿಗ್​ ಶಾಕ್​, ಏಕದಿನ ವಿಶ್ವಕಪ್​ನಿಂದ ರಿಷಭ್​ ಪಂತ್​ ಔಟ್​!

    ಮುಂಬೈ ಇಂಡಿಯನ್ಸ್‌ನಲ್ಲಿ ಆಡುತ್ತಿರುವ ಇಶಾನ್ ಕಿಶನ್ ಅವರ ಪ್ರದರ್ಶನ ನೋಡುವುದಾದರೆ, ಐಪಿಎಲ್ 2023 ರಲ್ಲಿ ಅವರು 7 ಇನ್ನಿಂಗ್ಸ್‌ಗಳಲ್ಲಿ 26 ಸರಾಸರಿಯಲ್ಲಿ 183 ರನ್ ಗಳಿಸಿದ್ದಾರೆ. ಸ್ಟ್ರೈಕ್ ರೇಟ್ 130 ಆಗಿದ್ದು, ಅರ್ಧಶತಕವನ್ನೂ ಗಳಿಸಿದ್ದಾರೆ. 24ರ ಹರೆಯದ ಇಶಾನ್ ಕಿಶನ್ ಕೂಡ ಏಕದಿನ ಕ್ರಿಕೆಟ್ ನಲ್ಲಿ ದ್ವಿಶತಕ ಸಿಡಿಸಿದ್ದಾರೆ. ಹೀಗಾಗಿ ಇವರಿಬ್ಬರೂ ಪಂತ್​ ಬದಲಿಗೆ ಸಿಗುವ ಸಾಧ್ಯತೆ ಇದೆ.

    MORE
    GALLERIES

  • 88

    Rishabh Pant: ಟೀಂ ಇಂಡಿಯಾಗೆ ಬಿಗ್​ ಶಾಕ್​, ಏಕದಿನ ವಿಶ್ವಕಪ್​ನಿಂದ ರಿಷಭ್​ ಪಂತ್​ ಔಟ್​!

    2022 ಡಿಸೆಂಬರ್ 30 ರಂದು ಮುಂಜಾನೆ ದಿಲ್ಲಿಯಿಂದ ಡೆಹ್ರಾಡೂನ್ ರಾಷ್ಟ್ರೀಯ ಹೆದ್ದಾರಿಯಲ್ಲಿ ರಿಷಭ್‌ ಪಂತ್ ಚಲಾಯಿಸುತ್ತಿದ್ದ ಕಾರು ರಸ್ತೆಯ ವಿಭಜಕಕ್ಕೆ ಡಿಕ್ಕಿ ಹೊಡೆದಿತ್ತು. ಇದರಿಂದಾಗಿ ಬೆಂಕಿ ಕಾಣಿಸಿಕೊಂಡು ಕಾರು ಸುಟ್ಟು ಕರಕಲಾಗಿತ್ತು. ಈ ವೇಳೆ ಪಂತ್​ ಸಹ ಸಾಕಷ್ಟು ಗಂಭೀರವಾಗಿ ಗಾಯಗೊಂಡಿದ್ದರು.

    MORE
    GALLERIES